ETV Bharat / bharat

ಪ್ರಕರಣ ರದ್ದತಿ ಕೋರಿ ಚಂದ್ರಬಾಬು ನಾಯ್ಡು ಅರ್ಜಿ: ವಿಚಾರಣೆ ಮುಂದೂಡಿದ ಹೈಕೋರ್ಟ್​ - ಮಾಜಿ ಸಿಎಂ ಚಂದ್ರಬಾಬು ನಾಯ್ಡು

ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಹೈಕೋರ್ಟ್​ನಲ್ಲಿ ನಡೆಯಿತು. ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್​ 19ಕ್ಕೆ ಮುಂದೂಡಲಾಗಿದೆ.

andhra-pradesh-hearing-on-chandrababu-quash-petition-in-high-court-adjourned-to-september-19
ಪ್ರಕರಣ ರದ್ದತಿ ಕೋರಿ ಚಂದ್ರಬಾಬು ನಾಯ್ಡು ಅರ್ಜಿ : ವಿಚಾರಣೆ ಮುಂದೂಡಿದ ಹೈಕೋರ್ಟ್​
author img

By ETV Bharat Karnataka Team

Published : Sep 13, 2023, 3:47 PM IST

ಅಮರಾವತಿ (ಆಂಧ್ರಪ್ರದೇಶ) : ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಹೈಕೋರ್ಟ್​ನಲ್ಲಿ ಬುಧವಾರ​ ನಡೆಯಿತು. ಕೌಶಲ್ಯಾಭಿವೃದ್ಧಿ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ದಾಖಲಿಸಿರುವ ಪ್ರಕರಣ ಮತ್ತು ಎಸಿಬಿ ನ್ಯಾಯಾಲಯ ವಿಧಿಸಿರುವ ನ್ಯಾಯಾಂಗ ಬಂಧನವನ್ನು ರದ್ದುಪಡಿಸುವಂತೆ ನಾಯ್ಡು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ಸಂಬಂಧ ಚಂದ್ರಬಾಬು ನಾಯ್ಡು ಅವರ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಲು ಸಿಐಡಿ ಹೈಕೋರ್ಟ್​ನಲ್ಲಿ ಕಾಲಾವಕಾಶ ಕೇಳಿದೆ. ಇದಕ್ಕೆ ನ್ಯಾಯಾಲಯವು ಸೆಪ್ಟೆಂಬರ್​ 18ರ ವರೆಗೆ ವರದಿ ಸಲ್ಲಿಸಲು ಗಡುವು ನೀಡಿದೆ. ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್​ 19 ಮುಂದೂಡಿಕೆ ಮಾಡಿದೆ. ಅಲ್ಲಿಯವರೆಗೆ ಎಸಿಬಿ ನ್ಯಾಯಾಲಯಕ್ಕೆ ಸಿಐಡಿ ಸಲ್ಲಿಸಿರುವ ನ್ಯಾಯಾಂಗ ಬಂಧನದ ಅರ್ಜಿಯನ್ನು ವಿಚಾರಣೆ ನಡೆಸದಂತೆ ಹೈಕೋರ್ಟ್​ ಆದೇಶಿಸಿದೆ.

ಇದಕ್ಕೂ ಮುನ್ನ ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು ಅವರನ್ನು 5 ದಿನಗಳ ನ್ಯಾಯಾಂಗ ಬಂಧನ ಕೋರಿ ವಿಜಯವಾಡ ಎಸಿಬಿ ನ್ಯಾಯಾಲಯದಲ್ಲಿ ಸಿಐಡಿ ಅರ್ಜಿ ಸಲ್ಲಿಸಿತ್ತು. ಬಂಧನವನ್ನು ಖಂಡಿಸಿ ರಾಜ್ಯಾದ್ಯಂತ ತೆಲುಗು ದೇಶಂ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಇನ್ನರ್​ ರಿಂಗ್​ ರೋಡ್​ ಪ್ರಕರಣ : ಚಂದ್ರಬಾಬು ನಾಯ್ಡು ವಿರುದ್ಧ ದಾಖಲಾಗಿದ್ದ ರಾಜಧಾನಿಯ ಇನ್ನರ್​ ರಿಂಗ್​ ರೋಡ್ ಪ್ರಕರಣದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು, ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್​ 19ಕ್ಕೆ ಮುಂದೂಡಿತು. ಈ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ನಾಯ್ಡು ಪರ ವಕೀಲರು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಸಂಬಂಧ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಲು ಸಿಐಡಿ ಕಾಲಾವಕಾಶ ಕೇಳಿದ್ದು, ನ್ಯಾಯಾಲಯವು ಪ್ರಕರಣ ವಿಚಾರಣೆಯನ್ನು ಸೆಪ್ಟೆಂಬರ್​ 19ಕ್ಕೆ ಮುಂದೂಡಿಕೆ ಮಾಡಿದೆ.

ಚಂದ್ರಬಾಬು ಗೃಹ ಬಂಧನ ಅರ್ಜಿ ತಿರಸ್ಕರಿಸಿ ಎಸಿಬಿ ಕೋರ್ಟ್​ : ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಗೃಹ ಬಂಧನ ಅರ್ಜಿಯನ್ನು ವಿಜಯವಾಡ ಎಸಿಬಿ ಕೋರ್ಟ್ ಮಂಗಳವಾರ​ ವಜಾಗೊಳಿಸಿತ್ತು. ಚಂದ್ರಬಾಬು ಪರ ವಕೀಲರು ಸಲ್ಲಿಸಿದ್ದ ಅರ್ಜಿಗಳ ಕುರಿತು ಎರಡು ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತ್ತು.

ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಚಂದ್ರಬಾಬು ನಾಯ್ಡು ಅವರನ್ನು ಗೃಹಬಂಧನದಲ್ಲಿರಿಸಲು ಅನುಮತಿ ಕೋರಿ ಮಾಜಿ ಸಿಎಂ ಪರ ವಕೀಲರು ಸೋಮವಾರ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಎಸಿಬಿ ವಿಶೇಷ ನ್ಯಾಯಾಲಯ ವಜಾಗೊಳಿಸಿ ಮಂಗಳವಾರ ತೀರ್ಪು ನೀಡಿತ್ತು. ಚಂದ್ರಬಾಬು ನಾಯ್ಡು ಪರ ವಕೀಲ ಸಿದ್ಧಾರ್ಥ್​ ಲೂತ್ರಾ ಭದ್ರತೆ ದೃಷ್ಟಿಯಿಂದ ಗೃಹಬಂಧನಕ್ಕೆ ಅನುಮತಿ ನೀಡಬೇಕು ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಎರಡೂ ಕಡೆಯ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು, ಚಂದ್ರ ಬಾಬು ಅವರ ಆರೋಗ್ಯ ಉತ್ತಮವಾಗಿದೆ. ಜೈಲಿನಲ್ಲಿ ಸಂಪೂರ್ಣ ಭದ್ರತೆ ಒದಗಿಸಲಾಗಿದೆ ಎಂದು ಹೇಳಿತ್ತು.

ಇದನ್ನೂ ಓದಿ : ಚಂದ್ರಬಾಬು ನಾಯ್ಡು ಗೃಹಬಂಧನ ಅರ್ಜಿ ತಿರಸ್ಕರಿಸಿದ ಎಸಿಬಿ ಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.