ETV Bharat / bharat

ಅಮೃತ್​ಪಾಲ್ ತಲೆಮರೆಸಿಕೊಂಡು ಓಡಾಡುತ್ತಿರುವ ಸಿಸಿಟಿವಿ ವಿಡಿಯೋ ವೈರಲ್​ - ಸಿಸಿಟಿವಿ ವೀಡಿಯೋಗಳು ಸದ್ಯ ವೈರಲ್​

ವಾರದ ಹಿಂದೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಅಮೃತ್​ಪಾಲ್​ ಮರ್ಸಿಡಿಸ್​ ಬೆನ್ಜ್​ ಕಾರು ಉಪಯೋಗಿಸಿದ್ದನು.

Amritpal was caught on CCTV video
ಸಿಸಿಟಿವಿ ವೀಡಿಯೋದಲ್ಲಿ ಅಮೃತ್​ಪಾಲ್​ ಸೆರೆ
author img

By

Published : Mar 25, 2023, 9:25 PM IST

ಸಿಸಿಟಿವಿ ವೀಡಿಯೋದಲ್ಲಿ ಅಮೃತ್​ಪಾಲ್​ ಸೆರೆ

ಪಟಿಯಾಲಾ (ಲುಧಿಯಾನ): ಬಂಧನ ಭೀತಿಯಿಂದ ಪೊಲೀಸರ ಕಣ್ತಪ್ಪಿಸಿಕೊಂಡು ಓಡಾಡುತ್ತಿರುವ ಖಲಿಸ್ತಾನ್​ ಪ್ರತ್ಯೇಕತಾವಾದಿ ಅಮೃತ್​ಪಾಲ್​ ಸಿಂಗ್​ ಮಾರ್ಚ್​ 18 ರಿಂದ 20 ರವರೆಗೆ ಪಂಜಾಬ್​ನಲ್ಲಿ ಮಾರುವೇಷದಲ್ಲಿ ತಿರುಗಾಡುತ್ತಿದ್ದ ಹಾಗೂ ಪಂಜಾಬ್​ನಿಂದ ಆತ ತಪ್ಪಿಸಿಕೊಳ್ಳಲು ಪಾಪಲ್​ಪ್ರೀತ್​ ಸಿಂಗ್​ ಮತ್ತು ಬಲ್ಜಿತ್​ ಕೌರ್​ ಸಹಾಯ ಪಡೆದಿರುವುದು ಈಗ ಸಿಸಿಟಿವಿ ದೃಶ್ಯಗಳಿಂದ ಸ್ಪಷ್ಟವಾಗಿದೆ. ಆ ಬಗೆಗಿನ ಸಿಸಿಟಿವಿ ವೀಡಿಯೋಗಳು ಈಗ ಬಯಲಿಗೆ ಬಂದಿವೆ.

ಮಾರ್ಚ್​ 18 ರಂದು ಪಂಜಾಬ್​ ಪೊಲೀಸರು ವಾರಿಸ್​ ಪಂಜಾಬ್​ ದಿ ಸಂಘಟನೆಯ ಮುಖ್ಯಸ್ಥ ಅಮೃತ್​ಪಾಲ್​ ಸಿಂಗ್​ ಹಾಗೂ ಆತನ ಸಹಚರರನ್ನು ಬಂಧಿಸುವ ಸಲುವಾಗಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ವೇಳೆ ಅಮೃತ್​ಪಾಲ್​ ಸಿಂಗ್​ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದನು. ಆತನ ಕೆಲವು ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಆತನ ತಂದೆ ಮಾತ್ರ ತಮ್ಮ ಮಗನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆದರೆ ಅಮೃತ್​ಪಾಲ್​ ಸಿಂಗ್​ ಪರಾರಿಯಾಗಿದ್ದಾನೆ, ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು.

ಸಹಚರರಿಂದ ತಪ್ಪಿಸಿಕೊಳ್ಳಲು ಸಹಾಯ: ಮಾರ್ಚ್​ 18 ರ ರಾತ್ರಿಯ ಸಿಸಿಟಿವಿ ವಿಡಿಯೋ ಹೊರಬಂದಿದೆ. ಈ ವಿಡಿಯೋದಲ್ಲಿ ಅಮೃತ್​ಪಾಲ್​ಗೆ ತಪ್ಪಿಕೊಳ್ಳಲು ಅವನ ಸಹಚರ ಪಾಪಲ್​ ಪ್ರೀತ್​ ಸಹಾಯ ಮಾಡಿರುವುದು ಬಯಲಾಗಿದೆ. ಲುಧಿಯಾನ ರಸ್ತೆಯಲ್ಲಿ ಅಮೃತ್​ಪಾಲ್​ ಸಿಂಗ್​ ಮತ್ತು ಸಹಚರ ಪಾಪಲ್​ಪ್ರೀತ್​ ಸಿಂಗ್​ ಕಾಣಿಸಿಕೊಂಡಿದ್ದಾರೆ. ಗುಲಾಬಿ ಬಣ್ಣದ ಪೇಟ ಧರಿಸಿದ ಅಮೃತ್​ಪಾಲ್​ ರಸ್ತೆಯಲ್ಲಿ ಕಾಣಿಸಿಕೊಂಡಿದ್ದಾನೆ. ಸ್ಕೂಟಿ ಸವಾರನೊಬ್ಬನ ಬಳಿ ಫಿಲ್ಲೌರ್​ನಿಂದ ಲಡೋವಲ್​ನ ಕಚ್ಚಾರಸ್ತೆವರೆಗೆ ಲಿಫ್ಟ್​ ತೆಗೆದುಕೊಂಡು ಬಂದು ತಲುಪಿದ್ದಾನೆ.

ಇಲ್ಲೂ ಸಿಸಿಟಿವಿ ಕ್ಯಾಮರಾದಲ್ಲಿ ಈತ ಕಾಣಿಸಿಕೊಂಡಿದ್ದಾನೆ. ಸಿಸಿಟಿವಿ ವಿಡಿಯೋದಲ್ಲಿ ಇಬ್ಬರ ಜೊತೆ ಮೂರನೇ ವ್ಯಕ್ತಿಯೂ ಕಾಣಿಸಿಕೊಂಡಿದ್ದು, ಆತನ ಗುರುತು ಪತ್ತೆಯಾಗಿಲ್ಲ. ಅಮೃತಪಾಲ್ ಸಿಂಗ್ ಲಾಡೋವಾಲ್‌ನಿಂದ ಜಲಂಧರ್ ಬೈಪಾಸ್‌ಗೆ ಆಟೋದಲ್ಲಿ ತೆರಳಿ, ಅಲ್ಲಿಂದ ಶೇರ್​ಪುರ್​ ಚೌಕ್‌ಗೆ ಆಟೋದಲ್ಲಿ ತೆರಳಿದ್ದನು ಎಂದು ಹೇಳಲಾಗುತ್ತಿದೆ. ಅಮೃತಪಾಲ್ ಪಾಪಲ್ಪ್ರೀತ್ ಜೊತೆ ಬಸ್​ಗೆ ಸಮೀಪಿಸುತ್ತಿರುವ ವಿಡಿಯೋ ಕೂಡ ಶೇರ್​ಪುರ್ ಚೌಕ್​ನಲ್ಲಿ ಬೆಳಕಿಗೆ ಬಂದಿದೆ.

ಬಿಳಿ ಬಣ್ಣದ ಆಕ್ಟಿವಾದಲ್ಲಿ ತೆರಳಿದ ಅಮೃತ್​ಪಾಲ್​: ಮಾಧ್ಯಮ ವರದಿಗಳ ಪ್ರಕಾರ, ಪಟಿಯಾಲ ರಸ್ತೆಯಲ್ಲಿರುವ ಗುರುದ್ವಾರ ಸಹರ್ ನಿವಾರನ್ ಸಾಹಿಬ್ ಬಳಿ ಅಮೃತಪಾಲ್ ಸಿಂಗ್​ ಕಾಣಿಸಿಕೊಂಡಿದ್ದಾನೆ. ಸ್ಕೂಟಿಯಲ್ಲಿ ಬಂದ ಅಮೃತ್​ಪಾಲ್​ ಗುರುತು ಪತ್ತೆಯಾಗದಂತೆ ಮುಖಕ್ಕೆ ಮಾಸ್ಕ್​ ಹಾಕಿಕೊಂಡಿದ್ದನು. ಫೋಟೋದಲ್ಲಿ ಅಮೃತ್​ಪಾಲ್​ ಒಂದು ಕೈಯಲ್ಲಿ ಕಪ್ಪು ಚೀಲವನ್ನು ಹಿಡಿದುಕೊಂಡಿರುವುದು ಕಾಣಿಸುತ್ತಿದೆ. ಆತನ ಜೊತೆ ಇದ್ದ ಸಹಚರ ಪಾಪಲ್​ಪ್ರೀತ್​ ಸಿಂಗ್​ ಕಪ್ಪು ಜೀನ್ಸ್​ನಲ್ಲಿ ಕಾಣಿಸಿಕೊಂಡಿದ್ದನು.

ಪಾಪಲ್​ಪ್ರೀತ್​ ಕೂಡ ತನ್ನ ಚಹರೆಯನ್ನು ಮರೆಮಾಚಲು ನೈಸರ್ಗಿಕ ಗಡ್ಡದ ಬದಲು ಕೃತಕ ಗಡ್ಡವನ್ನು ಕಟ್ಟಿಕೊಂಡಿದ್ದನು. ಪೊಲೀಸರು ಹೇಳುವಂತೆ ಅಮೃತ್​ಪಾಲ್​ ಸಿಂಗ್​ ತನ್ನ ಸಹಚರ ಪಾಪಲ್​ಪ್ರೀತ್​ ಸಿಂಗ್​ ಜೊತೆ ಶಹಾಬಾದ್​ನ ಸಿದ್ಧಾರ್ಥ್​ ಕಾಲೊನಿಯಲ್ಲಿ ಒಂದು ದಿನ ತಂಗಿದ್ದನು. ಅಮೃತ್​ ಪಾಲ್​ ಹಾಗೂ ಸಹಚರ ಪಾಪಲ್​ಪ್ರೀತ್​​ ಬಿಳಿ ಬಣ್ಣದ ಆ್ಯಕ್ಟಿವಾದಲ್ಲಿ ಶಹಾದಾಬಾದ್​ ತಲುಪಿದ್ದು, ಮರುದಿನ ಅಲ್ಲಿಂದ ಬಲ್ಜಿತ್​ ಕೌರ್​ ಅದೇ ಆ್ಯಕ್ಟಿವಾದಲ್ಲಿ ಪಟಿಯಾಲದಲ್ಲಿ ಬಿಟ್ಟಿದ್ದಾನೆ. ಈ ದೃಶ್ಯಗಳೆಲ್ಲವೂ ಸಮೀಪದ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಎಲ್ಲವೂ ಈಗ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಪರಾರಿಯಾಗಲು ಮರ್ಸಿಡಿಸ್ ಬೆಂಜ್, ಎಸ್‌ಯುವಿ ಕಾರು, ಬೈಕ್‌ ಬಳಸಿದ ಅಮೃತ್‌ಪಾಲ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.