ETV Bharat / bharat

ಒಐಸಿಗೆ ಭಾರತ ಛೀಮಾರಿ:ಕಾರ್ಯದರ್ಶಿ ಹಿಸ್ಸೇನ್ ಪಿಒಕೆಗೆ ಭೇಟಿಗೆ ಪ್ರಬಲ ಆಕ್ಷೇಪ.. - ಜಮ್ಮು ಮತ್ತು ಕಾಶ್ಮೀರ

ಇಸ್ಲಾಮಿಕ್ ಸಹಕಾರ ಸಂಘಟನೆಯ (ಒಐಸಿ) ಪ್ರಧಾನ ಕಾರ್ಯದರ್ಶಿ ಹಿಸ್ಸೇನ್ ಬ್ರಾಹಿಂ ತಾಹಾ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಪಿಒಕೆಗೆ ಇತ್ತೀಚೆಗೆ ಮೂರು ದಿನಗಳ ಭೇಟಿ ನೀಡಿದ್ದರು. ಈ ವೇಳೆ ಜಮ್ಮು ಮತ್ತು ಕಾಶ್ಮೀರ ಕುರಿತು ಅವರು ನೀಡಿರುವ ಅಭಿಪ್ರಾಯಗಳನ್ನು ಭಾರತೀಯ ವಿದೇಶಾಂಗ ಸಚಿವಾಲಯ ಮಂಗಳವಾರ ಖಂಡಿಸಿ ತಳ್ಳಿಹಾಕಿದೆ.

MEA spokesperson Arindam Bagchi
ವಿದೇಶಾಂಗ ವಕ್ತಾರ ಅರಿಂದಮ್ ಬಾಗ್ಚಿ
author img

By

Published : Dec 13, 2022, 6:16 PM IST

ನವದೆಹಲಿ: ಇಸ್ಲಾಮಿಕ್ ರಾಷ್ಟ್ರಗಳ ಸಂಘಟನೆಯಾಗಿರುವ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಗೆ ಭಾರತ ಮತ್ತೊಮ್ಮೆ ಛೀಮಾರಿ ಹಾಕಿದೆ. ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಭೇಟಿ ಮತ್ತು ಜಮ್ಮು ಮತ್ತು ಕಾಶ್ಮೀರದ ಕುರಿತಾಗಿ ನೀಡಿದ ಇಸ್ಲಾಮಿಕ್ ಸಹಕಾರ ಸಂಘಟನೆಯ (ಒಐಸಿ) ಪ್ರಧಾನ ಕಾರ್ಯದರ್ಶಿಯನ್ನು ಭಾರತ ವಿದೇಶಾಂಗ ಸಚಿವಾಲಯ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ.

ಈ ಪ್ರದೇಶಗಳ ಬಗ್ಗೆ ಚರ್ಚಿಸುವುದಾಗಲಿ, ಗಡಿ ವಿಷಯಗಳಲ್ಲಿ ಭಾಗವಹಿಸುವುದು ಸಂಘಟನೆಗೆ ಸಮಂಜಸವಲ್ಲ. ಪಾಕ್ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಇಸ್ಲಾಮಿಕ್ ಸಹಕಾರ ಸಂಘಟನೆಯ (ಒಐಸಿ) ಪ್ರಧಾನ ಕಾರ್ಯದರ್ಶಿ ಹಿಸ್ಸೇನ್ ಬ್ರಾಹಿಂ ತಾಹಾ ಅವರ ಇತ್ತೀಚಿಗೆ ನೀಡಿದ ಮೂರು ದಿನಗಳ ಭೇಟಿ ಮತ್ತು ಜಮ್ಮು ಮತ್ತು ಕಾಶ್ಮೀರ ಕುರಿತು ಅವರು ನೀಡಿರುವ ಅಭಿಪ್ರಾಯಗಳನ್ನು ಸಚಿವಾಲಯ ಮಂಗಳವಾರ ಖಂಡಿಸಿ, ಸಂಪೂರ್ಣ ತಳ್ಳಿಹಾಕಿದೆ.

ಭಾರತೀಯ ವಿದೇಶಾಂಗ ವಕ್ತಾರ ಅರಿಂದಮ್ ಬಾಗ್ಚಿ ಮಾಧ್ಯಮದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, "ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಗೆ OIC ಪ್ರಧಾನ ಕಾರ್ಯದರ್ಶಿ ಭೇಟಿ ಹಾಗೂ J&K ಕುರಿತು ಅವರ ನೀಡಿದ ಕಾಮೆಂಟ್‌ಗಳನ್ನು ನಾವು ಬಲವಾಗಿ ಖಂಡಿಸಲಿದ್ದೇವೆ ಎಂದಿದ್ದಾರೆ.

ಭಾರತದ ಅವಿಭಾಜ್ಯ ಅಂಗ ಜಮ್ಮು ಮತ್ತು ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಮಾತನಾಡುವ ಹಾಗೂ ಭಾಗವಹಿಸುವುದಾಗಲಿ ಒಐಸಿಗೆ ಯಾವುದೇ ಸ್ಥಾನವಿಲ್ಲ ಎಂದು ಪುನರುಚ್ಚರಿಸಿದ ಅವರು OIC ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮತ್ತು ಮಧ್ಯಪ್ರವೇಶಿಸುವ ಯಾವುದೇ ಪ್ರಯತ್ನವು ಸಂಪೂರ್ಣವಾಗಿ ಒಪ್ಪುವುದಿಲ್ಲ" ಎಂದು ಆಕ್ಷೇಪಿಸಿದ್ದಾರೆ.

ಟೀಕಿಸಿದ ಬಾಗ್ಚಿ, "ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಗುಂಪುಗಾರಿಕೆ OIC , ಈಗಾಗಲೇ ಸಮಸ್ಯೆಗಳಿಗೆ ಸ್ಪಷ್ಟವಾದ ಕೋಮುವಾದ, ಪಕ್ಷಪಾತ ಮತ್ತು ವಾಸ್ತವಿಕ ತಪ್ಪಾದ ವಿಧಾನವನ್ನು ತೆಗೆದುಕೊಳ್ಳುವ ಮೂಲಕ ತನ್ನ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಪ್ರಧಾನ ಕಾರ್ಯದರ್ಶಿ ಹಿಸ್ಸೇನ್ ಬ್ರಾಹಿಂ ಪಿಒಕೆಗೆ ಭೇಟಿ ನೀಡಿದ ವೇಳೆ ಪಾಕಿಸ್ತಾನದ ಮುಖವಾಣಿಯಂತೆ ವರ್ತಿಸಿದ್ದಾರೆ " ಎಂದು ಆಪಾದಿಸಿದ್ದಾರೆ.

ಭಾರತದಲ್ಲಿ ಜಮ್ಮು ಹಾಗೂ ಕಾಶ್ಮೀರದಲ್ಲಿ ಭಯೋತ್ಪಾದನೆ ಉತ್ತೇಜಿಸುವ ಪಾಕಿಸ್ತಾನದ ಗಡಿಯಾಚೆಯ ನೀಚ ಕೃತ್ಯವನ್ನು ಖಂಡಿಸುತ್ತೇವೆ. ಮಧ್ಯೆಸ್ಥಿಕೆ ವಹಿಸುವವರು ಮೊದಲು ಪಾಕಿಸ್ಥಾನದ ಭಯೋತ್ಪಾದನೆ ಕೃತ್ಯವನ್ನೂ ತಡೆಯಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂಓದಿ:ಬಿಲ್ಕಿಸ್ ಬಾನು ಪ್ರಕರಣ: ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ 'ಸುಪ್ರೀಂ' ನ್ಯಾಯಮೂರ್ತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.