ಗುವಾಹಟಿ(ಅಸ್ಸೋಂ): ಮುಂಬರುವ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಅಸ್ಸೋಂಗೆ ಬಂದಿಳಿದಿದ್ದಾರೆ. ಕೊಕ್ರಜಾರ್ನಲ್ಲಿ ಬೋಡೋಲ್ಯಾಂಡ್ ಪ್ರಾದೇಶಿಕ ಮಂಡಳಿ(ಬಿಟಿಸಿ) ಜತೆ ಸಭೆ ನಡೆಸಿದ ಬಳಿಕ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಓದಿ: 'ದಿ ಗ್ರೇಟ್ ಎಸ್ಕೇಪ್': ಭಾರತದಲ್ಲಿ ಸುಭಾಷ್ ಚಂದ್ರ ಬೋಸ್ರ ಕೊನೆ ಪ್ರಯಾಣ!
ಈ ವರ್ಷದ ಕೊನೆಯಲ್ಲಿ ಅಸ್ಸೋಂನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಈಗಿನಿಂದಲೇ ತಯಾರಿ ನಡೆಸಿರುವ ಬಿಜೆಪಿ ಚಾಣಕ್ಯ ಬೆಳ್ಳಂಬೆಳಗ್ಗೆ ಅಸ್ಸೋಂನ ಗುವಾಹಟಿಗೆ ಆಗಮಿಸಿದ್ದಾರೆ. ನಲ್ಬರಿ ಸೇರಿದಂತೆ ಎರಡು ಸಾರ್ವಜನಿಕ ಸಭೆಗಳಲ್ಲಿ ಭಾಗಿಯಾಗಿ ಮಾತನಾಡಲಿದ್ದಾರೆ.
ಒಂದೇ ತಿಂಗಳಲ್ಲಿ ಅಮಿತ್ ಶಾ ಹಮ್ಮಿಕೊಂಡಿರುವ ಎರಡನೇ ಪ್ರವಾಸ ಇದಾಗಿದ್ದು, ಕೆಲವೊಂದು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಸಂಚಲನ ಸೃಷ್ಟಿ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದೀಗ ಅಸ್ಸೋಂ ಪ್ರವಾಸ ಕೈಗೊಂಡಿದ್ದಾರೆ.