ETV Bharat / bharat

ಹವಾಮಾನದಲ್ಲಿ ಸುಧಾರಣೆ: 3 ದಿನದಿಂದ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನರಾರಂಭ - ಅಮರನಾಥ ಯಾತ್ರೆ

ನಿರಂತರ ಮಳೆ ಮತ್ತು ಹಿಮಪಾತದಿಂದಾಗಿ ಮೂರು ದಿನಗಳ ಕಾಲ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಭಾನುವಾರ ಪುನರಾರಂಭಗೊಂಡಿದೆ.

Amarnath Yatra
ಅಮರನಾಥ ಯಾತ್ರೆ
author img

By

Published : Jul 9, 2023, 1:10 PM IST

ಶ್ರೀನಗರ: ಹವಾಮಾನದಲ್ಲಿ ಸುಧಾರಣೆಯಾದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪಂಜತರ್ನಿ, ಶೇಷನಾಗ್ ಶಿಬಿರಗಳಿಂದ ಮೂರು ದಿನಗಳ ನಂತರ ಅಮರನಾಥ ಯಾತ್ರೆ ಪುನರಾರಂಭಗೊಂಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ಸತತ ಮೂರನೇ ದಿನವಾದ ಭಾನುವಾರ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂಬ ವರದಿಗಳ ನಂತರ ಈ ಬೆಳವಣಿಗೆ ನಡೆದಿದೆ.

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಿದ್ದರಿಂದ ಅಧಿಕಾರಿಗಳು ಭಾನುವಾರ ಜಮ್ಮು ಬೇಸ್ ಕ್ಯಾಂಪ್‌ನಲ್ಲಿ ಭಕ್ತರ ಗುಂಪನ್ನು ತಡೆದಿದ್ದರು. ಯಾತ್ರೆಯನ್ನು ಸ್ಥಗಿತಗೊಳಿಸಿದ ನಂತರ 6 ಸಾವಿರ ಅಮರನಾಥ ಯಾತ್ರಾರ್ಥಿಗಳು ರಾಂಬನ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು. ಪ್ರತಿಕೂಲ ಹವಾಮಾನದ ಕಾರಣ ಅಮರನಾಥ ಗುಹೆಯಿಂದ 6 ಕಿ.ಮೀ ದೂರದಲ್ಲಿರುವ ಪಂಚತಾರ್ಣಿಯಲ್ಲಿ ಕರ್ನಾಟಕದ ಕನಿಷ್ಠ 80 ಜನರು ಸಿಲುಕಿಕೊಂಡಿದ್ದಾರೆ ಎಂದು ಕರ್ನಾಟಕ ಸರ್ಕಾರ ಶನಿವಾರ ತಿಳಿಸಿತ್ತು.

ಇದನ್ನೂ ಓದಿ: ಅಮರನಾಥ ಯಾತ್ರೆಯಲ್ಲಿ ಹವಾಮಾನ ವೈಪರೀತ್ಯ.. ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು; ಅಗತ್ಯ ಕ್ರಮಕ್ಕೆ ಸಿಎಂ ಸೂಚನೆ

"ಅಮರನಾಥ ಯಾತ್ರೆಯನ್ನು ಪ್ರತಿಕೂಲ ಹವಾಮಾನದಿಂದಾಗಿ ನಿನ್ನೆ ಸ್ಥಗಿತಗೊಳಿಸಲಾಗಿದೆ. ಯಾತ್ರಿಕರಿಗೆ ಇಲ್ಲಿನ ಯಾತ್ರಿ ನಿವಾಸದಲ್ಲಿ ನಾವು ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದೇವೆ. ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನಾವು ಸಕಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ" ಎಂದು ಡೆಪ್ಯೂಟಿ ಕಮಿಷನರ್ ರಾಂಬನ್ ಮುಸ್ಸರತ್ ಇಸ್ಲಾಂ ಮಾಧ್ಯಮಗಳಿಗೆ ತಿಳಿಸಿದ್ದರು.

ಭೂಕುಸಿತದಿಂದಾಗಿ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿ (NH44) ರಾಂಬನ್‌ನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಜುಲೈ 1ರಂದು ಯಾತ್ರೆ ಆರಂಭವಾದಾಗಿನಿಂದ ಕನಿಷ್ಠ 67,566 ಯಾತ್ರಿಕರು ಅಮರನಾಥ ಗುಹೆ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಜು.5 ರಂದು ಸುಮಾರು 18,354 ಯಾತ್ರಿಕರು ಬಾಲ್ಟಾಲ್ ಬೇಸ್ ಕ್ಯಾಂಪ್ ಮತ್ತು ನುನ್ವಾನ್ ಬೇಸ್ ಕ್ಯಾಂಪ್‌ನಿಂದ ದೇಗುಲಕ್ಕೆ ತೆರಳಿದರು. ಇವರಲ್ಲಿ 12,483 ಪುರುಷರು, 5,146 ಮಹಿಳೆಯರು, 457 ಮಕ್ಕಳು, 266 ಸಾಧುಗಳು ಮತ್ತು 2 ಸಾಧ್ವಿಗಳು ಸೇರಿದ್ದಾರೆ" ಎಂದು ಈ ವಾರದ ಆರಂಭದಲ್ಲಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆರಂಭದಿಂದಲೂ ದರ್ಶನ ಪಡೆದ ಒಟ್ಟು ಯಾತ್ರಿಗಳ ಸಂಖ್ಯೆ 67,566. ಮುಂದಿನ ದಿನಗಳಲ್ಲಿ ಇನ್ನಷ್ಟು ಯಾತ್ರಿಗಳು ದೇಗುಲಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಂದಾಜಿಸಲಾಗಿದೆ. ಜು.1 ರಂದು ಪ್ರಾರಂಭವಾದ 62 ದಿನಗಳ ಅವಧಿಯ ಅಮರನಾಥ ಯಾತ್ರೆ ಶ್ರಾವಣ ಪೂರ್ಣಿಮಾ ಹಬ್ಬದೊಂದಿಗೆ ಆಗಸ್ಟ್ 31 ರಂದು ಕೊನೆಗೊಳ್ಳಲಿದೆ.

ಯಾತ್ರಾರ್ಥಿಗಳಿಗೆ ತಮ್ಮ ಸಂಪೂರ್ಣ ಪ್ರಯಾಣದ ಸಮಯದಲ್ಲಿ ರಾಜ್ಯ ಸಂಸ್ಥೆಗಳು ಮತ್ತು ನಾಗರಿಕ ಇಲಾಖೆಗಳಿಂದ ಎಲ್ಲಾ ಅಗತ್ಯ ವಸ್ತುಗಳು ಮತ್ತು ಸೌಲಭ್ಯಗಳನ್ನು ಒದಗಿಸುವ ಮೂಲಕ ಸಹಾಯ ಮಾಡಲಾಗುತ್ತಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. ಪೊಲೀಸ್, ಎಸ್‌ಡಿಆರ್‌ಎಫ್, ಸೇನಾ, ಅರೆಸೇನಾ, ಆರೋಗ್ಯ, ಪಿಡಿಡಿ, ಪಿಹೆಚ್‌ಇ, ಯುಎಲ್‌ಬಿ, ಮಾಹಿತಿ, ಅಗ್ನಿಶಾಮಕ ಸೇರಿದಂತೆ ಎಲ್ಲ ಇಲಾಖೆಗಳು ತಮ್ಮ ಸಿಬ್ಬಂದಿ ನಿಯೋಜನೆ ಮಾಡಿ ಭಕ್ತರ ಅವಶ್ಯಕತೆಗಳು ಪೂರೈಸುತ್ತಿವೆ.

ಅಮರನಾಥ ಗುಹೆಯ ಬಗ್ಗೆ ಒಂದಿಷ್ಟು..: ಅಮರನಾಥ ಗುಹೆ ಹಿಂದೂ ಧರ್ಮದ ಪವಿತ್ರ ಮತ್ತು ಪ್ರಮುಖ ಯಾತ್ರಾ ಕೇಂದ್ರಗಳಲ್ಲಿ ಒಂದು. ಈ ಪವಿತ್ರ ಸ್ಥಳ ಸಮುದ್ರ ಮಟ್ಟದಿಂದ 13,600 ಅಡಿ ಎತ್ತರದಲ್ಲಿದೆ. ಇದು ಶ್ರೀನಗರದಿಂದ ಈಶಾನ್ಯಕ್ಕೆ 135 ಕಿ.ಮೀ ದೂರದಲ್ಲಿದೆ.

ಯಾತ್ರೆಯ ಮಹತ್ವವೇನು?: ಅಮರನಾಥ ಗುಹೆಯನ್ನು ಪ್ರಾಚೀನ ಕಾಲದಲ್ಲಿ 'ಅಮರೇಶ್ವರ' ಎಂದು ಕರೆಯಲಾಗುತ್ತಿತ್ತು. ಹಿಮದಿಂದ ಕೂಡಿದ ಶಿವಲಿಂಗ ಇಲ್ಲಿ ರಚನೆಯಾಗುವುದರಿಂದ ಜನರು ಇದನ್ನು 'ಬಾಬಾ ಬರ್ಫಾನಿ' ಎಂತಲೂ ಕರೆಯುತ್ತಾರೆ. ಪಾರ್ವತಿ ದೇವಿಯ ಶಕ್ತಿ ಪೀಠ ಅಮರನಾಥ ಗುಹೆಯಲ್ಲಿದೆ. ಇದು 51 ಶಕ್ತಿ ಪೀಠಗಳಲ್ಲಿ ಒಂದು. ಇಲ್ಲಿ ಭಗವತಿ ದೇವಿಯ ಕೊರಳು ಬಿದ್ದಿದೆ ಎಂದು ಹೇಳಲಾಗುತ್ತದೆ. ಪವಿತ್ರ ಗುಹೆಯಲ್ಲಿ ನಿರ್ಮಾಣವಾಗುವ ಶಿವಲಿಂಗವನ್ನು ಶುದ್ಧ ಮನಸ್ಸಿನಿಂದ ಮತ್ತು ಭಕ್ತಿಯಿಂದ ಭೇಟಿ ಮಾಡುವ ಭಕ್ತ ಮೋಕ್ಷ ಪಡೆಯುತ್ತಾನೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಅಮರನಾಥ ಗುಹೆ ಬೇಸಿಗೆಯಲ್ಲಿ ಹೊರತುಪಡಿಸಿ ಹೆಚ್ಚಿನ ಸಮಯ ಹಿಮದಿಂದ ಆವೃತವಾಗಿರುತ್ತದೆ. ಗುಹೆಯ ರಹಸ್ಯವೆಂದರೆ ಇಲ್ಲಿನ ಶಿವಲಿಂಗ ನೈಸರ್ಗಿಕವಾಗಿ ರೂಪುಗೊಂಡಿದೆ.

ಇದನ್ನೂ ಓದಿ: ಹವಾಮಾನ ವೈಪರೀತ್ಯದಿಂದ ಅಮರನಾಥ ಯಾತ್ರೆ ತಾತ್ಕಾಲಿಕವಾಗಿ ಸ್ಥಗಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.