ETV Bharat / bharat

ಆನಂದಯ್ಯ ಕೊರೊನಾ ಮೆಡಿಸಿನ್​ಗೆ ಆಂಧ್ರ ಹೈಕೋರ್ಟ್​​ ಗ್ರೀನ್​ ಸಿಗ್ನಲ್​​

ಆನಂದಯ್ಯ ಕೊರೊನಾ ಮೆಡಿಸಿನ್ ತೀರ್ಪು ಸಕಾರಾತ್ಮಕವಾಗಿ ಬಂದಿದ್ದು, ನಾಳೆಯಿಂದಲೇ ಔಷಧ ವಿತರಿಸಲು ರಾಜ್ಯ ಸರ್ಕಾರ ಸಿದ್ದತೆ ಮಾಡಿಕೊಂಡಿದೆ. ಇದಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

author img

By

Published : May 31, 2021, 4:15 PM IST

ಗ್ರೀನ್​ ಸಿಗ್ನಲ್​​
ಗ್ರೀನ್​ ಸಿಗ್ನಲ್​​

ಆಂಧ್ರಪ್ರದೇಶ: ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂನಲ್ಲಿ ಆನಂದಯ್ಯ ಆಯುರ್ವೇದ ಔಷಧ ವಿತರಣೆಗೆ ಎಪಿ ಹೈಕೋರ್ಟ್‌ ಗ್ರೀನ್​ ಸಿಗ್ನಲ್​ ನೀಡಿದೆ.

ರಾಷ್ಟ್ರೀಯ ಆಯುರ್ವೇದ ಸಂಶೋಧನಾ ಸಂಸ್ಥೆ (ಸಿಸಿಆರ್‌ಎಎಸ್) ಸಮಿತಿಯ ವರದಿಯ ಪ್ರಕಾರ ಆಂಧ್ರಪ್ರದೇಶ ಸರ್ಕಾರ ಔಷಧಕ್ಕೆ ಗ್ರೀನ್​ ಸಿಗ್ನಲ್​ ನೀಡಿತ್ತು. ಆದರೆ, ಹೈಕೋರ್ಟ್​ನಲ್ಲಿ ವಿಚಾರಣೆ ಬಾಕಿ ಇತ್ತು. ಇಂದು ಹೈ ಕೋರ್ಟ್​​ ಕೂಡ ಗ್ರೀನ್​ ಸಿಗ್ನಲ್​ ನೀಡಿದೆ.

ತೀರ್ಪು ಸಕಾರಾತ್ಮಕವಾಗಿ ಬಂದಿದ್ದು, ನಾಳೆಯಿಂದಲೇ ಔಷಧ ವಿತರಿಸಲು ರಾಜ್ಯ ಸರ್ಕಾರ ಸಿದ್ದತೆ ಮಾಡಿಕೊಂಡಿದೆ. ಇದಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

'ಕೆ' ಔಷಧಿಗೆ ತಡೆ

ಆನಂದಯ್ಯ ಕಣ್ಣಿಗೆ ಹಾಕುವ ಔಷಧವನ್ನು ಹೊರತುಪಡಿಸಿ ಉಳಿದ ಔಷಧಿಗಳನ್ನು ಅನುಮೋದಿಸಿದೆ. ಕಣ್ಣಿಗೆ ಹಾಕುವ ಡ್ರಾಪ್ಸ್​​ ಬಗ್ಗೆ ಸಂಪೂರ್ಣ ವರದಿ ಬರಬೇಕಿದೆ, ಇದು ಬರಲು ಇನ್ನೂ 2-3 ವಾರಗಳ ಸಮಯ ಬೇಕಾಗಿದೆ ಎಂದು ಇಲ್ಲಿನ ಸರ್ಕಾರ ಹೇಳಿದೆ.

ಆನಂದಯ್ಯ ಕಣ್ಣಿಗೆ ಹಾಕುವ 'ಕೆ' ಎಂಬ ಔಷಧವನ್ನು ಕಮಿಟಿ ಮುಂದಿಟ್ಟಿದ್ದರು, ಆದರೆ ಸಿಸಿಆರ್​ಏಎಸ್​ ಇದಕ್ಕೆ ನಿರಾಕರಿಸಿದೆ. 'ಕೆ' ಔಷಧ ಬಳಸಿದರೆ ಕೊರೊನಾ ಕಡಿಮೆಯಾಗುತ್ತದೆ ಎಂಬ ಯಾವುದೇ ತೀರ್ಮಾನಗಳಿಲ್ಲ ಎಂದು ವರದಿಗಳು ಹೇಳುತ್ತಿವೆ. ಇನ್ನೂ ಆನಂದಯ್ಯ ನೀಡಿದ ಪಿ,ಎಲ್,ಎಫ್ ಔಷಧಗಳನ್ನು ಈ ಕ್ರಮದಲ್ಲಿ ಬಳಸಬಹುದು ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.