ETV Bharat / bharat

ಅಂಡಮಾನ್ ನಿಕೋಬಾರ್​ನಲ್ಲಿ ಭೂಕಂಪ: 4.9ರಷ್ಟು ತೀವ್ರತೆ ದಾಖಲು - ಅಂಡಮಾನ್ ನಿಕೋಬಾರ್​ನಲ್ಲಿ ಭೂಕಂಪ

ಅಂಡಮಾನ್ ನಿಕೋಬಾರ್ ದ್ವೀಪದ ಕ್ಯಾಂಪ್​ಬೆಲ್ ಕೊಲ್ಲಿಯ ಈಶಾನ್ಯದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.9ರಷ್ಟು ತೀವ್ರತೆ ದಾಖಲಾಗಿದೆ.

An earthquake with a magnitude of 4.9 on the Richter Scale, hit Nicobar Islands
ಅಂಡಮಾನ್ ನಿಕೋಬಾರ್​ನಲ್ಲಿ ಭೂಕಂಪ: 4.9ರಷ್ಟು ತೀವ್ರತೆ ದಾಖಲು
author img

By

Published : Apr 10, 2022, 10:01 AM IST

ಪೋರ್ಟ್ ಬ್ಲೇರ್(ಅಂಡಮಾನ್ ನಿಕೋಬಾರ್): ಬಂಗಾಳಕೊಲ್ಲಿಯಲ್ಲಿರುವ ಅಂಡಮಾನ್ ನಿಕೋಬಾರ್ ದ್ವೀಪದ ಕ್ಯಾಂಪ್​ಬೆಲ್ ಕೊಲ್ಲಿಯ ಈಶಾನ್ಯಕ್ಕೆ ಸುಮಾರು 70 ಕಿಲೋಮೀಟರ್​ ದೂರದಲ್ಲಿ ಭೂಕಂಪನ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್​ ಫಾರ್ ಸಿಸ್ಮೋಲಜಿ(ಎನ್​ಸಿಎಸ್​​) ಮಾಹಿತಿ ನೀಡಿದೆ. ಭಾನುವಾರ ಬೆಳಗ್ಗೆ 7.02ಕ್ಕೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.9ರಷ್ಟು ತೀವ್ರತೆ ದಾಖಲಾಗಿದೆ. ಸುಮಾರು 10 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಗುರುತಿಸಲ್ಪಟ್ಟಿದೆ ಎಂದು ಎನ್​ಸಿಎಸ್ ಟ್ವೀಟ್ ಮಾಡಿದೆ.

ಇದಕ್ಕೂ ಮುನ್ನ ಕ್ಯಾಂಪ್​ಬೆಲ್ ಕೊಲ್ಲಿಯಲ್ಲಿ ಬುಧವಾರ ಸಂಜೆ 6.07ಕ್ಕೆ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 4.4ರಷ್ಟು ತೀವ್ರತೆ ದಾಖಲಾಗಿತ್ತು. ಈ ಭೂಕಂಪ ಜರುಗಿದ ಮೂರು ದಿನಗಳ ನಂತರ ಇದೇ ಕೊಲ್ಲಿಯಲ್ಲಿ ಭೂಕಂಪ ಸಂಭವಿಸಿದೆ ಎಂದು ಎನ್​ಸಿಎಸ್​​ ಟ್ವೀಟ್ ಮಾಡಿದೆ.

ಇದನ್ನೂ ಓದಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಟ್ವಿಟರ್ ಖಾತೆ ಹ್ಯಾಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.