ETV Bharat / bharat

'ಪಟ್ಟಣಂ'ನಲ್ಲಿ ಪಶ್ಚಿಮ ಯುರೇಷಿಯನ್ ಆನುವಂಶಿಕ ಮುದ್ರೆಗಳನ್ನು ದೃಢಪಡಿಸಿದ ಪ್ರಾಚೀನ ಡಿಎನ್ಎ ಸಂಶೋಧನೆ - ಪಟ್ಟಣಂ ಪ್ರಾಚೀನ ಸ್ಥಳ

ಕೇರಳದ 'ಪಟ್ಟಣಂ' ಪುರಾತತ್ತ್ವ ಸ್ಥಳವು ಭಾರತ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳು ನಡುವಿನ ವ್ಯಾಪಾರ ಮತ್ತು ಸಾಂಸ್ಕೃತಿಕ ವಿನಿಮಯದಲ್ಲಿ ಮಹತ್ವದ ಪಾತ್ರ ವಹಿಸುತ್ತಿತ್ತು ಎಂಬುವುದಕ್ಕೆ ಪ್ರಾಚೀನ ಡಿಎನ್ಎ ಸಂಶೋಧನೆ ಪುಷ್ಟಿ ನೀಡಿದೆ.

Pattanam archaeological site
ಕೇರಳದ 'ಪಟ್ಟಣಂ' ಪುರಾತತ್ತ್ವ ಸ್ಥಳ
author img

By

Published : Apr 29, 2023, 2:24 PM IST

ಹೈದರಾಬಾದ್ (ತೆಲಂಗಾಣ): ಕೇರಳದ ಎರ್ನಾಕುಲಂ ಜಿಲ್ಲೆಯ ನೈಋತ್ಯ ಕರಾವಳಿಯ ಪಟ್ಟಣಂನಲ್ಲಿರುವ ಪುರಾತತ್ವ ಸ್ಥಳದ ಇತ್ತೀಚಿನ ಪುರಾವೆಗಳು ಮತ್ತು ಅದರ ಪ್ರಾಚೀನ ಡಿಎನ್‌ಎ ವಿಶ್ಲೇಷಣೆಗಳು ಭಾರತ ಮತ್ತು ಮಧ್ಯಪ್ರಾಚ್ಯ ಹಾಗೂ ಇತರ ರಾಷ್ಟ್ರಗಳು ನಡುವಿನ ವ್ಯಾಪಾರ ಮತ್ತು ಸಾಂಸ್ಕೃತಿಕ ವಿನಿಮಯದಲ್ಲಿ 'ಪಟ್ಟಣಂ' ಮಹತ್ವದ ಪಾತ್ರ ವಹಿಸಿದೆ ಎಂಬ ಇತಿಹಾಸಕಾರರ ನಂಬಿಕೆಯನ್ನು ಬಲಪಡಿಸುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಪಟ್ಟಣಂನಲ್ಲಿರುವ ಪುರಾತತ್ತ್ವ ಸ್ಥಳವು ಪ್ರಾಚೀನ ಬಂದರು ನಗರವಾದ ಮುಜಿರಿಸ್‌ನ ಭಾಗವಾಗಿದೆ ಎಂದು ನಂಬಲಾಗಿದೆ. ಈ ಪಟ್ಟಣಂ ನಗರವು ಭಾರತ ಮತ್ತು ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ಮೆಡಿಟರೇನಿಯನ್ ಪ್ರದೇಶಗಳ ನಡುವಿನ ವ್ಯಾಪಾರ ಹಾಗೂ ಸಾಂಸ್ಕೃತಿಕ ವಿನಿಮಯದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಇತಿಹಾಸಕಾರರು ಪರಿಗಣಿಸುತ್ತಾರೆ. ಈ ನಂಬಿಕೆಯು ಶಾಸ್ತ್ರೀಯ ಗ್ರೀಕೋ-ರೋಮನ್ ದಾಖಲೆಗಳು ಮತ್ತು ತಮಿಳು ಮತ್ತು ಸಂಸ್ಕೃತ ಮೂಲಗಳಿಂದ ಹುಟ್ಟಿಕೊಂಡಿದೆ.

ಪಟ್ಟಣಂನಿಂದ ಇತ್ತೀಚಿನ ಮತ್ತು ಹೆಚ್ಚು ನಿರ್ಣಾಯಕ ಪುರಾತತ್ತ್ವ ಶಾಸ್ತ್ರದ ಪುರಾವೆಗಳು ಹಾಗೂ ಹೈದರಾಬಾದ್​ನ ಸಿಎಸ್ಐಆರ್ - ಸೆಂಟರ್ ಫಾರ್ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿ (ಸಿಸಿಎಂಬಿ)ಯ ವಿಜ್ಞಾನಿ ಕುಮಾರಸ್ವಾಮಿ ತಂಗರಾಜ್ ಮತ್ತು ಪಿಜೆ ಚೆರಿಯನ್ ನೇತೃತ್ವದಲ್ಲಿ ನಡೆದ ಪ್ರಾಚೀನ ಡಿಎನ್ಎ ವಿಶ್ಲೇಷಣೆಗಳು ಈ ನಂಬಿಕೆ ಬಲಪಡಿಸುತ್ತವೆ. ಈಗ ಇದನ್ನು ಜರ್ನಲ್, ಜೀನ್ಸ್​ನಲ್ಲಿ ಪ್ರಕಟಿಸಲಾಗಿದೆ ಎಂದು ಸಿಸಿಎಂಬಿ ಪ್ರಕಟಣೆಯಲ್ಲಿ ತಿಳಿಸಿದೆ.

ಪುರಾತತ್ತ್ವ ವಸ್ತುಗಳು: ಪಟ್ಟಣಂ ಪುರಾತತ್ತ್ವ ಶಾಸ್ತ್ರದ ಸ್ಥಳದಲ್ಲಿ ವಿಜ್ಞಾನಿಗಳು ಮತ್ತು ಪುರಾತತ್ತ್ವಜ್ಞರು ಮಾನವ ಮೂಳೆಗಳು, ಶೇಖರಣಾ ಜಾಡಿಗಳು, ಚಿನ್ನದ ಆಭರಣಗಳು, ಗಾಜಿನ ಮಣಿಗಳು, ಕಲ್ಲಿನ ಮಣಿಗಳು, ಕಲ್ಲು, ತಾಮ್ರ ಮತ್ತು ಕಬ್ಬಿಣದಿಂದ ಮಾಡಿದ ಉಪಯುಕ್ತ ವಸ್ತುಗಳು, ಮಡಿಕೆಗಳು, ಚೇರ ನಾಣ್ಯಗಳು, ಇಟ್ಟಿಗೆ ಗೋಡೆ ಮತ್ತು ಮರದ ದೋಣಿ ಸೇರಿ ಇತರ ವಸ್ತುವುಗಳನ್ನು ಪತ್ತೆ ಹಚ್ಚಿಸಿದ್ದಾರೆ ಎಂದು ಹೇಳಿದೆ.

ಈ ರಚನೆಗಳು ವಿಶಾಲವಾದ ನಗರ ವಸಾಹತುಗಳನ್ನು ಸೂಚಿಸುತ್ತವೆ. ಅಲ್ಲದೇ, ಇಲ್ಲಿನ ಉತ್ಖನನಗಳು ಈ ಸ್ಥಳವನ್ನು ಮೊದಲು ಸ್ಥಳೀಯ ಮೆಗಾಲಿಥಿಕ್ (ಕಬ್ಬಿಣದ ಯುಗ) ಜನರು ವಶಪಡಿಕೊಂಡಿದ್ದರು ಎಂದು ಸೂಚಿಸುತ್ತವೆ. ನಂತರ ಆರಂಭಿಕ ಐತಿಹಾಸಿಕ ಅವಧಿಯಲ್ಲಿ ರೋಮನ್ ಸಂಪರ್ಕವು ನಿರಂತರವಾಗಿ ಇತ್ತು ಎಂದು ಸಹ ತೋರುತ್ತದೆ. ಕನಿಷ್ಠ ಕ್ರಿ.ಪೂ. 2ನೇ ಶತಮಾನದಿಂದ ಕ್ರಿ.ಶ. 10ನೇ ಶತಮಾನವರೆಗೆ ಆವರಿಸಿಕೊಂಡಿತ್ತು ಎಂದು ತಿಳಿದು ಬರುತ್ತದೆ ಎಂದು ಕೇರಳದ ಎರ್ನಾಕುಲಂ ಜಿಲ್ಲೆಯ ಪಾಮಾ ಇನ್‌ಸ್ಟಿಟ್ಯೂಟ್ ಫಾರ್ ದಿ ಅಡ್ವಾನ್ಸ್‌ಮೆಂಟ್ ಆಫ್ ಟ್ರಾನ್ಸ್‌ಡಿಸಿಪ್ಲಿನರಿ ಪುರಾತತ್ವ ವಿಜ್ಞಾನದ ಪಿಜೆ ಚೆರಿಯನ್ ಹೇಳಿದ್ದಾರೆ.

ಅಸ್ಥಿಪಂಜರದ ಡಿಎನ್‌ಎ: ಈ ಪ್ರದೇಶದಲ್ಲಿ ಕಂಡುಬರುವ ಜನರ ಆನುವಂಶಿಕ ಪೂರ್ವಜರನ್ನು ಗುರುತಿಸಲು ವಿಜ್ಞಾನಿಗಳು ಮಾನವ ಅಸ್ಥಿಪಂಜರದ ಡಿಎನ್‌ಎಯನ್ನು ಬಳಸಲಾಗಿತ್ತು. ನಾವು 12 ಪ್ರಾಚೀನ ಅಸ್ಥಿಪಂಜರದ ಮಾದರಿಗಳ ಮೈಟೊಕಾಂಡ್ರಿಯದ ಡಿಎನ್‌ಎಯನ್ನು ವಿಶ್ಲೇಷಿಸಿದ್ದೇವೆ. ಈ ಮಾದರಿಗಳು ದಕ್ಷಿಣ ಏಷ್ಯಾ ಮತ್ತು ಪಶ್ಚಿಮ ಯುರೇಷಿಯನ್​ ನಿರ್ದಿಷ್ಟ ವಂಶಾವಳಿಗಳ ಉಪಸ್ಥಿತಿಯನ್ನು ತೋರಿಸುತ್ತವೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ಲಖನೌದ ಡಿಎಸ್‌ಟಿ - ಬೀರ್ಬಲ್​ ಸಾಹ್ನಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಲಿಯೋಸೈನ್ಸ್​ನ ಹಿರಿಯ ವಿಜ್ಞಾನಿ, ಲೇಖಕ ನಿರಾಜ್ ರಾಯ್​ ತಿಳಿಸಿದ್ದಾರೆ.

ಭಾರತದ ಕಠಿಣ ಹವಾಮಾನ ಪರಿಸ್ಥಿತಿಗಳು ಯಾವಾಗಲೂ ಪ್ರಾಚೀನ ಡಿಎನ್‌ಎ ಸಂಶೋಧನೆಗೆ ಅನುಕೂಲಕರವಾಗಿರುವುದಿಲ್ಲ. ಉಷ್ಣವಲಯದ ಆರ್ದ್ರ ಮತ್ತು ಆಮ್ಲೀಯ ಮಣ್ಣಿನ ಪರಿಸ್ಥಿತಿಗಳಿಂದಾಗಿ ದುರ್ಬಲ ಸ್ಥಿತಿ ಇರುತ್ತದೆ. ಆದಾಗ್ಯೂ, ನಾವು ಪ್ರಾಚೀನ ಡಿಎನ್‌ಎ ಕ್ಷೇತ್ರದಲ್ಲಿ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡಿದ್ದೇವೆ ಮತ್ತು ಮಾದರಿಗಳನ್ನು ಯಶಸ್ವಿಯಾಗಿ ವಿಶ್ಲೇಷಿಸಿದ್ದೇವೆ. ಈ ಮಾದರಿಗಳಲ್ಲಿ ಕಂಡುಬರುವ ಪಶ್ಚಿಮ ಯುರೇಷಿಯನ್ ಮತ್ತು ಮೆಡಿಟರೇನಿಯನ್ ಗುರುತುಗಳ ವಿಶಿಷ್ಟ ಮುದ್ರೆಯು ಪುರಾತನ ದಕ್ಷಿಣ ಭಾರತದಲ್ಲಿ ವ್ಯಾಪಾರಿಗಳ ನಿರಂತರ ಒಳಹರಿವು ಮತ್ತು ಬಹುಸಂಸ್ಕೃತಿಯ ಮಿಶ್ರಣಕ್ಕೆ ಉದಾಹರಣೆಯಾಗಿದೆ ಎಂದು ವಿಜ್ಞಾನಿ ಕುಮಾರಸ್ವಾಮಿ ತಂಗರಾಜ್ ಹೇಳಿದ್ದಾರೆ.

ಇದನ್ನೂ ಓದಿ: ಹೊಸ ಇತಿಹಾಸ: ಆಂಧ್ರದಲ್ಲಿ 2.47 ಲಕ್ಷ ವರ್ಷ ಹಳೆಯ ಶಿಲಾಯುಗ ಉಪಕರಣ ಪತ್ತೆ, ವಿಶ್ವದಲ್ಲಿ ಸಂಚಲನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.