ETV Bharat / bharat

ಅಂಗವಿಕಲರ ವಿಶೇಷ ಬೈಸಿಕಲ್ ವಿನ್ಯಾಸ: ಸರ್ಕಾರದಿಂದ ಪೇಟೆಂಟ್​ ಪಡೆದ ಪಾಲಿಟೆಕ್ನಿಕ್ ಶಿಕ್ಷಕ - ಸೈಕಲ್​

ಪಾಲಿಟೆಕ್ನಿಕ್ ಶಿಕ್ಷಕ ಪ್ರೊಫೆಸರ್ ಶಂಶಾದ್ ಅಲಿ ಅವರು ತಾವು ಅಂಗವಿಕಲರಿಗಾಗಿ ವಿನ್ಯಾಸಗೊಳಿಸಿದ ಸೈಕಲ್​ಗಾಗಿ ಭಾರತ ಸರ್ಕಾರದ ಪೇಟೆಂಟ್ ಕಚೇರಿಯಿಂದ ಪೇಟೆಂಟ್​ ನೀಡಲಾಗಿದೆ.

AMU teacher gets patent
ವಿನ್ಯಾಸಗೊಳಿಸಿದ ಮಾದರಿ ಚಿತ್ರ ಹಾಗು ಪೇಟೆಂಟ್​ ಪಡೆದ ಶಿಕ್ಷಕ
author img

By

Published : Aug 3, 2023, 10:37 AM IST

ಅಲಿಗಢ(ಉತ್ತರ ಪ್ರದೇಶ): ವಿಕಲಚೇತನರಿಗಾಗಿ ವಿನ್ಯಾಸಗೊಳಿಸಿದ ವಿಶೇಷ ಬೈಸಿಕಲ್‌ಗೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಬಾಲಕರ ಪಾಲಿಟೆಕ್ನಿಕ್ ಶಿಕ್ಷಕರೊಬ್ಬರು ಪೇಟೆಂಟ್ ಪಡೆದಿದ್ದಾರೆ. ಅಸೋಸಿಯೇಟ್ ಪ್ರೊಫೆಸರ್ ಶಂಶಾದ್ ಅಲಿ ಅವರು ಅಂಗವಿಕಲರಿಗಾಗಿ ವಿಶೇಷ ಸೈಕಲ್ ತಯಾರಿಸಿದ್ದಾರೆ. ಇದಕ್ಕಾಗಿ ಭಾರತ ಸರ್ಕಾರದ ಪೇಟೆಂಟ್ ಕಚೇರಿ ಅವರಿಗೆ ಪೇಟೆಂಟ್ ಸಂಖ್ಯೆ 4,41,899 ನೀಡಿದೆ. ಈ ಆವಿಷ್ಕಾರದಲ್ಲಿ ಸೈಕಲ್​ನಲ್ಲಿ ಅಟ್ಯಾಚ್ ಮೆಂಟ್ ಮಾಡಲಾಗಿದ್ದು, ಸೈಕಲ್​ನ್ನು ಹಿಂದಕ್ಕೆ ಎಳೆಯಲು ಚಕ್ರಗಳನ್ನು ಅಳವಡಿಸಲಾಗಿದೆ ಎಂದು ಶಂಶಾದ್ ಅಲಿ ತಿಳಿಸಿದ್ದಾರೆ.

ಸೈಕಲ್​ನ ಚಕ್ರವು ಸ್ಥಿರವಾಗಿದ್ದಾಗ ಅಥವಾ ನಿಧನಾವಾಗಿ ಚಲಿಸುವಾಗ ಹೆಚ್ಚುವರಿಯಾಗಿ ಜೋಡಿಸಲಾಗಿರುವ ಚಕ್ರಗಳು ನೇರವಾಗಿಯೇ ಇರುತ್ತದೆ. ಇದರಿಂದ ಇನ್ನೊಬ್ಬ ವ್ಯಕ್ತಿಯ ಸಹಾಯವಿಲ್ಲದೇ ಕುಳಿತುಕೊಳ್ಳಬಹುದು. ಈ ಮೂಲಕ ಅಂಗವಿಕಲರು ತಾವು ಸೈಕಲ್​​ ಓಡಿಸಬಹುದು. ಯಾರ ಸಹಾಯವಿಲ್ಲದೇ ಸೈಕಲ್​​​ ಓಡಿಸಲು ಸಾಧ್ಯವಾಗುವುದರಿಂದ ಅವರ ಆತ್ಮವಿಶ್ವಾಸವು ಹೆಚ್ಚುತ್ತದೆ ಎಂದು ಶಂಶಾದ್ ತಿಳಿಸಿದ್ದಾರೆ. ಇನ್ನು, ಯೂನಿವರ್ಸಿಟಿ ಪಾಲಿಟೆಕ್ನಿಕ್‌ನ ಪ್ರಾಂಶುಪಾಲರಾದ ಪ್ರೊಫೆಸರ್ ಅರ್ಷದ್ ಉಮರ್ ಅವರು ಶಂಶಾದ್ ಅಲಿ ಅವರ ಆವಿಷ್ಕಾರ ಹಾಗೂ ಅದಕ್ಕಾಗಿ ಪಡೆದ ಎಂಟನೇ ಪೇಟೆಂಟ್​ಗಾಗಿ ಅವರನ್ನು ಅಭಿನಂದಿಸಿದರು.

ತಮ್ಮ ಆವಿಷ್ಕಾರದ ಕುರಿತು ಶಂಶಾದ್​​ ಅಲಿ ಪ್ರತಿಕ್ರಿಯಿಸಿ, ಬೈಸಿಕಲ್ ತನ್ನ ಸಾಮಾನ್ಯ ವೇಗವನ್ನು ಪಡೆದಾಗ, ವಿಶೇಷ ಹ್ಯಾಂಡಲ್‌ಗಳ ಸಹಾಯದಿಂದ ಕಡಿಮೆ ಶ್ರಮದ ಮೂಲಕ ಮತ್ತು ಸಹಾಯಕ ಚಕ್ರಗಳನ್ನು ನೆಲದ ಮೇಲೆ ಏರಿಸಬಹುದು. ವೇಗ ಕಡಿಮೆ ಮಾಡಲು ಅವುಗಳನ್ನು ಲಾಕ್ ಮಾಡಬಹುದು. ಬ್ರೇಕ್‌ಗಳನ್ನು ಅನ್ವಯಿಸುವ ಮೂಲಕ ಬೈಸಿಕಲ್​ನ್ನು ನಿಲ್ಲಿಸಿದಾಗ ಅಥವಾ ನಿಧಾನಗೊಳಿಸಿದಾಗ, ಸೈಕಲ್​ ನೇರವಾಗಿ ಇರಲು ಬೆಂಬಲ ಚಕ್ರಗಳು ಸ್ವಯಂಚಾಲಿತವಾಗಿ ಹಿಂತೆಗೆದುಕೊಳ್ಳುತ್ತವೆ. ಇದರಿಂದ ಚಾಲಕ ಬಿದ್ದು ಗಾಯಗೊಳ್ಳುವುದನ್ನು ತಪ್ಪಿಸಬಹುದು.

ಇದುವರೆಗೆ 8 ಪೇಟೆಂಟ್‌ಗಳು ನೋಂದಣಿ: ಗಮನಾರ್ಹವಾಗಿ, ಶಂಶಾದ್ ಅಲಿ ಅವರು ಎಎಂಯುನಿಂದ ಎಂಟೆಕ್ ಶಿಕ್ಷಣವನ್ನು ಪಡೆದಿದ್ದಾರೆ. ಪ್ರಸ್ತುತ ಅವರು ಪಿಎಚ್‌ಡಿ ಮಾಡುತ್ತಿದ್ದು, ಎಎಂಯುನಲ್ಲಿಯೇ ಸಹ ಪ್ರಾಧ್ಯಾಪಕರಾಗಿದ್ದಾರೆ. ಶಕ್ತಿ ಸಂರಕ್ಷಣೆ, ಉತ್ಪಾದನಾ ವಿಜ್ಞಾನ ಮತ್ತು ಅಸಾಂಪ್ರದಾಯಿಕ ಯಾಂತ್ರಿಕ ಪ್ರಕ್ರಿಯೆಗಳು ಇವರ ಕಾರ್ಯ ಕ್ಷೇತ್ರಗಳಾಗಿವೆ. ಸೋಲಾರ್ ಎಲೆಕ್ಟ್ರಿಕ್ ವೆಹಿಕಲ್ ಕುರಿತು ಶಂಶಾದ್ ಅಲಿ ಅವರ ಲೇಖನವೂ ಪ್ರಕಟವಾಗಿದೆ. ಇದುವರೆಗೆ ಅವರು ತಯಾರಿಸಿದ ಯಂತ್ರಗಳಿಗೆ 8 ಪೇಟೆಂಟ್‌ಗಳನ್ನು ನೋಂದಾಯಿಸಿದ್ದಾರೆ.

ಎಲ್ ಪಿಜಿ ಇಂಧನ ಉಳಿತಾಯ ಯೋಜನೆ: ಅಸೋಸಿಯೇಟ್ ಪ್ರೊಫೆಸರ್ ಶಂಶಾದ್ ಅಲಿ ಹೊಸ ಆವಿಷ್ಕಾರಗಳನ್ನು ಅನ್ವೇಷಿಸುತ್ತಿದ್ದಾರೆ. ಇದಕ್ಕೂ ಮುನ್ನ ಕ್ರಿಕೆಟ್ ಬ್ಯಾಟ್ ಹಿಡಿಕೆಯಲ್ಲಿ ಹೊಸ ಪ್ರಯೋಗ ಮಾಡಿದ್ದರು. ಇದರಲ್ಲಿ ಲಾಂಗ್ ಶಾಟ್ ಮತ್ತು ಶಾರ್ಟ್ ಶಾಟ್​ಗಳನ್ನು ಒಂದೇ ಬ್ಯಾಟ್​ನಲ್ಲಿ ಆಡುವ ವಿಧಾನವನ್ನು ಕಂಡು ಹಿಡಿದಿದ್ದರು.ಇದರಿಂದಾಗಿ ಆಟಗಾರನಿಗೆ ಇನ್ನೊಂದು ಬ್ಯಾಟ್ ಅಗತ್ಯವಿಲ್ಲ. ಅವರು ಈ ಬ್ಯಾಟ್‌ಗೆ ಪೇಟೆಂಟ್ ಕೂಡ ಪಡೆದರು. ಇದಲ್ಲದೇ ಬೌಲಿಂಗ್ ಮಾಡುವ ರೋಬೋ ಯೋಜನೆಯಲ್ಲಿ ಕೆಲಸ ಮಾಡಿದ್ದಾರೆ. ಹಾಗೆ ಎಲ್ಪಿಜಿ ಇಂಧನವನ್ನು ಉಳಿಸುವ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಫೋಲ್ಡ್​ ಸೈಕಲ್​ ವಿನ್ಯಾಸಗೊಳಿಸಿ ಪೇಟೆಂಟ್ ಪಡೆದ ಕಾಲೇಜು ಪ್ರಾಧ್ಯಾಪಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.