ಆಂಧ್ರಪ್ರದೇಶ : ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಅವರು ಇಂದು ತಮ್ಮ ಕ್ಯಾಂಪ್ ಕಚೇರಿಯಲ್ಲಿ ವರ್ಚುವಲ್ ಮೂಲಕ ಅಧಿಕೃತವಾಗಿ ರಾಜ್ಯದ 13 ಹೊಸ ಜಿಲ್ಲೆಗಳಿಗೆ ಚಾಲನೆ ನೀಡಿದರು. ಇದರೊಂದಿಗೆ ಆಂಧ್ರಪ್ರದೇಶ ರಾಜ್ಯವು ಒಟ್ಟು 26 ಜಿಲ್ಲೆಗಳನ್ನು ಹೊಂದಿದ್ದು, ಕಂದಾಯ ವಿಭಾಗಗಳು 72ಕ್ಕೆ ಏರಿದೆ.
ಹೊಸ ಜಿಲ್ಲೆಗಳ ರಚನೆ ಮತ್ತು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಪುನರ್ ರಚಿಸಿ ರಾಜ್ಯ ಸರ್ಕಾರ ಶನಿವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಸರ್ಕಾರವು ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ವಿಭಾಗೀಯ ಕಂದಾಯ ಅಧಿಕಾರಿಗಳು ಮತ್ತು ಇತರೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಹೊಸದಾಗಿ ರಚಿಸಲಾದ 13 ಜಿಲ್ಲೆಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ.
![ಆಂಧ್ರಪ್ರದೇಶದ ನಕ್ಷೆ](https://etvbharatimages.akamaized.net/etvbharat/prod-images/map-with-english_0404newsroom_1649048479_92.jpg)
ಜನಸಂಖ್ಯೆಯಲ್ಲಿ ನೆಲ್ಲೂರು ಜಿಲ್ಲೆ ಮೊದಲ ಸ್ಥಾನದಲ್ಲಿದೆ. ವಿಸ್ತೀರ್ಣದಲ್ಲಿ ಪ್ರಕಾಶಂ ಜಿಲ್ಲೆ ರಾಜ್ಯದಲ್ಲಿಯೇ ಅತಿ ದೊಡ್ಡ ಜಿಲ್ಲೆಯಾಗಿದೆ. ಇದು 14,322 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ.
ಹೊಸದಾಗಿ ರಚನೆಯಾದ ಜಿಲ್ಲೆಗಳು ಮತ್ತು ಅವುಗಳ ಕೇಂದ್ರ ಕಚೇರಿಗಳು ಇಂತಿವೆ:
- ಶ್ರೀ ಬಾಲಾಜಿ ಜಿಲ್ಲೆ - ತಿರುಪತಿ
- ಅನ್ನಮಯ್ಯ ಜಿಲ್ಲೆ - ರಾಯಚೋಟಿ
- ಶ್ರೀ ಸತ್ಯಸಾಯಿ ಜಿಲ್ಲೆ - ಪುಟ್ಟಪರ್ತಿ
- ನಂದ್ಯಾಲ ಜಿಲ್ಲೆ - ನಂದ್ಯಾಲ
- ಬಾಪಟ್ಲ ಜಿಲ್ಲೆ - ಬಾಪಟ್ಲ
- ಪಲ್ನಾಡು ಜಿಲ್ಲೆ- ನರಸರಾವ್ ಪೇಟ
- ಏಲೂರು ಜಿಲ್ಲೆ- ಏಲೂರು
- ಎನ್ಟಿಆರ್ ಜಿಲ್ಲೆ - ವಿಜಯವಾಡ
- ಅನಕಾಪಲ್ಲಿ ಜಿಲ್ಲೆ- ಅನಕಾಪಲ್ಲಿ
- ಕಾಕಿನಾಡ ಜಿಲ್ಲೆ- ಕಾಕಿನಾಡ
- ಕೋನ ಸೀಮಾ ಜಿಲ್ಲೆ- ಅಮಲಾಪುರಂ
- ಮಾನ್ಯಂ ಜಿಲ್ಲೆ - ಪಾರ್ವತಿಪುರಂ
- ಅಲ್ಲೂರಿ ಸೀತಾರಾಮ ರಾಜು ಜಿಲ್ಲೆ- ಪದೇರು
ಇದನ್ನೂ ಓದಿ; ಆಂಧ್ರಪ್ರದೇಶದಲ್ಲಿ ಹೊಸದಾಗಿ 13 ಜಿಲ್ಲೆಗಳ ರಚನೆ, ಒಟ್ಟು ಜಿಲ್ಲೆಗಳ ಸಂಖ್ಯೆ 26ಕ್ಕೆ ಏರಿಕೆ