ಮುಂಬೈ (ಮಹಾರಾಷ್ಟ್ರ): ದೇಶದ ವಿಮಾನಯಾನ ಕ್ಷೇತ್ರಕ್ಕೆ ಮತ್ತೊಂದು ವಿಮಾನ ಸಂಸ್ಥೆ ಪ್ರವೇಶಿಸಲು ಸಿದ್ಧವಾಗಿದೆ. ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಬೆಂಬಲಿತ ಆಕಾಶ ಏರ್ ಸಂಸ್ಥೆಗೆ ವಿಮಾನ ಹಾರಾಟಕ್ಕೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅನುಮತಿ ನೀಡಿದೆ. ಜುಲೈ ಅಂತ್ಯದ ವೇಳೆಗೆ ತನ್ನ ವಾಣಿಜ್ಯ ಕಾರ್ಯಾಚರಣೆ ಆರಂಭಿಸುವುದಾಗಿ ಸಂಸ್ಥೆ ಹೇಳಿದೆ.
ವಿಮಾನಯಾನ ಕಾರ್ಯಾಚರಣೆಯ ಸಿದ್ಧತೆಗಳು ಮತ್ತು ಅಗತ್ಯವಾದ ನಿಯಮಗಳ ಅನುಸರಣೆ ಪೂರೈಸಿದ ನಂತರವೇ ಎಒಸಿ (air operator certificate-AOC) ನೀಡಲಾಗಿದೆ. ಜುಲೈ ಅಂತ್ಯದ ವೇಳೆಗೆ ತಮ್ಮ ವಾಣಿಜ್ಯ ವಿಮಾನಗಳನ್ನು ಪ್ರಾರಂಭಿಸುವ ಗುರಿ ಹೊಂದಿರುವುದಾಗಿ ಸಂಸ್ಥಾಪಕ ಸಿಇಒ ವಿನಯ್ ದುಬೆ ತಿಳಿಸಿದ್ದಾರೆ.
ಈ ತಿಂಗಳ ನಂತರ ಎರಡು ವಿಮಾನಗಳೊಂದಿಗೆ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ. ನಂತರ ಪ್ರತಿ ತಿಂಗಳು ತನ್ನ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. 2022-23ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಸಂಸ್ಥೆಯು 18 ವಿಮಾನಗಳನ್ನು ಹೊಂದಿರುತ್ತದೆ ಎಂದು ಹೇಳಿದ್ದಾರೆ.
ಅಲ್ಲದೇ, ನಂತರದ ಪ್ರತಿ ವರ್ಷ 12-14 ವಿಮಾನಗಳನ್ನು ಸೇವೆಗೆ ಅಣಿಗೊಳಿಸಲಾಗುತ್ತದೆ. ಈ ಮೂಲಕ ಮುಂದಿನ ಐದು ವರ್ಷಗಳ ಅವಧಿಯಲ್ಲಿ 72 ವಿಮಾನಗಳಿಗೆ ಆದೇಶಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ತಾಳಿ ಕಟ್ಟುವ ವೇಳೆ ಮದುವೆ ಮಂಟಪಕ್ಕೆ ಎಂಟ್ರಿ.. ವರನ ಎದುರೇ ವಧುವಿಗೆ 'ಸಿಂಧೂರ' ಹಚ್ಚಿದ ಲವರ್