ತಿರುಪತಿ (ಆಂಧ್ರಪ್ರದೇಶ) : ವಿಶ್ವಪ್ರಸಿದ್ಧ ತಿರುಪತಿಯಲ್ಲಿ ಅಕ್ಟೋಬರ್ 7ರಿಂದ ವಾರ್ಷಿಕ ಬ್ರಹ್ಮೋತ್ಸವ ಸಂಭ್ರಮ ಆರಂಭಗೊಳ್ಳಲಿದೆ. ಅದಕ್ಕಾಗಿ ತಿರುಮಲದ ತಿರುಪತಿ ತಿಮ್ಮಪ್ಪ ದೇವಸ್ಥಾನಂ (ಟಿಟಿಡಿ) ಸಕಲ ಸಿದ್ಧತೆ ಮಾಡಿಕೊಂಡಿದೆ.
ಅಕ್ಟೋಬರ್ 7ರಂದು ಸಂಜೆ 5:10ಕ್ಕೆ ಮೀನ ಲಗ್ನದಲ್ಲಿ ಇದಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ. 9 ದಿನಗಳ ಕಾಲ ಪ್ರಮುಖ ಕಾರ್ಯಕ್ರಮಗಳು ನಡೆಯಲಿವೆ. ಸುಮಾರು ಒಂದು ತಿಂಗಳ ಕಾಲ ವಿವಿಧ ಪೂಜೆ ನಡೆಸಲು ಟಿಟಿಡಿ ಮುಂದಾಗಿದೆ. ಬ್ರಹ್ಮೋತ್ಸವದ ವೇಳೆ ವೈದಿಕ ಆಚರಣೆ ನಡೆಸಲಾಗುವುದು ಎಂದಿರುವ ಅಧಿಕಾರಿಗಳು, ಇದರಲ್ಲಿ ಅರ್ಚಕರು, ದೇವಾಲಯದ ಸಿಬ್ಬಂದಿ ಭಾಗಿಯಾಗಲು ಅನುಮತಿ ನೀಡಲಾಗಿದೆ.
ಪ್ರಮುಖವಾಗಿ ಧ್ವಜಾರೋಹಣ, ಗರಡು ಸೇವೆ, ಚಿನ್ನದ ರಥ ಸೇವೆ, ರಥೋತ್ಸವ ಹಾಗೂ ಅಂತಿಮ ಚಕ್ರಸ್ನಾನದ ಜೊತೆಗೆ ಅಕ್ಟೋಬರ್ 15ರಂದು ಕೊನೆಯ ದಿನದ ಧ್ವಜಾರೋಹಣ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿರಿ: ಡಿವೋರ್ಸ್ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಹೆಸರು ಬದಲಾಯಿಸಿಕೊಂಡ ಸಮಂತಾ!
ಬ್ರಹ್ಮೋತ್ಸವದಲ್ಲಿ ಭಾಗಿಯಾಗಲು ಭಕ್ತರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಪ್ರತಿದಿನ 1000 ಜನರ ಮಿತಿ ನಿಗದಿಪಡಿಸಲಾಗಿದೆ ಎಂದು ಟಿಟಿಡಿ ಈ ಹಿಂದೆ ತಿಳಿಸಿದೆ. ಆದರೆ, ಭಕ್ತರಿಗೆ ಅವಕಾಶ ನೀಡುವುದರ ಬಗ್ಗೆ ಈವರೆಗೆ ಖಚಿತವಾದ ಮಾಹಿತಿ ಲಭ್ಯವಾಗಿಲ್ಲ.