ETV Bharat / bharat

ಅಪ್ರಾಪ್ತೆ ಮೇಲೆ ಪೊಲೀಸ್​ ಅಧಿಕಾರಿಯಿಂದಲೇ ಅತ್ಯಾಚಾರ - ಅಪ್ರಾಪ್ತೆ ಮೇಲೆ ಪೊಲೀಸ್ ಠಾಣೆಯಲ್ಲಿ ರೇಪ್​

ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಾಲಕಿಯೊಬ್ಬಳು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋಗಿದ್ದಾಗ ಆಕೆಯ ಮೇಲೆ ಠಾಣೆಯ ಸ್ಟೇಷನ್​​​ ಹೌಸ್​ ಆಫೀಸರ್​​ ಅತ್ಯಾಚಾರವೆಸಗಿರುವ ಗಂಭೀರ ಆರೋಪ ಕೇಳಿ ಬಂದಿದೆ.

SHO rapes Minor
SHO rapes Minor
author img

By

Published : May 4, 2022, 7:04 PM IST

ಲಲಿತ್​ಪುರ(ಉತ್ತರ ಪ್ರದೇಶ): ನಾಲ್ವರು ಕಾಮುಕರಿಂದ ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆಯೊಬ್ಬಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲು ಹೋಗಿದ್ದು, ಈ ವೇಳೆ ಠಾಣೆಯ ಸ್ಟೇಷನ್​​​ ಹೌಸ್​ ಆಫೀಸರ್​​(SHO) ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಉತ್ತರ ಪ್ರದೇಶದ ಲಲಿತ್​ಪುರ​​ದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಏನಿದು ಪ್ರಕರಣ?: ಲಲಿತ್​ಪುರದ ಪಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತೆಯನ್ನ ಕಳೆದ ಏಪ್ರಿಲ್ 22ರಂದು ನಾಲ್ವರು ದುಷ್ಕರ್ಮಿಗಳು ಭೋಪಾಲ್​ಗೆ ಕರೆದೊಯ್ದಿದ್ದಾರೆ. ಸತತ ಮೂರು ದಿನಗಳ ಕಾಲ ಬಾಲಕಿ ಮೇಲೆ ದುಷ್ಕೃತ್ಯ ನಡೆಸಲಾಗಿದೆ. ಇದಾದ ಬಳಿಕ ಪೊಲೀಸ್ ಠಾಣೆಯಲ್ಲಿ ಬಾಲಕಿಯನ್ನ ಬಿಟ್ಟು ಪರಾರಿಯಾಗಿದ್ದಾರೆ. ಅಲ್ಲಿ ಎಸ್​ಹೆಚ್​ಒ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿದು ಬಂದಿದೆ.

ಇದಾದ ಬಳಿಕ ಬಾಲಕಿಯನ್ನ ಎರಡು ದಿನಗಳ ಕಾಲ ಯಾರಿಗೂ ಗೊತ್ತಾಗದ ರೀತಿಯಲ್ಲಿ ಇಟ್ಟುಕೊಂಡಿರುವ ಪೊಲೀಸ್ ಅಧಿಕಾರಿ ಅವಳ ಮೇಲೆ ಪೊಲೀಸ್ ಠಾಣೆಯ ರೂಮ್​ನಲ್ಲೇ ಅತ್ಯಾಚಾರವೆಸಗಿದ್ದಾಗಿ ತಿಳಿದು ಬಂದಿದೆ. ಇದರ ಬಗ್ಗೆ ಕುಟುಂಬಸ್ಥರಿಗೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: RBI ರೆಪೊ ದರ ಏರಿಕೆ: ಗೃಹ ಸಾಲ, ಕಾರುಗಳ EMI ಹೊರೆ ಹೆಚ್ಚಳ.. ಎಫ್​ಡಿ ಹೂಡಿಕೆದಾರರಿಗೆ ಅಚ್ಛೇ ದಿನ್​!

ಏಪ್ರಿಲ್​ 30ರಂದು ಚೈಲ್ಡ್​ ಲೈನ್​ಗೆ ಮಗುವಿನ ಹಸ್ತಾಂತರ ಮಾಡಲಾಗಿದ್ದು, ಈ ವೇಳೆ, ಕೌನ್ಸೆಲಿಂಗ್​ ನಡೆಸಿದಾಗ ನಡೆದ ಘಟನೆ ಬಗ್ಗೆ ಹೇಳಿಕೊಂಡಿದ್ದಾಳೆ. ಇದರ ಬೆನ್ನಲ್ಲೇ ಪೊಲೀಸ್​ ಅಧಿಕಾರಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದ್ದು, ಎಸ್​ಪಿ ಆದೇಶದ ಮೇರೆಗೆ ಪೊಲೀಸ್ ಸಿಬ್ಬಂದಿ ಚಂದನ್​, ರಾಜಭಾನ್​, ಹರಿಶಂಕರ್​, ಮಹೇಂದ್ರ ಚೌರಾಸಿಯಾ, ಪ್ರಭಾರಿ ಇನ್ಸ್​​ಪೆಕ್ಟರ್​ ವಿರುದ್ಧ ಪ್ರಕರಣ ದಾಖಲಾಗಿದೆ.

ಈಗಾಗಲೇ ಎಸ್​ಹೆಚ್​ಒ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಎಸ್​ಹೆಚ್​ಒ ಅಮಾನತುಗೊಂಡಿದ್ದಾರೆ. ಪ್ರಕರಣದ ಬೆನ್ನಲ್ಲೇ ಉಳಿದವರು ತಲೆಮರೆಸಿಕೊಂಡಿದ್ದಾರೆಂದು ಪೊಲೀಸ್ ಮಹಾನಿರ್ದೇಶಕ ಭಾನು ಬಾಸ್ಕರ್​ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿಂದತೆ ಐಪಿಸಿ 363 (ಅಪಹರಣ), 376 (ಅತ್ಯಾಚಾರ), 376 ಬಿ,120 ಬಿ ಹಾಗೂ ಪೋಸ್ಕೊ ಸೇರಿದಂತೆ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಯೋಗಿ ಸರ್ಕಾರದ ವಿರುದ್ಧ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್​ ಆಕ್ರೋಶ ವ್ಯಕ್ತಪಡಿಸಿದ್ದು, ಲಲಿತ್​​ಪುರಗೆ ತೆರಳಿ, ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಾಲಕಿ ಹಾಗೂ ಆಕೆಯ ಕುಟುಂಬವನ್ನ ಭೇಟಿ ಮಾಡಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.