ETV Bharat / bharat

ಹಿಂದೂ ಮಹಿಳೆಯರ ಹೀಯಾಳಿಸಿ, ಹಿಜಾಬ್​ ಬೆಂಬಲಿಸಿ ಮಧ್ಯಪ್ರದೇಶದಲ್ಲಿ ಪೋಸ್ಟರ್​ ಅಂಟಿಸಿದ ದುಷ್ಕರ್ಮಿಗಳು - ಹಿಜಬ್​ ಬೆಂಬಲಿಸಿ ಮಧ್ಯಪ್ರದೇಶದಲ್ಲಿ ವಿವಾದಾತ್ಮಕ ಪೋಸ್ಟರ್​

ಕರ್ನಾಟಕದ ಹಿಜಾಬ್- ಕೇಸರಿ ಸಂಘರ್ಷ ದೇಶದಲ್ಲಿಯೇ ಸದ್ದು ಮಾಡುತ್ತಿದೆ. ಈ​ ಸಂಘರ್ಷದ ಬಿಸಿ ಮಧ್ಯಪ್ರದೇಶಕ್ಕೂ ತಾಕಿದ್ದು, ಇಲ್ಲಿನ ಚುನಾವಣಾ ಆಯೋಗದ ಕಚೇರಿಗೆ ಅಪರಿಚಿತ ಗುಂಪೊಂದು ಹಿಜಾಬ್​ ಪರವಾದ ವಿವಾದಾತ್ಮಕ ಘೋಷವಾಕ್ಯವುಳ್ಳ ಪೋಸ್ಟರ್​ ಅಂಟಿಸಿದೆ.

communal posters
ಹಿಜಬ್​ ಬೆಂಬಲಿಸಿ
author img

By

Published : Feb 10, 2022, 10:33 PM IST

ಉಜ್ಜಯಿನಿ(ಮಧ್ಯಪ್ರದೇಶ): ಕರ್ನಾಟಕದ ಹಿಜಾಬ್- ಕೇಸರಿ ಸಂಘರ್ಷ ದೇಶದಲ್ಲಿಯೇ ಸದ್ದು ಮಾಡುತ್ತಿದೆ. ಈ​ ಸಂಘರ್ಷದ ಬಿಸಿ ಮಧ್ಯಪ್ರದೇಶಕ್ಕೂ ತಾಕಿದ್ದು, ಇಲ್ಲಿನ ಚುನಾವಣಾ ಆಯೋಗದ ಕಚೇರಿಗೆ ಅಪರಿಚಿತ ಗುಂಪೊಂದು ಹಿಜಾಬ್​ ಪರವಾದ ವಿವಾದಾತ್ಮಕ ಘೋಷವಾಕ್ಯವುಳ್ಳ ಪೋಸ್ಟರ್​ ಅಂಟಿಸಿದೆ.

'ತಮ್ಮ ಹೆಣ್ಣು ಮಕ್ಕಳನ್ನು ಮಾರುಕಟ್ಟೆಯ ಮೂಲಕ ಅರೆಬೆತ್ತಲೆಯಾಗಿ ಮೆರವಣಿಗೆ ಮಾಡುವವರಿಗೆ ಹಿಜಾಬ್‌ನ ಮಹತ್ವ ತಿಳಿದಿಲ್ಲ. ಇದು ಗೌರವಾನ್ವಿತ ಮಹಿಳೆಯ ಮರ್ಯಾದೆಯ ಸಂಕೇತವಾಗಿದೆ. ನಿಮ್ಮ ಮಹಿಳೆಯರಿಗೆ ಇದನ್ನು ಧರಿಸುವ ಭಾಗ್ಯವಿಲ್ಲ ಎಂದು ಹಿಂದು ಮಹಿಳೆಯರನ್ನು ಹೀಯಾಳಿಸುವ ರೀತಿ ಪೋಸ್ಟರ್​ನಲ್ಲಿ ಬರೆಯಲಾಗಿದೆ. ಇದರ ಜೊತೆಗೆ 'ನಾರಾ-ಎ- ತಕ್ಬೀರ್ ಅಲ್ಲಾಹು ಅಕ್ಬರ್' ಎಂಬ ಧಾರ್ಮಿಕ ಘೋಷಣೆ ಮೊಳಗಿಸಲಾಗಿದೆ.

ಕೋಮು ಪ್ರಚೋದನೆ ನೀಡುವ ಬರಹವುಳ್ಳ ಪೋಸ್ಟರ್​ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸ್​ ಅಧಿಕಾರಿಗಳು ಪೋಸ್ಟರ್​ ಅನ್ನು ತೆಗೆದು ಹಾಕಿ, ಪೋಸ್ಟರ್​ ಅಂಟಿಸಿದ ದುಷ್ಕರ್ಮಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 294 ಮತ್ತು 505 ರ ಅಡಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ, ಪೋಸ್ಟರ್​ ಅಂಟಿಸಿದ ದುಷ್ಕರ್ಮಿಗಳ ಪತ್ತೆಗೆ ಆ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ: ಅಸ್ಸೋಂ - ರಾಜಸ್ಥಾನ ಪ.ಬಂಗಾಳದಲ್ಲಿ ಮೇಲ್ಮನೆ ರಚನೆಗೆ ಅಸ್ತು..17 ನ್ಯಾಯಮೂರ್ತಿಗಳ ನೇಮಿಸಿ ರಾಷ್ಟ್ರಪತಿ ಆದೇಶ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.