ETV Bharat / bharat

ವಿಮಾನಗಳಲ್ಲಿ ಕೊರೊನಾ ನಿಯಮ ಪಾಲಿಸಿದ 7 ಮಂದಿ ಪ್ರಯಾಣಿಕರು ಡಿ - ಬೋರ್ಡ್

ಎಚ್ಚರಿಕೆ ನೀಡಿದ ಬಳಿಕವೂ ವಿಮಾನದೊಳಗೆ ಕೊರೊನಾ ನಿಯಮ ಪಾಲಿಸದ ಏಳು ಮಂದಿ ಪ್ರಯಾಣಿಕರನ್ನು ಈವರೆಗೆ ಡಿ - ಬೋರ್ಡ್ ಮಾಡಲಾಗಿದೆ.

Alliance Air, IndiGo & Air Asia have de-boarded 7 passengers
ವಿಮಾನಗಳಲ್ಲಿ ಕೊರೊನಾ ನಿಯಮ ಪಾಲಿಸಿದ 7 ಮಂದಿ ಪ್ರಯಾಣಿಕರು ಡಿ-ಬೋರ್ಡ್
author img

By

Published : Mar 18, 2021, 12:48 PM IST

ನವದೆಹಲಿ: ತಮ್ಮ ವಿಮಾನಗಳಲ್ಲಿ ಕೋವಿಡ್​ ನಿಯಮಾವಳಿಗಳನ್ನು ಅನುಸರಿಸದ ಏಳು ಮಂದಿ ಪ್ರಯಾಣಿಕರನ್ನು ಈವರೆಗೆ ಅಲೈಯನ್ಸ್ ಏರ್, ಇಂಡಿಗೊ ಮತ್ತು ಏರ್ ಏಷ್ಯಾ ವಿಮಾನಯಾನ ಸಂಸ್ಥೆಗಳು ಕೆಳಗಿಳಿಸಿವೆ.

ಸಿಬ್ಬಂದಿ ಎಚ್ಚರಿಕೆ ನೀಡಿದ ಬಳಿಕವೂ ವಿಮಾನದೊಳಗೆ ಸರಿಯಾಗಿ ಮಾಸ್ಕ್​​ ಧರಿಸಿದ ಕಾರಣ ಅಲೈಯನ್ಸ್ ಏರ್ ವಿಮಾನದಿಂದ ನಾಲ್ವರು ಹಾಗೂ ಅಲೈಯನ್ಸ್ ಏರ್, ಇಂಡಿಗೊ ವಿಮಾನದಿಂದ ಮೂವರನ್ನು ಡಿ-ಬೋರ್ಡ್ ಮಾಡಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು (ಡಿಜಿಸಿಎ) ತಿಳಿಸಿದ್ದಾರೆ.

ಇದನ್ನೂ ಓದಿ: ಕೋವಿಡ್​ ನಿಯಮ ಉಲ್ಲಂಘಿಸಿದವರನ್ನ ವಿಮಾನದಿಂದ ಕೆಳಗಿಳಿಸಲಾಗುವುದು: ಡಿಜಿಸಿಎ ಎಚ್ಚರಿಕೆ

ಮಾರ್ಚ್ 13ರಂದು ವಿಮಾನದ ಒಳಗೆ ಪ್ರಯಾಣಿಕರು ಕೊರೊನಾ ನಿಯಮಾವಳಿಗಳನ್ನು ಪಾಲಿಸದಿದ್ದರೆ ಅಂತವರನ್ನು ವಿಮಾನ ಹೊರಡುವ ಮುನ್ನವೇ ಕೆಳಗಿಳಿಸಲಾಗುವುದು ಎಂದು ಡಿಜಿಸಿಎ ಎಚ್ಚರಿಕೆ ನೀಡಿದ್ದರು.

ವಿಮಾನದೊಳಗೆ ಮಾತ್ರವಲ್ಲ ವಿಮಾನ ನಿಲ್ದಾಣಕ್ಕೆ ಪ್ರವೇಶಿಸಿದ ನಂತರ ಆವರಣದಲ್ಲಿ ಪ್ರಯಾಣಿಕರು ಮಾಸ್ಕ್​​ ಸರಿಯಾಗಿ ಧರಿಸದೇ ಇದ್ದರೆ, ಧರಿಸಲು ನಿರಾಕರಿಸಿದರೆ, ದೈಹಿಕ ಅಂತರ ಕಾಯ್ದುಕೊಳ್ಳದಿದ್ದರೆ ಅವರನ್ನು 'ಅಶಿಸ್ತಿನ ಪ್ರಯಾಣಿಕ' ಎಂದು ಪರಿಗಣಿಸಲಾಗುವುದು ಎಂದು ಸುತ್ತೋಲೆ ಹೊರಡಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.