ETV Bharat / bharat

1994ರ ಎಂ ಜಿ ಕೃಷ್ಣಯ್ಯ ಹತ್ಯೆ: ನಿಯಮ ತಿದ್ದುಪಡಿ ಮೂಲಕ ಜೈಲಿನಿಂದ ಬಿಡುಗಡೆಯಾದ ಆನಂದ್​ ಮೋಹನ್ - ಜಿಲ್ಲಾ ಮ್ಯಾಜಿಸ್ಟ್ರೇಟ್ ಎಂ ಜಿ ಕೃಷ್ಣಯ್ಯ ಅವರ ಹತ್ಯೆ

ಗೋಪಾಲ್‌ಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಂ ಜಿ ಕೃಷ್ಣಯ್ಯ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ರಾಜಕಾರಣಿ ಆನಂದ್​ ಮೋಹನ್ ಗೆ ಬಿಡುಗಡೆ ದೊರಕಿದೆ.

anandh mohan
ಆನಂದ್​ ಮೋಹನ್
author img

By

Published : Apr 27, 2023, 2:27 PM IST

ಸಹರ್ಸ (ಬಿಹಾರ): ಗೋಪಾಲ್‌ಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಂ ಜಿ ಕೃಷ್ಣಯ್ಯ ಅವರ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಗ್ಯಾಂಗ್​ಸ್ಟರ್​ ರಾಜಕಾರಣಿ ಆನಂದ್​ ಮೋಹನ್​ ಸಹರ್ಸ ಮಂಡಲ್ ಜೈಲಿನಿಂದ ಇಂದು ಬಿಡುಗಡೆಗೊಂಡರು. ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿದ್ದ ಬಿಡುಗಡೆಯ ಸಮಯಕ್ಕಿಂತ ಮೊದಲೇ ಮಾಜಿ ಸಂಸದನನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ. ಇವರ ಬಿಡುಗಡೆ ಕುರಿತು ಜೈಲು ಸೂಪರಿಂಟೆಂಡೆಂಟ್ ಅಮಿತ್ ಕುಮಾರ್ ಖಚಿತಪಡಿಸಿದ್ದಾರೆ.

ಆನಂದ್ ಮೋಹನ್ ರೀಲೀಸ್​ಗೆ ಕಾರಣವಾಯ್ತು ಜೈಲು ತಿದ್ದುಪಡಿ ನಿಯಮ: ಹೌದು, ಬಿಹಾರದ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಸರ್ಕಾರವು ಇತ್ತೀಚೆಗೆ ಬಿಹಾರ ಜೈಲು ಕೈಪಿಡಿ 2012 ರ ನಿಯಮ 481 (i) ಅನ್ನು ತಿದ್ದುಪಡಿ ಮಾಡಿದೆ. ತಿದ್ದುಪಡಿ ಮಾಡುವ ಮುನ್ನ ಜೈಲಿನ ಬಂಧನ ನಿಯಮದ ಪ್ರಕಾರ, ಕರ್ತವ್ಯದಲ್ಲಿರುವ ಸಾರ್ವಜನಿಕ ಸೇವಕನನ್ನು ಕೊಂದ ಯಾವುದೇ ವ್ಯಕ್ತಿಯನ್ನು ಜೈಲಿನಿಂದ ಬಿಡುಗಡೆ ಮಾಡುವುದನ್ನು ನಿಷೇಧಿಸಿತ್ತು. ಹೀಗಾಗಿ ಎಂ ಜಿ ಕೃಷ್ಣಯ್ಯ ಅವರ ಹತ್ಯೆ ಪ್ರಕರಣದಲ್ಲಿ ಆನಂದ್​ ಮೋಹನ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು.

ಆದರೆ, ನಿತೀಶ್​ ಸರ್ಕಾರದ ತಿದ್ದುಪಡಿ ಈ ನಿಯಮವನ್ನೇ ಬದಲಾಯಿಸಿದೆ. ಅದೇನೆಂದರೆ, ಕರ್ತವ್ಯದಲ್ಲಿರುವ ಸಾರ್ವಜನಿಕ ನೌಕರನ ಕೊಲೆಯಂತಹ ಪ್ರಕರಣಕ್ಕಿರುವ ಷರತ್ತಗಳನ್ನು ನಿಯಮ ಪುಸ್ತಕದಿಂದ ತೆಗೆದುಹಾಕಲಾಗಿದೆ. ಈ ತಿದ್ದುಪಡಿಯಿಂದಾಗಿ ಒಂದು ವೇಳೆ ಇಂತಹ ಅಪರಾಧಗಳಲ್ಲಿ 14 ವರ್ಷ ಅಥವಾ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿದಲ್ಲಿ ಅವರನ್ನು ಬಿಡುಗಡೆಗೊಳಿಸುವುದಕ್ಕೆ ಸಾಧ್ಯವಾಗಲಿದೆ. ಹಾಗೆ ಮೊದಲಿದ್ದ ನಿಯಮದನ್ವಯ ಯಾರೆಲ್ಲ ಹತ್ಯೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೋ ಅವರಲ್ಲಿ 27 ಕೈದಿಗಳನ್ನು ಬಿಡುಗಡೆ ಮಾಡಲು ಸೂಚಿಸಲಾಯಿತು. ಈ ಕೈದಿಗಳಲ್ಲಿ ಮಾಫಿಯಾ ರಾಜಕಾರಣಿ ಆನಂದ್ ಮೋಹನ್ ಕೂಡ ಸೇರಿದ್ದು ಈ ಮೂಲಕ ಅವರ ಬಿಡುಗಡೆಯಾಗಿದೆ.

1994 ರಲ್ಲಾಗಿತ್ತು ಎಂ ಜಿ ಕೃಷ್ಣಯ್ಯ ಹತ್ಯೆ: ದಲಿತ ಐಎಎಸ್​ ಅಧಿಕಾರಿ, ಗೋಪಾಲ್‌ಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಂ ಜಿ ಕೃಷ್ಣಯ್ಯ ಅವರನ್ನು 1994 ರ ಡಿಸೆಂಬರ್ 5 ರಂದು ಗುಂಪೊಂದು ಹತ್ಯೆ ಮಾಡಿತ್ತು. ಈ ಹತ್ಯೆ ಹಿಂದೆ ರಾಜಕಾರಣಿ ಆನಂದ್​ ಮೋಹನ್ ಅವರ ಕೈವಾಡವಿದ್ದು ಈ ಆರೋಪದಡಿ ಕೆಳ ನ್ಯಾಯಾಲಯ ಆನಂದ್ ಮೋಹನ್‌ಗೆ ಮರಣದಂಡನೆ ವಿಧಿಸಿತ್ತು. ಆದರೆ, ಅವರು ಪಾಟ್ನಾ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರು, 2008 ರಲ್ಲಿ ಅವರಿಗೆ ಮರಣದಂಡನೆ ಶಿಕ್ಷೆಯಿಂದ ಜೀವಾವಧಿ ಶಿಕ್ಷೆ ವಿಧಿಸಲಾಯಿತು. 2012ರಲ್ಲಿ ಸುಪ್ರೀಂ ಕೋರ್ಟ್ ಕೂಡ ಪಾಟ್ನಾ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿತ್ತು. ಹೀಗಾಗಿ ಡಿಎಂ ಹತ್ಯೆ ಪ್ರಕರಣದಲ್ಲಿ ಆನಂದ್ ಮೋಹನ್ ಈಗಾಗಲೇ 14 ವರ್ಷಗಳ ಶಿಕ್ಷೆಯನ್ನು ಅನುಭವಿಸಿದ್ದಾರೆ. ಆದರೆ ನಿಯಮ ತಿದ್ದುಪಡಿಯಿಂದ ಕಾರಗೃಹವಾಸದಿಂದ ಆನಂದ್​ ಮೋಹನ್​ಗೆ ಬಿಡುಗಡೆ ದೊರಕಿದೆ.

15 ದಿನಗಳ ಪೆರೋಲ್ ಪಡೆದಿದ್ದ ಆನಂದ್​: ಹೌದು ಈ ಮಧ್ಯೆ ಆನಂದ್​ ಮೋಹನ್ ತಮ್ಮ ಪುತ್ರ ​ಚೇತನ್ ಆನಂದ್ ಅವರ ಮದುವೆಗಾಗಿ 15 ದಿನಗಳ ಪೆರೋಲ್​ಗಳನ್ನು ಕೂಡ ತೆಗೆದುಕೊಂಡಿದ್ದರು. ಪೆರೋಲ್ ಮುಗಿಸಿದ ನಂತರ ಆನಂದ್ ಮೋಹನ್ ಅವರು ಬುಧವಾರ ಸಂಜೆ 4:20 ಕ್ಕೆ ಸಹರ್ಸಾ ಜೈಲಿಗೆ ಮರಳಿದ್ದರು. ಇದರ ನಡುವೇ ಆನಂದ್​ಗೆ ಸಿಹಿ ಸುದ್ದಿಯೆಂಬಂತೆ ಜೈಲಿನ ನಿಯಮದಲ್ಲಿ ತಿದ್ದುಪಡಿಯಾಗಿದ್ದು, ಕೈದಿಗಳ ಬಿಡುಗಡೆಯಲ್ಲಿ ತಾವು ಸೇರಿರುವುದು ತಿಳಿಯಿತು.

ಆನಂದ್​ ಬಿಡುಗಡೆ; ದಲಿತ ಸಂಘಟಕರಲ್ಲಿ ಹೆಚ್ಚಿದ ಕಿಚ್ಚು: ಯಾವಾಗ ಅಪರಾಧಿ ಆನಂದ್​ ಮೋಹನ್​ ಬಿಡುಗಡೆಯ ಆದೇಶ ಬಹಿರಂಗವಾಯಿತೋ ಆಗಿನಿಂದಲೇ ದಲಿತ ಸಂಘಟನೆಗಳು ಮತ್ತು ಕೆಲವು ರಾಜಕೀಯ ಪಕ್ಷಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಹಾಗೂ ಹತ್ಯೆಗೀಡಾದ ಡಿಎಂ ಕುಟುಂಬದವರು ಆನಂದ್ ಮೋಹನ್ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕೂಡ ಸದ್ದಿಲ್ಲದೆ ಬಿಡುಗಡೆಗೆ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪ್ರತಿಪಕ್ಷ ನಾಯಕ ವಿಜಯ್ ಸಿನ್ಹಾ ಮತ್ತು ರಾಜ್ಯಸಭಾ ಸಂಸದ ಸುಶೀಲ್ ಮೋದಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದರೆ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮತ್ತು ಮಾಜಿ ಸಚಿವ ಅಮರೇಂದ್ರ ಪ್ರತಾಪ್ ಸಿಂಗ್ ಅವರಂತಹ ನಾಯಕರು ಬೆಂಬಲಿಸಿದ್ದಾರೆ.

ಅಪರಾಧಿ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ, ಹತ್ಯೆಗೀಡಾದ ಡಿಎಂರ ಪುತ್ರಿ ಪದ್ಮಾ, ನಿತೀಶ್ ಕುಮಾರ್ ಸರ್ಕಾರವು ಜೈಲು ನಿಯಮಗಳನ್ನು ತಿರುಚಿದೆ ಈ ಮೂಲಕ ತಪ್ಪು ನಿರ್ಧಾರವನ್ನು ತೆಗೆದುಕೊಂಡಿದೆ. ಆನಂದ್ ಮೋಹನ್ ಸಿಂಗ್ ಇಂದು ಜೈಲಿನಿಂದ ಬಿಡುಗಡೆಯಾಗಿರುವುದು ನಮಗೆ ಬೇಸರ ತಂದಿದೆ. ಸರ್ಕಾರ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು. ನಿತೀಶ್ ಕುಮಾರ್ ಜೀ ಅವರು ಈ ನಿರ್ಧಾರದ ಬಗ್ಗೆ ಮತ್ತೊಮ್ಮೆ ಯೋಚಿಸಬೇಕೆಂದು ನಾನು ವಿನಂತಿಸುತ್ತೇನೆ. ಈ ನಿರ್ಧಾರದಿಂದ ಒಂದು ಕುಟುಂಬಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಅನ್ಯಾಯವಾಗಿದೆ. ಈ ನಿರ್ಧಾರದ ವಿರುದ್ಧ ನಾವು ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಆನಂದ್ ಮೋಹನ್ ಬಿಡುಗಡೆ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸಲಿದ್ದಾರೆ ಡಿಎಂ ಅವರ ಪತ್ನಿ ಉಮಾ ದೇವಿ ತಿಳಿಸಿದ್ದು, ಅವರನ್ನು ಬಿಡುಗಡೆ ಮಾಡುವುದು ತಪ್ಪು ನಿರ್ಧಾರ, ಸಿಎಂ ಈ ನಿರ್ಧಾರಕ್ಕೆ ಪ್ರೋತ್ಸಾಹಿಸಬಾರದು. ಆನಂದ್ ಮೋಹನ್ ಭವಿಷ್ಯದಲ್ಲಿ ಚುನಾವಣೆಗೆ ಸ್ಪರ್ಧಿಸಿದರೆ ಸಾರ್ವಜನಿಕರು ಅವರನ್ನು ಬಹಿಷ್ಕರಿಸಬೇಕು. ಆತನನ್ನು ಮರಳಿ ಜೈಲಿಗೆ ಕಳುಹಿಸುವಂತೆ ನಾನು ಮನವಿ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಜೆಇಎಂ ಉಗ್ರ ಸಂಘಟನೆಯ ಶಂಕಿತ ಅರೆಸ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.