ಜಲೋರ್/ಗುವಾಹಟಿ: ರಾಜಸ್ಥಾನದ ಜಲೋರ್ನಲ್ಲಿ ಇಂದು ನಸುಕಿನ ಜಾವ 2:26ಕ್ಕೆ ಭೂಕಂಪನ ಸಂಭವಿಸಿದ್ದು (Earthquake in Rajasthan's Jalore), ರಿಕ್ಟರ್ ಮಾಪಕದಲ್ಲಿ 4.6 ರಷ್ಟು ತೀವ್ರತೆ ದಾಖಲಾಗಿದೆ.
ಜೋಧ್ಪುರದಿಂದ ದಕ್ಷಿಣ-ನೈಋತ್ಯಕ್ಕೆ 150 ಕಿಮೀ ದೂರ ಹಾಗೂ 10 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್ -National Center for Seismology) ಮಾಹಿತಿ ನೀಡಿದೆ.
ಇನ್ನು ಅಸ್ಸೋಂ ರಾಜ್ಯದ ಗುವಾಹಟಿಯಲ್ಲಿ (Earthquake in Assam's Guwahati) ಕೂಡ ಇಂದು ಮಧ್ಯಾಹ್ನ 1 ಗಂಟೆಗೆ ಭೂಮಿ ಕಂಪಿಸಿದ್ದು, 4.1 ರಷ್ಟು ತೀವ್ರತೆ ದಾಖಲಾಗಿದೆ. ಗುವಾಹಟಿಯ ಪಶ್ಚಿಮ-ನೈಋತ್ಯದಿಂದ 38 ಕಿ.ಮೀ ದೂರದಲ್ಲಿ ಹಾಗೂ 10 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ.
ಎರಡೂ ಘಟನೆಗಳಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಎನ್ಸಿಎಸ್ ತಿಳಿಸಿದೆ.