ETV Bharat / bharat

Amarnath Yatra: ಕೋವಿಡ್​ನಿಂದ ಈ ವರ್ಷವೂ ಅಮರನಾಥ ಯಾತ್ರೆ ರದ್ದು

ಕೊರೊನಾ ವೈರಸ್​ ಉಲ್ಬಣಗೊಳ್ಳುವ ಉದ್ದೇಶದಿಂದಾಗಿ ಈ ವರ್ಷವೂ ಅಮರನಾಥ ಯಾತ್ರೆ ರದ್ದುಗೊಳಿಸಲಾಗಿದೆ. ಆನ್​ಲೈನ್​ ಮೂಲಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿದು ಬಂದಿದೆ.

Amarnath Yatra
Amarnath Yatra
author img

By

Published : Jun 21, 2021, 7:32 PM IST

Updated : Jun 21, 2021, 7:45 PM IST

ಶ್ರೀನಗರ: ಅಮರನಾಥ ಯಾತ್ರೆ ಕೈಗೊಳ್ಳಲು ಕಾತರದಿಂದ ಕಾಯುತ್ತಿದ್ದ ಭಕ್ತರಿಗೆ ಇದೀಗ ಕಹಿ ಸುದ್ದಿ ಸಿಕ್ಕಿದೆ. ಕೊರೊನಾ ವೈರಸ್ ಅಲೆ ಕಾರಣದಿಂದಾಗಿ ಈ ವರ್ಷವೂ ಅಮರನಾಥ ಯಾತ್ರೆ ರದ್ದುಗೊಳಿಸಿದೆ. ಇದೇ ವಿಚಾರವಾಗಿ ಜಮ್ಮು-ಕಾಶ್ಮೀರ ಲೆಪ್ಟಿನೆಂಟ್​ ಗವರ್ನರ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಜಮ್ಮು - ಕಾಶ್ಮೀರ ಲೆಫ್ಟಿನೆಂಟ್​ ಗವರ್ನರ್​ ಮನೋಜ್​ ಸಿನ್ಹಾ ಟ್ವೀಟ್​ ಮಾಡಿದ್ದು, ಜನರ ಜೀವ ಉಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಾಂಕ್ರಾಮಿಕ ಸೋಂಕು ಕೊರೊನಾ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಹೀಗಾಗಿ 56 ದಿನಗಳ ಅಮರನಾಥ ಯಾತ್ರ ಈ ವರ್ಷವೂ ರದ್ದುಗೊಂಡಿದೆ. ಆದರೆ, ಆನ್​ಲೈನ್​ ಮೂಲಕ ದರ್ಶನ ಪಡೆದುಕೊಳ್ಳಬಹುದಾಗಿದೆ.

  • Shri Amarnathji Yatra cancelled in wake of Covid-19 Pandemic. Decision after threadbare discussion with Shri Amarnathji Shrine Board members. Yatra to be symbolic only. However, all the traditional religious rituals shall be performed at the Holy Cave Shrine as per past practice.

    — Office of LG J&K (@OfficeOfLGJandK) June 21, 2021 " class="align-text-top noRightClick twitterSection" data=" ">

ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಅಮರನಾಥ​ ದೇವಾಲಯಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಆದರೆ, ಅನೇಕ ಜನರು ಒಂದೆಡೆ ಸೇರುವುದರಿಂದ ಸೋಂಕು ಹಬ್ಬುವ ಸಾಧ್ಯತೆಯಿದ್ದು, ಈ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ವರ್ಷವೂ ಯಾತ್ರೆ ರದ್ದುಗೊಳಿಸಲಾಗಿತ್ತು.

ಇದನ್ನೂ ಓದಿರಿ: 10 ನಿಮಿಷದಲ್ಲಿ 108 ಸಲ 'ಸೂರ್ಯ ನಮಸ್ಕಾರ'.. ವಿಶ್ವ ದಾಖಲೆ ಬರೆದ ಮಹಿಳೆ

ಈ ವರ್ಷದ ಅಮರನಾಥ ಯಾತ್ರೆ ಜೂನ್​ 28ಕ್ಕೆ ಆರಂಭಗೊಂಡು, ಆಗಸ್ಟ್​​ 22ಕ್ಕೆ ಮುಕ್ತಾಯಗೊಳ್ಳಬೇಕಾಗಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದ್ದು, ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಳಗ್ಗೆ ಮತ್ತು ಸಂಜೆ ಆರತಿಯ ನೇರ ದರ್ಶನಕ್ಕೆ ವ್ಯವಸ್ಥೆ ಮಾಡಲು ಮಂಡಳಿಯು ನಿರ್ಧರಿಸಿದ್ದು, ಅದರ ನೇರ ದರ್ಶನಕ್ಕೆ ಆನ್​ಲೈನ್​ ವ್ಯವಸ್ಥೆ ಮಾಡಲಾಗಿದೆ.

Last Updated : Jun 21, 2021, 7:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.