ETV Bharat / bharat

ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ನೀಡುವಂತೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮನವಿ

author img

By ETV Bharat Karnataka Team

Published : Dec 10, 2023, 10:04 AM IST

All India Muslim Personal Law Board: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ತನ್ನ ಸಮುದಾಯದ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ನೀಡುವಂತೆ ಮನವಿ ಮಾಡಿದೆ.

ಎಐಎಂಪಿಎಲ್‌ಬಿ ಕರೆ
ಎಐಎಂಪಿಎಲ್‌ಬಿ ಕರೆ

ಲಖನೌ(ಉತ್ತರ ಪ್ರದೇಶ): ತಂದೆಯ ಆಸ್ತಿಯಲ್ಲಿ ಗಂಡು ಮಕ್ಕಳು ಹೊಂದಿರುವಷ್ಟೇ ಸಮಾನ ಪಾಲು ಹೆಣ್ಣು ಮಕ್ಕಳಿಗೂ ಇದೆ ಎಂದು ಭಾರತದ ಸಂವಿಧಾನದಲ್ಲಿ ತಿಳಿಸಲಾಗಿದೆ. ಇದೀಗ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಈ ಕಾನೂನು ಅನ್ನು ತನ್ನ ಸಮುದಾಯದಲ್ಲೂ ಕಾರ್ಯರೂಪಕ್ಕೆ ತರಲು ನಿರ್ಧರಿಸಿದೆ. ಶನಿವಾರ ಲಕ್ನೋದ ಐಶ್‌ಬಾಗ್‌ನಲ್ಲಿರುವ ದಾರುಲ್ ಉಲೂಮ್ ಫರಂಗಿ ಮಹಾಲಿ ಸಭಾಂಗಣದಲ್ಲಿ ನಡೆದ ಶರಿಯತ್ ಸಮ್ಮೇಳನದಲ್ಲಿ, ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಪಾಲು ನೀಡುವಂತೆ ಸಮುದಾಯದ ಮುಖಂಡರಿಗೆ ಕರೆ ನೀಡಿತು.

ಷರಿಯಾ ಕಾನೂನಿನಂತೆ, ಒಬ್ಬ ಹೆಣ್ಣು ಮಗಳಿಗೆ ತನ್ನ ತಂದೆಯ ಪಾಲು ಸಿಗುತ್ತದೆ. ಆದರೆ ಅನೇಕ ಸಂದರ್ಭಗಳಲ್ಲಿ ಹೆಣ್ಣುಮಕ್ಕಳು ಈ ಪಾಲು ಪಡೆಯುವುದಿಲ್ಲ. ಹಾಗಾಗಿ ಮುಸ್ಲಿಮರು ತಮ್ಮ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ನೀಡಬೇಕು ಎಂದು ಮಂಡಳಿ ಹೇಳಿದೆ. ಸಮ್ಮೇಳನದಲ್ಲಿ ಪ್ರಮುಖವಾಗಿ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ನೀಡುವ ಬಗ್ಗೆ ಚರ್ಚೆ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೌಲಾನಾ ಅತೀಕ್ ಅಹ್ಮದ್ ಬಸ್ತಾವಿ, ಇಸ್ಲಾಂ ಧರ್ಮದಲ್ಲಿ ಮಹಿಳೆಯರಿಗೆ ಮಹತ್ವ, ಗೌರವ, ಹಕ್ಕುಗಳನ್ನು ನೀಡಲಾಗಿದೆ. ಮಗುವಿನ ಪಾಲನೆ ಮತ್ತು ಶಿಕ್ಷಣಕ್ಕೆ ಹೆಚ್ಚು ಮಹತ್ವವಿದೆ. ಆದರೆ, ಮನೆ ನಿರ್ವಹಣೆ ಜವಾಬ್ದಾರಿ ಮಹಿಳೆಯ ಮೇಲಿದೆ ಎಂಬುದೂ ಸತ್ಯ. ಇದರ ಕುರಿತಂತೆ ಸಂಪೂರ್ಣವಾದ ಮಾರ್ಗದರ್ಶನವನ್ನು ಇಸ್ಲಾಮಿಕ್ ಶರಿಯತ್ ನೀಡುತ್ತಿದೆ. ನಾವೆಲ್ಲರೂ ಈ ಸೂಚನೆಗಳನ್ನು ಅನುಸರಿಸಲು ಪ್ರಾರಂಭಿಸಿದರೆ, ನಮ್ಮ ಮನೆ ಸ್ವರ್ಗವಾಗುತ್ತವೆ ಎಂದು ಅಭಿಪ್ರಾಯಪಟ್ಟರು.

1973ರಲ್ಲಿ ಎಐಎಂಪಿಎಲ್‌ಬಿ ಸ್ಥಾಪನೆಯಾಗಿದೆ. ಇದು ಭಾರತೀಯ ದೇಹದಂತಿರುವ ಸಂಸ್ಥೆ. ಇದರ ಮೂಲ ಉದ್ದೇಶ ಷರಿಯತ್ ಮತ್ತು ಮುಸ್ಲಿಂ ಸಮುದಾಯದ ಏಕತೆ. ದೇಶದಲ್ಲಿ ಎಲ್ಲಾ ಧರ್ಮಗಳ ಅನುಯಾಯಿಗಳು ತಮ್ಮ ವೈಯಕ್ತಿಕ ಕಾನೂನುಗಳನ್ನು ಅನುಸರಿಸಲು ಸಂವಿಧಾನಾತ್ಮಕ ಸ್ವಾತಂತ್ರ್ಯ ಹೊಂದಿದ್ದಾರೆ. ಹಾಗೆಯೇ ಮುಸ್ಲಿಮರಿಗೂ ಈ ಹಕ್ಕು ಮತ್ತು ಸವಲತ್ತುಗಳಿವೆ. ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ಸಂಬಂಧಿಸಿದಂತೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಈ ಸಮಾವೇಶದ ಉದ್ದೇಶ ಎಂದು ಅವರು ಹೇಳಿದರು.

ಮೌಲಾನಾ ಎಂ.ಡಿ.ನಸ್ರುಲ್ಲಾ ನದ್ವಿ ಮಹಿಳೆಯರ ಉತ್ತರಾಧಿಕಾರ ವಿಷಯ ಕುರಿತು ಮಾತನಾಡಿದರು. ಹೆಣ್ಣಿಗೆ ತಂದೆ-ತಾಯಿ, ಗಂಡ, ಮಗನ ಆಸ್ತಿಯಲ್ಲಿ ಪಾಲು ನೀಡಿದ ಮೊದಲ ಧರ್ಮ ಇಸ್ಲಾಂ ಎಂದರು. ಪಿತ್ರಾರ್ಜಿತ ಆಸ್ತಿಯಲ್ಲಿ ತಾಯಿ, ಸಹೋದರಿ, ಪತ್ನಿ, ಮಗಳು, ಮೊಮ್ಮಗಳು, ಮರಿಮೊಮ್ಮಗಳು, ಮಲತಾಯಿ, ಅಜ್ಜಿ, ಅಜ್ಜಿಗೂ ಪಾಲು ನೀಡಬೇಕು ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಆದೇಶಿಸಿದೆ ಎಂದು ತಿಳಿಸಿದರು.

ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ವಕೀಲ ಶೇಖ್ ಸೌದ್ ರೈಸ್, ಭಾರತದ ಸಂವಿಧಾನದ 25ನೇ ವಿಧಿಯಲ್ಲಿ ಪ್ರತಿಯೊಬ್ಬ ನಾಗರಿಕ ತಮ್ಮ ಇಚ್ಛೆಯ ಧರ್ಮವನ್ನು ಅಳವಡಿಸಿಕೊಳ್ಳುವ ಹಕ್ಕು ಹೊಂದಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಕೇಂದ್ರ ಸರ್ಕಾರದ 10 ವರ್ಷಗಳ ಅತ್ಯುತ್ತಮ ನಿರ್ಧಾರಗಳೇ ಜಿಡಿಪಿ ಬೆಳವಣಿಗೆಗೆ ಕಾರಣ: ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.