ವಿಜಯವಾಡ(ಆಂಧ್ರಪ್ರದೇಶ): ಆರ್ಥಿಕ ತೊಂದರೆಗಳಿಂದ ಗೃಹಿಣಿ ತನ್ನ ಇಬ್ಬರು ಹೆಣ್ಣುಮಕ್ಕಳ ಜತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯವಾಡ ಗ್ರಾಮೀಣ ವಲಯದ ನುನ್ನಾ ಪ್ರದೇಶದಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ಸುರೇಂದ್ರ ಮತ್ತು ವಾಣಿ ನಾಲ್ಕು ವರ್ಷಗಳ ಹಿಂದೆ ವಿವಾಹವಾದರು. ಅವರಿಗೆ ಭವನ (3) ಮತ್ತು ಅಕ್ಷಯ (10) ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ಸುರೇಂದ್ರ ಆಟೋ ಚಾಲಕನಾಗಿದ್ದ. ಈ ಹಿಂದೆ ಸುರೇಂದ್ರ ಅವರು ಹಳ್ಳಿಯಲ್ಲಿ ಚಿಲ್ಲರೆ ಅಂಗಡಿ ನಡೆಸುತ್ತಿದ್ದರು. ಹಣಕಾಸಿನ ತೊಂದರೆಗಳಿಂದ ಹೊರಬರಲು ವ್ಯವಹಾರದಲ್ಲಿ ಉಂಟಾದ ನಷ್ಟದಿಂದಾಗಿ ಅವರು ಕುಟುಂಬವನ್ನು ಬೆಳೆಸಲು ಆಟೋ ಓಡಿಸಲು ಪ್ರಾರಂಭಿಸಿದರು.
ತನ್ನ ಫೋನ್ ಹಾಳಾದ ಹಿನ್ನೆಲೆ ಅದನ್ನು ರಿಪೇರಿ ಮಾಡಿಸುವಂತೆ ಪತಿಯನ್ನು ಕೇಳಿದಳು. ಅದನ್ನು ಆತ ನಿರಾಕರಿಸಿದ್ದಕ್ಕಾಗಿ ಮನನೊಂದು ತನ್ನ ಇಬ್ಬರು ಮಕ್ಕಳ ಜತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ ಎಂದು ಸಿಐ ಹನೀಶ್ ಹೇಳಿದ್ದಾರೆ.