ಲಖನೌ( ಉತ್ತರಪ್ರದೇಶ): ವಿದ್ಯಾವಂತ, ಗಣ್ಯರೇ ಓಡಾಡುವ ವಿಮಾನ ಪ್ರಯಾಣದಲ್ಲಿ ಹೇರಳ ತುಚ್ಛ ಘಟನೆಗಳು ವರದಿಯಾಗುತ್ತಲೇ ಇವೆ . ನಿಗದಿತ ವೇಳೆಗೆ ಬರಲಾಗದೇ ವಿಮಾನ ತಪ್ಪಿಸಿಕೊಂಡ ಮಹಿಳಾ ಪ್ರಯಾಣಿಕರೊಬ್ಬರು ಸಿಬ್ಬಂದಿ ಜೊತೆ ಕಿತ್ತಾಡಿದ್ದಲ್ಲದೇ, ಕಪಾಳಮೋಕ್ಷ ಮಾಡಿದ ಘಟನೆ ಉತ್ತರಪ್ರದೇಶದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ನಡೆದಿದೆ. ಈ ಬಗ್ಗೆ ಹಲ್ಲೆಗೊಳಗಾದ ಮಹಿಳಾ ಸಿಬ್ಬಂದಿ ದೂರು ನೀಡಿದ್ದಾರೆ.
ರಾಜಧಾನಿ ಲಖನೌನಲ್ಲಿರುವ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಕಾಶ್ ವಿಮಾನಯಾನ ಸಂಸ್ಥೆಯ ಮಹಿಳಾ ಸಿಬ್ಬಂದಿ ಕೆನ್ನೆಗೆ ಮಹಿಳಾ ಪ್ರಯಾಣಿಕರೊಬ್ಬರು ಬಾರಿಸಿದ್ದಾರೆ. ಈ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಡವಾಗಿ ಬಂದು ಗಲಾಟೆ: ಲಖನೌನಿಂದ ಮುಂಬೈಗೆ ತೆರಳಬೇಕಿದ್ದ ಮಹಿಳಾ ಪ್ರಯಾಣಕಿ ವಿಮಾನ ಹೊರಡುವ ನಿಗದಿತ ಸಮಯಕ್ಕಿಂತಲೂ 15 ನಿಮಿಷ ನಿಲ್ದಾಣಕ್ಕೆ ತಡವಾಗಿ ಬಂದಿದ್ದಾರೆ. ಬಳಿಕ ತಮಗೆ ಅದೇ ವಿಮಾನದಲ್ಲಿ ಹೊರಡಲು ಅವಕಾಶ ಮಾಡಿಕೊಡಬೇಕು ಎಂದು ಕೌಂಟರ್ನಲ್ಲಿದ್ದ ಸಿಬ್ಬಂದಿಗೆ ಜೊತೆ ರಚ್ಚೆ ಹಿಡಿದಿದ್ದಾರೆ.
ವಿಮಾನ ಈಗಾಗಲೇ ಹೊರಡಲು ಎಲ್ಲ ಸಿದ್ಧತೆ ಮಾಡಲಾಗಿದೆ. ಈಗ ತಡೆದು ನಿಲ್ಲಿಸಲಾಗಲ್ಲ. ಮುಂದಿನ ವಿಮಾನದಲ್ಲಿ ತೆರಳಲು ಸಿಬ್ಬಂದಿ ತಿಳಿಸಿದ್ದಾರೆ. ಆದರೆ, ಮಹಿಳಾ ಪ್ರಯಾಣಿಕ ತಾವು ಇದೇ ವಿಮಾನದಲ್ಲಿ ಹೊರಡಬೇಕು ಎಂದು ಹಠ ಹಿಡಿದಿದ್ದಾರೆ. ಇದರಿಂದ ಕೆಲಹೊತ್ತು ವಾಗ್ವಾದಕ್ಕೂ ಕಾರಣವಾಗಿದೆ. ಕೆರಳಿದ ಮಹಿಳಾ ಪ್ರಯಾಣಕಿ, ಆಕಾಶ್ ಏರ್ಲೈನ್ಸ್ ಮಹಿಳಾ ಸಿಬ್ಬಂದಿಯನ್ನು ನಿಂದಿಸಿದ್ದಲ್ಲದೇ, ಕಪಾಳಕ್ಕೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಿಳಾ ಪ್ರಯಾಣಿಕಯ ಈ ನಡೆಯಿಂದ ಎಲ್ಲ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಬಳಿಕ ಹಲ್ಲೆ ನಡೆಸಿದವರ ವಿರುದ್ಧ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳಾ ಉದ್ಯೋಗಿಯ ದೂರಿನ ಮೇರೆಗೆ ಪ್ರಯಾಣಿಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ದೂರಿನಲ್ಲೇನಿದೆ?: ಲಖನೌದಿಂದ ಮುಂಬೈಗೆ ಪ್ರಯಾಣಿಸಲು ದಂಪತಿ ವಿಮಾನ ನಿಲ್ದಾಣವನ್ನು ತಲುಪಿದರು. ವಿಮಾನ ಟೇಕಾಫ್ ಆದ ಸುಮಾರು 15 ನಿಮಿಷಗಳ ನಂತರ ಅವರು ನಿಲ್ದಾಣಕ್ಕೆ ಆಗಮಿಸಿದ್ದರು. ಅದೇ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡುವಂತೆ ಕೇಳಿಕೊಂಡರು. ವಿಮಾನ ಪ್ರಯಾಣಕ್ಕೆ ಸಿದ್ಧವಾಗಿದೆ. ಟೇಕ್ ಆಫ್ ಆಗುತ್ತಿದೆ ಸಾಧ್ಯವಿಲ್ಲ ಎಂದರೂ, ಬಿಡದೇ ಕಿತ್ತಾಡಿದರು. ಇದೇ ವೇಳೆ, ಮಹಿಳೆ ತನ್ನ ಮೇಲೆ ಹಲ್ಲೆ ಮಾಡಿದರು ಎಂದು ದೂರು ನೀಡಲಾಗಿದೆ.
ಇದನ್ನೂ ಓದಿ: 500 ರೂಪಾಯಿಗಾಗಿ ಪತಿ ಕೊಂದ ಅಪರಾಧ.. ಮಹಿಳೆಯ ಶಿಕ್ಷೆ ಕಡಿತಗೊಳಿಸಿದ ಸುಪ್ರೀಂಕೋರ್ಟ್