ಜೈಪುರ್(ರಾಜಸ್ಥಾನ): ಕಳೆದ ಕೆಲ ತಿಂಗಳಿಂದ ರಾಜಸ್ಥಾನದಲ್ಲಿ ಒಂದಿಲ್ಲೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬರುತ್ತಿದ್ದು, ಮಂಗಳವಾರ ರಾತ್ರಿ ಅಲ್ವಾರ್ನಲ್ಲಿ ಅಪ್ರಾಪ್ತೆಯೋರ್ವಳ ಮೇಲೆ ಅತ್ಯಾಚಾರವೆಸಗಿರುವ ಶಂಕೆ ವ್ಯಕ್ತವಾಗಿದೆ.
14 ವರ್ಷದ ವಿಶೇಷ ಚೇತನ ಬಾಲಕಿ(ಕಿವುಡ ಮತ್ತು ಮೂಕ) ಗಂಭೀರ ಸ್ಥಿತಿಯಲ್ಲೇ ರಾಜಸ್ಥಾನದ ಅಲ್ವಾರ್ನ ತಿಜಾರಾ ಮೆಲ್ಸೇತುವೆ ಮೇಲೆ ಕಂಡುಬಂದಿದ್ದು, ಆಕೆಯ ದೇಹದ ಖಾಸಗಿ ಭಾಗದಲ್ಲಿ ತೀವ್ರ ರಕ್ತಸ್ರಾವವಾಗಿದೆ. ಇದೀಗ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ತಡರಾತ್ರಿ ಗಸ್ತು ನಡೆಸುತ್ತಿದ್ದಾಗ ಚಿಂತಾಜನಕ ಸ್ಥಿತಿಯಲ್ಲಿದ್ದ ಅಪ್ರಾಪ್ತೆಯನ್ನು ಪೊಲೀಸರು ನೋಡಿದ್ದು, ತಕ್ಷಣವೇ ಆಸ್ಪತ್ರೆಗೆ ಸೇರಿಸಿದ್ದಾರೆ. ಐಸಿಯುನಲ್ಲಿ ಬಾಲಕಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಎಸ್‌ಪಿ ತೇಜಸ್ವಿನಿ ಗೌತಮ್ ತಿಳಿಸಿದ್ದಾರೆ.
ಆದರೆ, ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಬಗ್ಗೆ ಇಲ್ಲಿಯವರೆಗೆ ದೃಢಗೊಂಡಿಲ್ಲ. ಪೊಲೀಸರು ವರದಿಗೋಸ್ಕರ ಕಾಯುತ್ತಿದ್ದಾರೆಂದು ತಿಳಿದು ಬಂದಿದೆ.
ಇದನ್ನೂ ಓದಿ: 10 ಸಾವಿರ ಪಿಂಚಣಿ ಹಣ ಪಡೆಯಲು ಬಂದಿದ್ದ ವೃದ್ಧನ ಬ್ಯಾಂಕ್ ಖಾತೆಯಲ್ಲಿತ್ತು 75 ಕೋಟಿ ರೂಪಾಯಿ!
ಸಂತ್ರಸ್ತೆಗೆ 8 ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸುತ್ತಿದೆ. ಬಾಕಿಯ ಗುದನಾಳ ಬೇರೊಂದು ಸ್ಥಳಕ್ಕೆ ಜಾರಿಕೊಂಡಿದೆ. ಹೀಗಾಗಿ ಮಲ ಹೊರಹೋಗಲು ಬೇರೆ ರಂಧ್ರ ಮಾಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬಾಲಕಿ ಮಾನಸಿಕ ಅಸ್ವಸ್ಥಳಾಗಿದ್ದು, ಆಕೆಯ ಕುಟುಂಬದ ಬಗ್ಗೆ ಇಲ್ಲಿಯವರೆಗೆ ಯಾವುದೇ ರೀತಿಯ ಮಾಹಿತಿ ತಿಳಿದು ಬಂದಿಲ್ಲ. ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿರುವ ಪೊಲೀಸರು ಈಗಾಗಲೇ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಆಸ್ಪತ್ರೆಗೆ ಈಗಾಗಲೇ ಮಕ್ಕಳ ಕಲ್ಯಾಣ ಸಚಿವೆ ಮಮತಾ ಭೂಪೇಶ್, ಕೈಗಾರಿಕಾ ಸಚಿವೆ ಶಕುಂತಲಾ ರಾವತ್ ಮತ್ತು ಮಕ್ಕಳ ಆಯೋಗದ ಅಧ್ಯಕ್ಷೆ ಸಂಗೀತಾ ಬೇನಿವಾಲ್ ಭೇಟಿ ನೀಡಿದ್ದು, ಆಕೆಯ ಸ್ಥಿತಿಗತಿ ವಿಚಾರಿಸಿದ್ದಾರೆ.