ETV Bharat / bharat

ಕಿಕ್-ಸ್ಟಾರ್ಟಿಂಗ್ ಜೀಪ್‌ ತಯಾರಿಸಿದ ಬಡ ಪ್ರತಿಭೆಗೆ 'ಬೊಲೆರೋ' ಗಿಫ್ಟ್​ ನೀಡಿದ ಆನಂದ್ ಮಹೀಂದ್ರಾ! - ಕಿಕ್ - ಸ್ಟಾರ್ಟಿಂಗ್ ಜೀಪ್‌ ವಿಡಿಯೋ

ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ತಯಾರಿಸಿದ ಕಿಕ್-ಸ್ಟಾರ್ಟಿಂಗ್ ಜೀಪ್‌ನ ವಿಡಿಯೋ ಹಂಚಿಕೊಂಡು, ಅವರಿಗೆ ಬೊಲೆರೋ ಕಾರು ಗಿಫ್ಟ್ ನೀಡುವುದಾಗಿ ಭರವಸೆ ನೀಡಿದ್ದ ಆನಂದ್ ಮಹೀಂದ್ರಾ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.

Anand Mahindra delivers his promise
Anand Mahindra delivers his promise
author img

By

Published : Jan 25, 2022, 4:28 PM IST

ಮುಂಬೈ(ಮಹಾರಾಷ್ಟ್ರ): ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ತೋರಿರುವ ಅನೇಕ ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಈ ಮಧ್ಯೆ, ಗ್ರಾಮೀಣ ಪ್ರದೇಶಗಳಲ್ಲೂ ಅನೇಕರು ಎಲೆಮರೆಕಾಯಿಯಂತೆ ವಿಭಿನ್ನ ರೀತಿಯ ಅನ್ವೇಷಣೆ ಮಾಡುತ್ತಿರುತ್ತಾರೆ. ಅಂತಹ ಬಡ ಪ್ರತಿಭೆಗೆ ಇದೀಗ ಮಹೀಂದ್ರಾ ಕಂಪನಿ ಎಂಡಿ ಆನಂದ್ ಮಹೀಂದ್ರಾ ಬೊಲೆರೋ ಕಾರು ಗಿಫ್ಟ್​ ನೀಡುವ ಮೂಲಕ ಪ್ರತಿಭೆಯನ್ನು ಪ್ರೋತ್ಸಾಹಿಸಿದ್ದಾರೆ.

  • Delighted that he accepted the offer to exchange his vehicle for a new Bolero. Yesterday his family received the Bolero & we proudly took charge of his creation. It will be part of our collection of cars of all types at our Research Valley & should inspire us to be resourceful. https://t.co/AswU4za6HT pic.twitter.com/xGtfDtl1K0

    — anand mahindra (@anandmahindra) January 25, 2022 " class="align-text-top noRightClick twitterSection" data=" ">

ಮಹಾರಾಷ್ಟ್ರ ಮೂಲದ ದತ್ತಾತ್ರೇಯ ಲೋಹರ್ ಎಂಬ ವ್ಯಕ್ತಿ ಹಳೆಯ ವಾಹನದ ಬಿಡಿ ಭಾಗಗಳನ್ನ ಬಳಸಿ, ದ್ವಿ-ಚಕ್ರ ವಾಹನ ಸಿದ್ಧಪಡಿಸಿದ್ದರು. ಇದಕ್ಕಾಗಿ 60 ಸಾವಿರ ರೂ. ಖರ್ಚು ಮಾಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿತ್ತು.

ಇದನ್ನೂ ಓದಿರಿ: ಕಿಕ್ - ಸ್ಟಾರ್ಟಿಂಗ್ ಜೀಪ್‌ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ: ಬಡವನಿಗೆ ಬೊಲೆರೊ ನೀಡುವುದಾಗಿ ಟ್ವೀಟ್​ !

ಇದನ್ನ ಶೇರ್ ಮಾಡಿಕೊಂಡಿದ್ದ ಮಹೀಂದ್ರಾ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರಾ, 'ನಿಸ್ಸಂಶಯವಾಗಿ ಇದು ಯಾವುದೇ ನಿಯಮಗಳಿಗೆ ಹೊಂದಿಕೆಯಾಗುವುದಿಲ್ಲ. ಆದರೆ, ನಮ್ಮ ಜನರ ಜಾಣ್ಮೆ ಮತ್ತು ಕನಿಷ್ಠ ಸಂಪನ್ಮೂಲಗಳನ್ನು ನಾನು ಪ್ರಶಂಸಿಸುತ್ತೇನೆ. ಹೆಚ್ಚು ಹೆಚ್ಚು ಸಾಮರ್ಥ್ಯಗಳನ್ನು ಪ್ರೋತ್ಸಾಹಿಸುವುದನ್ನು ಮುಂದುವರಿಸುತ್ತೇನೆ' ಎಂದು ಬರೆದುಕೊಂಡಿದ್ದರು. ಇದರ ಜೊತೆಗೆ ಹಳೆಯ ವಾಹನದ ಬದಲಾಗಿ ಬೊಲೆರೋ ಕಾರನ್ನು ಗಿಫ್ಟ್​​ ಆಗಿ ನೀಡುವುದಾಗಿ ತಿಳಿಸಿದ್ದರು. ಇದೀಗ ಕೊಟ್ಟ ಮಾತಿನಂತೆ ದತ್ತಾತ್ರೇಯ ಅವರಿಗೆ ಹೊಸ ಕಾರು ನೀಡಿದ್ದಾರೆ.

  • This clearly doesn’t meet with any of the regulations but I will never cease to admire the ingenuity and ‘more with less’ capabilities of our people. And their passion for mobility—not to mention the familiar front grille pic.twitter.com/oFkD3SvsDt

    — anand mahindra (@anandmahindra) December 21, 2021 " class="align-text-top noRightClick twitterSection" data=" ">

ಸದಾ ಒಂದಿಲ್ಲೊಂದು ವಿಭಿನ್ನ ವಿಚಾರ ಹಾಗೂ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಉದ್ಯಮಿ ಆನಂದ್​ ಮಹೀಂದ್ರಾ, ಕಳೆದ ಕೆಲ ದಿನಗಳ ಹಿಂದೆ ಕೈ - ಕಾಲು ಇಲ್ಲದ ಶ್ರಮಜೀವಿಯ ವಿಡಿಯೋವನ್ನು ತಮ್ಮ ಟ್ವಿಟ್ಟರ್​ ಅಕೌಂಟ್​​ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಆತನಿಗೆ ಕೆಲಸದ ಆಫರ್​ ಸಹ ನೀಡಿದ್ದರು.

ಜಾಹೀರಾತು-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.