ಭಾರತದ ಉದ್ಯಮ ದಿಗ್ಗಜ (ಬ್ಯುಸಿನೆಸ್ ಟೈಕೋನ್) ಆನಂದ್ ಮಹೀಂದ್ರಾ ಟ್ವಿಟ್ಟರ್ ಮೂಲಕ ಜನಸಾಮಾನ್ಯರನ್ನು ತಲುಪುತ್ತಿದ್ದಾರೆ. ಜನರ ಮಾನವೀಯ ಕಾರ್ಯಗಳ ಜೊತೆಗೆ ಅವರ ಸಾಧನೆಗೆ ಪ್ರೋತ್ಸಾಹ ನೀಡುವ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ.
ಇದೀಗ ಮಹೀಂದ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದು, ಎಲ್ಲೆಡೆ ಮೆಚ್ಚುಗೆ ಗಳಿಸಿದೆ. ಒಬ್ಬ ತರಕಾರಿ ಮಾರಾಟ ಮಾಡುತ್ತಿರುವ ಮಹಿಳೆ ನವಿಲಿಗೆ ಆಹಾರ ನೀಡುವ ವಿಡಿಯೋವನ್ನು ಮೊಬೈಲ್ನಲ್ಲಿ ಸೆರೆಹಿಡಿದ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ. ಈ ವಿಡಿಯೋ ಕಂಡ ಆನಂದ್ ಮತ್ತೆ ಅದನ್ನು ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡು ಶೀರ್ಷಿಕೆಯನ್ನು ನೀಡಿದ್ದಾರೆ. "ಕೆಲವೊಮ್ಮೆ ಮಾನವೀಯತೆ ಮತ್ತು ಸಾಮರಸ್ಯದಿಂದ ಇರಬೇಕೆಂದು ಆಶಿಸುವ ದೃಶ್ಯವನ್ನು ನಾವು ನೋಡುತ್ತೇವೆ. Incredible India" ಎಂದು ಬರೆದುಕೊಂಡಿದ್ದಾರೆ.
-
And sometimes you come across a scene that gives you hope that humanity & the planet will be in harmony. Incredible India. pic.twitter.com/hobIOgh5D1
— anand mahindra (@anandmahindra) August 10, 2021 " class="align-text-top noRightClick twitterSection" data="
">And sometimes you come across a scene that gives you hope that humanity & the planet will be in harmony. Incredible India. pic.twitter.com/hobIOgh5D1
— anand mahindra (@anandmahindra) August 10, 2021And sometimes you come across a scene that gives you hope that humanity & the planet will be in harmony. Incredible India. pic.twitter.com/hobIOgh5D1
— anand mahindra (@anandmahindra) August 10, 2021
56 ಸೆಕೆಂಡ್ಗಳ ವಿಡಿಯೋದಲ್ಲಿ ತರಕಾರಿ ಮಾರುವ ಮಹಿಳೆಯೊಬ್ಬಳು ತನ್ನ ಸುತ್ತಲೂ ಹಲವಾರು ತರಕಾರಿ ಬುಟ್ಟಿಗಳನ್ನು ಇಟ್ಟು ಕುಳಿತಿದ್ದಾರೆ. ಆ ಸ್ಥಳಕ್ಕೆ ನವಿಲೊಂದು ಬಂದಾಗ ಅದಕ್ಕೆ ತನ್ನ ಕೈಯಲ್ಲಿ ಆಹಾರವನ್ನು ನೀಡುತ್ತಾರೆ. ಈ ದೃಶ್ಯ ನಿಜವಾಗಿಯೂ ಮಾನವೀಯತೆಗೆ ಸಾಕ್ಷಿ ಎಂಬಂತಿದೆ.
ಟ್ವಿಟ್ಟರ್ನಲ್ಲಿ ಈ ವಿಡಿಯೋ ಟ್ರೆಂಡಿಂಗ್ ಲಿಸ್ಟ್ಗೆ ಸೇರಿದೆ. ವಿಡಿಯೋವನ್ನು ಸುಮಾರು 1.5 ಮಿಲಿಯನ್ ಜನರು ವೀಕ್ಷಿಸಿದ್ದು, 28 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಮತ್ತು ಹಲವಾರು ರೀಟ್ವೀಟ್‌ಗಳನ್ನು ಮಾಡಲಾಗಿದೆ.