ETV Bharat / bharat

Smoking Inside Flight: ವಿಮಾನದೊಳಗೇ ಧೂಮಪಾನ, ಚೆನ್ನೈನಲ್ಲಿ ಆಂಧ್ರದ ಪ್ರಯಾಣಿಕ ಅರೆಸ್ಟ್​

author img

By

Published : Nov 11, 2021, 4:51 PM IST

137 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ವಿಮಾನದೊಳಗೆ ಧೂಮಪಾನ ಮಾಡಿದ್ದಕ್ಕಾಗಿ ವ್ಯಕ್ತಿಯೋರ್ವನನ್ನು ಚೆನ್ನೈ ವಿಮಾನ ನಿಲ್ದಾಣ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Smoking Inside Flight
Smoking Inside Flight

ಚೆನ್ನೈ (ತಮಿಳುನಾಡು): ವಿಮಾನದೊಳಗೆ ಧೂಮಪಾನ (Smoking Inside Flight) ಮಾಡಿದ್ದಕ್ಕಾಗಿ ಆಂಧ್ರಪ್ರದೇಶ ಮೂಲದ ಮಹಮ್ಮದ್ ಶರೀಫ್ (57) ಎಂಬ ವ್ಯಕ್ತಿಯನ್ನು ಚೆನ್ನೈ ವಿಮಾನ ನಿಲ್ದಾಣ ಪೊಲೀಸರು (Chennai Airport Police) ಬಂಧಿಸಿದ್ದಾರೆ.

ಬಟ್ಟೆಯೊಳಗೆ ಸಿಗರೇಟ್ ಪ್ಯಾಕ್ ಅನ್ನು ಬಚ್ಚಿಟ್ಟುಕೊಂಡು ಕುವೈತ್‌ನಿಂದ ಚೆನ್ನೈಗೆ ಹೊರಟಿದ್ದ ಇಂಡಿಗೋ ಏರ್‌ಲೈನ್ಸ್‌ (Indigo Airlines) ಹತ್ತಿದ್ದ ಶರೀಫ್, ವಿಮಾನ ಟೇಕಾಫ್ ಆದ ನಂತರ ಸಿಗರೇಟ್​ ಸೇದಲು ಪ್ರಾರಂಭಿಸಿದ್ದಾನೆ. ಈ ವಿಮಾನದಲ್ಲಿ ಒಟ್ಟು 137 ಪ್ರಯಾಣಿಕರಿದ್ದರು. ಶರೀಫ್​ನನ್ನು ಕಂಡ ಇತರ ಪ್ರಯಾಣಿಕರು ಧೂಮಪಾನವನ್ನು ನಿಲ್ಲಿಸುವಂತೆ ಹೇಳಿ, ಗಗನಸಖಿಯರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಶಿಕ್ಷೆ ಪ್ರಕಟವಾಗ್ತಿದ್ದಂತೆ ತಲೆಮರೆಸಿಕೊಂಡಿದ್ದ ಅಪರಾಧಿ 14 ವರ್ಷಗಳ ನಂತರ ಬಂಧನ

ಆದರೆ ಆತ, ಗಗನಸಖಿಯರ ಹಾಗೂ ಇತರ ಸಿಬ್ಬಂದಿಯ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಸಿಗರೇಟ್​ ಸೇದುವುದನ್ನು ಮುಂದುವರೆಸಿದ್ದಲ್ಲದೇ ಅವರಿಗೆ ಬೆದರಿಕೆ ಹಾಕಿದ್ದಾನೆ. ಚೆನ್ನೈನಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ಭದ್ರತಾ ಅಧಿಕಾರಿಗಳು ವಿಮಾನದೊಳಗೆ ಪ್ರವೇಶಿಸಿ ಆತನನ್ನು ಎಳೆದು ಹೊರಕರೆತಂದಿದ್ದಾರೆ. ಬಳಿಕ ಶರೀಫ್​ನನ್ನು ಬಂಧಿಸಿದ ಚೆನ್ನೈ ವಿಮಾನ ನಿಲ್ದಾಣ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.