ಹೈದರಾಬಾದ್ : ಜಿಹೆಚ್‌ಎಂಸಿ ಚುನಾವಣೆಯ ಪ್ರಚಾರಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಹೈದರಾಬಾದ್‌ಗೆ ಆಗಮಿಸಿದ್ದಾರೆ.
ಬಿಜೆಪಿಯ ಚುನಾವಣಾ ಉಸ್ತುವಾರಿ ಭೂಪೇಂದರ್ ಯಾದವ್ ಮತ್ತು ಪಕ್ಷದ ಒಬಿಸಿ ಮೋರ್ಚಾ ಅಧ್ಯಕ್ಷ ಕೆ ಲಕ್ಷ್ಮಣ್, ಬೇಗಂಪೇಟ್ ವಿಮಾನ ನಿಲ್ದಾಣದಿಂದ ಅಮಿತ್ ಶಾರನ್ನು ಬರಮಾಡಿಕೊಂಡರು. ಸಾರ್ವಜನಿಕ ಱಲಿಯಲ್ಲಿ ಪಾಲ್ಗೊಳ್ಳುವ ಮುನ್ನ ಚಾರ್ಮಿನಾರ್ ಬಳಿಯ ಭಾಗ್ಯಲಕ್ಷಿ ಮಂದಿರಕ್ಕೆ ಶಾ ಭೇಟಿ ನೀಡಲಿದ್ದಾರೆ.
ಬಳಿಕ ಸಿಕಂದರಾಬಾದ್‌ನಿಂದ ವರಸಿಗುಡ ಚೌರಸ್ತಾ ಮೂಲಕ ಸೀತಾಫಲ್ಮಂಡಿಯ ಹನುಮಾನ್ ದೇವಸ್ಥಾನದವರೆಗೆ ಶಾ ರೋಡ್ ಶೋ ನಡೆಸಲಿದ್ದಾರೆ. ಸನತ್ ನಗರ, ಖೈರತಾಬಾದ್ ಮತ್ತು ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರಗಳಲ್ಲಿ ಶಾ ರೋಡ್ ಶೋ ನಡೆಸಲಿದ್ದಾರೆ. ಬಳಿಕ ನಾಂಪಲ್ಲಿಯಲ್ಲಿರುವ ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಲಿದ್ದಾರೆ. ಸಂಜೆ 5:30 ಸುಮಾರಿಗೆ ಅವರು ದೆಹಲಿಗೆ ಹಿಂದಿರುಗುವ ಸಾಧ್ಯತೆಯಿದೆ.
ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಸೇರಿದಂತೆ ಹಲವು ಪ್ರಮುಖ ಬಿಜೆಪಿ ಮುಖಂಡರು ಜಿಹೆಚ್‌ಎಂಸಿ ಚುನಾವಣೆಗೆ ಪ್ರಚಾರ ನಡೆಸಿದ್ದಾರೆ.