ಅಮೃತಸರ: ಆನ್‌ಲೈನ್‌ನಲ್ಲಿ ಪ್ರಾರಂಭವಾದ ಗಡಿಯಾಚೆಗಿನ 'ಲವ್ ಸ್ಟೋರಿ'ಯಲ್ಲಿ, ಪಾಕಿಸ್ತಾನದಲ್ಲಿನ ಪ್ರಿಯಕರನನ್ನು ಭೇಟಿ ಮಾಡಲು ವಾಘಾ ಗಡಿ ದಾಟುತ್ತಿದ್ದ ವಿವಾಹಿತ ಮಹಿಳೆಯನ್ನು ಅಮೃತಸರ ಪೊಲೀಸರು ಬಂಧಿಸಿದ್ದಾರೆ.
ಮೂಲಗಳ ಪ್ರಕಾರ, ರಾಜಸ್ಥಾನದ 25 ವರ್ಷದ ವಿವಾಹಿತ ಮಹಿಳೆಗೆ ಮಗುವಿದ್ದು, ರಾಜಸ್ಥಾನದಲ್ಲಿ ನೆಲೆಸಿದ್ದಾರೆ. ಆನ್‌ಲೈನ್‌ನಲ್ಲಿ ಲುಡೋ ಗೇಮ್ ಆಡುವಾಗ ಪಾಕಿಸ್ತಾನದ ವ್ಯಕ್ತಿ ಪರಿಚಯವಾಗಿದ್ದಾನೆ. ನಂತರ ಫೇಸ್‌ಬುಕ್ ಮತ್ತು ವಾಟ್ಸ್ ಆ್ಯಪ್ನಲ್ಲಿ ಸಂಪರ್ಕ ಹೊಂದಿದ್ದು, ಪ್ರೀತಿಯಲ್ಲಿ ಬಿದ್ದಿದ್ದರು.
ಪ್ರಿಯಕರನಿಗಾಗಿ ಮಹಿಳೆ ತನ್ನ ಕುಟುಂಬವನ್ನು ಬಿಟ್ಟು ಹೋಗಲು ಸಿದ್ಧಳಾಗಿದ್ದು, ವಾಘಾ ಗಡಿಯನ್ನು ತಲುಪಲು ಆಟೋ ಹಿಡಿದ್ದಳು. ಪಾಕಿಸ್ತಾನ ವ್ಯಕ್ತಿ ವಾಟ್ಸ್ ಆ್ಯಪ್‌ಗೆ ಕರೆ ಮಾಡಿ ಮಹಿಳೆಯನ್ನು ವಾಘಾ ಗಡಿಯಲ್ಲಿ ಡ್ರಾಪ್ ಮಾಡುವಂತೆ ಆಟೋ ಚಾಲಕನಿಗೆ ಹೇಳಿದ್ದಾನೆ. ಆಟೋ ಚಾಲಕನಿಗೆ ಅನುಮಾನ ಬಂದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಈ ವಿಷಯವನ್ನು ಕೈಗೆತ್ತಿಕೊಂಡ ಅಮೃತಸರ ಪೊಲೀಸರು ಮಹಿಳೆಯನ್ನು ವಿಚಾರಿಸಿದಾಗ ಆತ (ಪಾಕಿಸ್ತಾನದ ವ್ಯಕ್ತಿ) ನನ್ನನ್ನು ಪಾಕಿಸ್ತಾನಕ್ಕೆ ಆಹ್ವಾನಿಸಿದ್ದ. ನಾನು ಅಲ್ಲಿಗೆ ಹೇಗೆ ಬರಬಹುದು ಎಂದು ಕೇಳಿದಾಗ, ಅವರು ನನಗೆ ವಾಘಾ ಗಡಿಗೆ ಬರಲು ಹೇಳಿದ್ದರು ಎಂದು ಮಹಿಳೆ ತಿಳಿಸಿದ್ದಾಳೆ. ಸದ್ಯ ಗಡಿ ದಾಟುತ್ತಿದ್ದ ಮಹಿಳೆಯನ್ನು ವಿಚಾರಣೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಭದ್ರತಾ ಲೋಪ : ಇಂದು ಸುಪ್ರೀಂ ಕೋರ್ಟ್ನಲ್ಲಿ ತನಿಖೆಗಾಗಿ ಸಲ್ಲಿಸಿರುವ ಅರ್ಜಿ ವಿಚಾರಣೆ