ಆಗ್ರಾ: ತಾಜ್ ಮಹಲ್ನಲ್ಲಿ ಉರುಸ್ ಆಚರಣೆಯನ್ನು ವಿರೋಧಿಸಿ ಭಾರತೀಯ ಪುರತಾತ್ವ ಇಲಾಖೆ ಎದುರು ಉಪವಾಸ ಪ್ರತಿಭಟನೆ ನಡೆಸುತ್ತಿದ್ದ ಅಖಿಲ ಭಾರತ ಹಿಂದೂ ಮಹಾಸಭಾ ಸದಸ್ಯರು ಸೇರಿದಂತೆ ರಾಷ್ಟ್ರೀಯ ವಕ್ತಾರ ಸಂಯ್ ಜಾಟ್ರನ್ನು ಪೊಲೀಸರು ಬಂಧಿಸಿದ್ದಾರೆ. ಶಿವ ಮತ್ತು ಪಾರ್ವತಿ ಧಿರಿಸಿತೊಟ್ಟು ವಿನೂತನ ಪ್ರತಿಭಟನೆ ನಡೆಸುತ್ತಿದ್ದ ಸದಸ್ಯರು ಸೇರಿದಂತೆ ಅಖಿಲ ಭಾರತ ಹಿಂದು ಮಹಾಸಭಾದ ಮೀನಾ ದಿವಾಕರ್ ಸೇರಿದಂತೆ ಇನ್ನಿತರರನ್ನು ಬಂಧಿಸಲಾಗಿದೆ. ಯಾವುದೇ ಪೂರ್ವ ಅನುಮತಿ ಇಲ್ಲದೇ ಪ್ರತಿಭಟನೆ ಮುಂದಾದ ಹಿನ್ನಲೆ ಈ ಸಂಬಂಧ ಆಗ್ರಾ ಪೊಲೀಸ್ ಕಮಿಷನರ್ ಎಫ್ಐಆರ್ ಪ್ರಕರಣ ದಾಖಲಿಸಿದ್ದಾರೆ.
ಉರಸ್ಗೆ ವಿರೋಧ: ತಾಜ್ ಮಹಲ್ ಎಂಬುದು ತೇಜೋ ಮಹಾಲಯ, ಅಲ್ಲಿ ಯಾವುದೇ ಅನುಮತಿ ಪಡೆಯದೇ ಚಾದರ್ ಪೊಸಿ ಮತ್ತು ಕವ್ವಾಲಿಗಳನ್ನು ಅಲ್ಲಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಹಿಂದು ಮಹಾಸಭಾ ಪ್ರತಿಭಟನೆ ನಡೆಸಿದೆ. ತಾಜ್ ಮಹಲ್ ಒಳಗೆ ಈ ರೀತಿ ಚಾದರ್ ಪೋಷಿ ಮತ್ತು ಕವ್ವಾಲಿ ಗಳನ್ನು ನಡೆಸಲು ಅವಕಾಶವಿಲ್ಲ. ಆದರೆ, ಇದನ್ನು ನಡೆಸುತ್ತಿರುವ ಸಂಬಂಧ ಆರ್ಟಿಐನಲ್ಲಿ ಮಾಹಿತಿ ಪಡೆಯಲಾಗಿದೆ. ಈ ಹಿನ್ನಲೆ ಇದನ್ನು ಪ್ರತಿಭಟನೆ ನಡೆಸಲಾಗಿದೆ ಎಂದು ಹಿಂದು ಮಹಾಸಭಾ ತಿಳಿಸಿದೆ.
ಆದರೆ, ಈ ಕಾರ್ಯಕ್ರಮ ನಡೆಸಲು ಭಾರತೀಯ ಪುರತಾತ್ವ ಇಲಾಖೆ ಒಪ್ಪಿಗೆ ಸೂಚಿಸಿ, ಪತ್ರ ನೀಡಿದೆ. ಇದನ್ನು ವಿರೋಧಿಸಿರುವ ಮಹಾಸಭಾ ತಾಜ್ಮಹಲ್ನಲ್ಲಿ ಉರುಸ್, ಕವ್ವಾಲಿ ಮತ್ತು ಚಾದರ್ ಪೊಷಿ ನಡೆಸಲು ನಿಷೇಧಿಸಬೇಕು. ಇದನ್ನು ನಾವು ವಿರೋಧಿಸುತ್ತದೆ ಎಂದು ಹೇಳಿದ್ದಾರೆ. ಈ ಸಂಬಂಧ ಅಧಿಕಾರಿಗಳಿಗೆ ಅಧಿಕಾರಿಗಳಿಗೆ ಮನವಿ ಪತ್ರ ನೀಡಲಾಗಿದೆ. ಆದರೆ, ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಹಿನ್ನಲೆ ಕ್ರಮಕ್ಕೆ ಒತ್ತಾಯಿಸಿ ಉಪವಾಸ ಸತ್ಯಗ್ರಹಕ್ಕೆ ಮುಂದಾಗಲಾಗಿದೆ ಎಂದು ಕಾರ್ಯಕ್ರಮದ ಅಧ್ಯಕ್ಷರಾಗಿರುವ ಮೀನಾ ದಿವಾಕರ್ ತಿಳಿಸಿದ್ದಾರೆ
ಮೂರುದಿನ ಆಚರಣೆ: ಫೆಬ್ರವರಿ 17ರಿಂದ 19ರವರೆಗೆ ತಾಜ್ಮಹಲ್ನಲ್ಲಿ ಶಾಹಜಹನ್ ಅವರು 368ನೇ ಉರುಸ್ ಅನ್ನು ಆಗ್ರಾದಲ್ಲಿ ನಡೆಸಲಾಗುತ್ತಿದೆ. ಮೂರು ದಿನಗಳ ಉರುಸ್ ಆಚರಣೆ ಹಿನ್ನಲೆ ಪ್ರವಾಸಿಗರಿಗೆ ಉಚಿತವಾಗಿ ತಾಜ್ಮಹಲ್ ಪ್ರವೇಶ ಕಲ್ಪಿಸಲಾಗಿದೆ. ಉರುಸ್ ಆಚರಣೆ ಹಿನ್ನೆಲೆ ತಾಜ್ಮಹಲ್ನ ನೆಲಮಹಡಿಯಲ್ಲಿರುವ ಶಹಜಾಹನ್ ಮತ್ತು ಮಮ್ತಾಜ್ ಅವರ ಸಮಾಧಿಯನ್ನು ನೋಡಲು ಅವಕಾಶ ನೀಡಲಾಗಿದೆ.
ಪೊಲೀಸರಿಂದ ಕಿಡಿ: ಅಖಿಲ ಭಾರತ ಹಿಂದೂ ಮಹಸಭಾ ಪ್ರತಿಭಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಪೊಲೀಸ್ ಅಧಿಕಾರಿಗಳು, ಮಹಾಸಭಾ ದೇಶಾದ್ಯಂತ ಅನವಶ್ಯಕವಾಗಿ ಗೊಂದಲ ಸೃಷ್ಟಿಸುವ ಕಾರ್ಯ ನಡೆಸುತ್ತಿದೆ. ಕಾನೂನು ಮತ್ತು ಆದೇಶವನ್ನು ಅವರು ಹಾಳು ಮಾಡುತ್ತಿದ್ದಾರೆ. ತಾಜ್ಮಹಲ್ನಲ್ಲಿ ಉರುಸ್ ಆಚರಣೆಗೆ ಎಲ್ಲಾ ರೀತಿಯ ಅನುಮತಿಯನ್ನು ಪಡೆಯಲಾಗಿದೆ ಎಂದರು.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಭೂಕಂಪ.. ಟರ್ಕಿ-ಸಿರಿಯಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 41ಸಾವಿರಕ್ಕೆ ಏರಿಕೆ