ನವದೆಹಲಿ: ಮುಂಬೈ ವಿಮಾನ ನಿಲ್ದಾಣದಿಂದ ಗುಜರಾತ್ಗೆ 70 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಅಲಯನ್ಸ್ ಏರ್ ವಿಮಾನವು ಎಂಜಿನ್ ಕವರ್(ಕೌಲ್) ಇಲ್ಲದೆಯೇ ಹಾರಾಟ ನಡೆಸಿದ ಘಟನೆ ಇಂದು ನಡೆದಿದೆ. ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.
ಮುಂಬೈ ವಿಮಾನ ನಿಲ್ದಾಣದಿಂದ ಇಂದು ಬೆಳಗ್ಗೆ ಗುಜರಾತ್ಗೆ ಪ್ರಯಾಣ ಬೆಳೆಸಿದ ಅಲಯನ್ಸ್ ಏರ್ ಎಟಿಆರ್ 72-600 ವಿಮಾನವು ಗುಜರಾತ್ನ ಭುಜ್ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದಿಳಿದಿದೆ. ಈ ವೇಳೆ, ವಿಮಾನದ ಎಂಜಿನ್ ಮೇಲಿನ ಕವರ್ ಕಳಚಿ ಬಿದ್ದಿತ್ತು. ಈ ಕವರ್ ಮುಂಬೈ ವಿಮಾನ ನಿಲ್ದಾಣದಲ್ಲಿಯೇ ಕಳಚಿದ್ದು, ಇದು ಪೈಲಟ್ ಅಲ್ಲದೇ ವಿಮಾನ ನಿಲ್ದಾಣ ಸಿಬ್ಬಂದಿಯ ಗಮನಕ್ಕೂ ಬಂದಿರಲಿಲ್ಲ.
-
An Alliance Air ATR aircraft landed safely at Bhuj from Mumbai after a part of the engine cowling fell down during take-off this morning. The flight had taken off from Mumbai. Directorate General of Civil Aviation (DGCA) has initiated an inquiry. pic.twitter.com/gEdH0nN5Dn
— ANI (@ANI) February 9, 2022 " class="align-text-top noRightClick twitterSection" data="
">An Alliance Air ATR aircraft landed safely at Bhuj from Mumbai after a part of the engine cowling fell down during take-off this morning. The flight had taken off from Mumbai. Directorate General of Civil Aviation (DGCA) has initiated an inquiry. pic.twitter.com/gEdH0nN5Dn
— ANI (@ANI) February 9, 2022An Alliance Air ATR aircraft landed safely at Bhuj from Mumbai after a part of the engine cowling fell down during take-off this morning. The flight had taken off from Mumbai. Directorate General of Civil Aviation (DGCA) has initiated an inquiry. pic.twitter.com/gEdH0nN5Dn
— ANI (@ANI) February 9, 2022
ಅಲಯನ್ಸ್ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಆದರೆ, ಎಂಜಿನ್ ಕವರ್ ಹೇಗೆ ಕಳಚಿ ಬಿದ್ದಿದೆ ಎಂಬುದರ ಬಗ್ಗೆ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯ(ಡಿಜಿಸಿಎ) ತನಿಖೆಗೆ ಸೂಚಿಸಿದೆ.
ವಿಮಾನ ನಭಕ್ಕೆ ಹಾರಿದ ಬಳಿಕರನ್ವೇದಲ್ಲಿ ಟೇಕ್ಆಫ್ ಚಟುವಟಿಕೆ ಮೇಲೆ ನಿಗಾ ಇಡುವ ಏರ್ ಟ್ರಾಫಿಕ್ ಕಂಟ್ರೋಲ್(ಎಟಿಸಿ) ಸಿಬ್ಬಂದಿ ಪರಿಶೀಲಿಸಿದಾಗ ರನ್ವೇನಲ್ಲಿ ವಿಮಾನದ ಭಾಗವೊಂದು ಬಿದ್ದಿದ್ದು ಕಂಡು ಬಂದಿತ್ತು. ಈ ಬಗ್ಗೆ ವಿಮಾನಯಾನ ತಜ್ಞ ಕ್ಯಾಪ್ಟನ್ ಅಮಿತ್ ಸಿಂಗ್ ಪ್ರತಿಕ್ರಿಯಿಸಿ, ಕಳಪೆ ನಿರ್ವಹಣಾ ಕಾಮಗಾರಿಯೇ ಘಟನೆಗೆ ಕಾರಣ ಎಂದು ಆರೋಪಿಸಿದ್ದಾರೆ.
ಓದಿ: ಮದುವೆಗೆ ಹೊರಟವರು ಮಸಣಕ್ಕೆ: ಕಾಲುವೆಗೆ ಬಿದ್ದ ಕಾರು ಒಂದೇ ಕುಟುಂಬದ ಮೂವರು ಮಹಿಳೆಯರ ಸಾವು