ETV Bharat / bharat

ಇಂಗ್ಲೆಂಡ್​​ನಲ್ಲಿ ಅಜ್ಮೀರ್​​ ವಿದ್ಯಾರ್ಥಿ ನಾಪತ್ತೆ.. ವಿದೇಶಾಂಗ ಸಚಿವಾಲಯಕ್ಕೆ ತಂದೆ ಮನವಿ - ಇಂಗ್ಲೆಂಡ್​​ನಲ್ಲಿ ಅಜ್ಮೀರ್​​ ವಿದ್ಯಾರ್ಥಿ ಸುಜಲ್​ ನಾಪತ್ತೆ

ರಾಜಸ್ಥಾನದ ಅಜ್ಮೀರ್​ ವಿದ್ಯಾರ್ಥಿ ಸುಜಲ್​ ಇಂಗ್ಲೆಂಡ್​ನಲ್ಲಿ ನಾಪತ್ತೆಯಾಗಿದ್ದು, ಆತನನ್ನು ಪತ್ತೆ ಮಾಡುವಂತೆ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಪೋಷಕರು ಮನವಿ ಮಾಡಿದ್ದಾರೆ.

Ajmer student missing in England
Ajmer student missing in England
author img

By

Published : Jul 20, 2022, 7:43 PM IST

ಅಜ್ಮೀರ್​(ರಾಜಸ್ಥಾನ): ಇಂಜಿನಿಯರಿಂಗ್ ವ್ಯಾಸಂಗ​ ಮಾಡುತ್ತಿದ್ದ ಅಜ್ಮೀರ್​ ವಿದ್ಯಾರ್ಥಿ ಸುಜಲ್ ಇಂಗ್ಲೆಂಡ್​​ನಲ್ಲಿ​ ನಾಪತ್ತೆಯಾಗಿದ್ದು, ಆತನ ಹುಡುಕಿಕೊಡುವಂತೆ ಜಿಲ್ಲಾಧಿಕಾರಿಗಳ ಮೂಲಕ ವಿದೇಶಾಂಗ ಸಚಿವಾಲಯಕ್ಕೆ ಪೋಷಕರು ಮನವಿ ಮಾಡಿದ್ದಾರೆ. ತನ್ನ ಸ್ನೇಹಿತರೊಂದಿಗೆ ಇಂಗ್ಲೆಂಡ್​ನ ಕ್ಲಾಕ್ಟನ್​​ ಪಿಯರ್​ ಎಸೆಕ್ಸ್​ ಬೀಚ್​​ಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಜೋರಾಗಿ ಬಿರುಗಾಳಿ ಬೀಸಿದ್ದರಿಂದ ಸಮುದ್ರದ ಅಲೆಗಳಿಗೆ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ. ಆತನ ಜೊತೆಗೆ ತೆರಳಿದ್ದ ಐವರು ಸ್ನೇಹಿತರ ರಕ್ಷಣೆ ಮಾಡಲಾಗಿದೆ ಎಂದು ಎಸೆಕ್ಸ್​ ಬೀಚ್​​ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಜ್ಮೀರ್​​ದ ಹನುಮಂತನಗರದ ನಿವಾಸಿ ಭಗವಾನ್ ದಾಸ್ ಸಾಹು ಅವರ ಮಗ ಸುಜಲ್​ ಇಂಗ್ಲೆಂಡ್​​ನಲ್ಲಿ ಕಂಪ್ಯೂಟರ್​​ ಸೈನ್ಸ್​ನಲ್ಲಿ ಇಂಜಿನಿಯರಿಂಗ್​ ಮಾಡ್ತಿದ್ದಾನೆ. ಜುಲೈ 19ರಂದು ತನ್ನ ಸ್ನೇಹಿತರೊಂದಿಗೆ ಕ್ಲಾಕ್ಟನ್​ ಪಿಯರ್​ ಎಸೆಕ್ಸ್​ ಬೀಚ್​ಗೆ ತೆರಳಿದ್ದ. ಅಲ್ಲಿ ಏಕಾಏಕಿ ಜೋರಾಗಿ ಬಿರುಗಾಳಿ ಬೀಸಿದ್ದರಿಂದ ಸಮುದ್ರದ ಅಲೆಗಳು ರಭಸವಾಗಿ ಹೊಡೆದು, ಆತ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ.

ಇದನ್ನೂ ಓದಿರಿ: ಬ್ರಿಟನ್​ನಲ್ಲಿ ದಾಖಲೆ ಮಟ್ಟಕ್ಕೇರಿದ ಉಷ್ಣಾಂಶ; ನೀರಲ್ಲಿ ಮುಳುಗಿ ಸತ್ತ ಜನ

ಸುಜಲ್ ಜೊತೆ ತೆರಳಿದ್ದ ಐವರನ್ನ ಸ್ಥಳೀಯ ಪೊಲೀಸರು ರಕ್ಷಣೆ ಮಾಡಿದ್ದು, ಭಾರತೀಯ ವಿದ್ಯಾರ್ಥಿ ಸುಜಲ್ ಪತ್ತೆಯಾಗಿಲ್ಲ. ಆತ​ ನಾಪತ್ತೆಯಾಗಿರುವ ಬಗ್ಗೆ ಸ್ನೇಹಿತ ರಾಘವ್ ಕುಟುಂಬದ ಸದಸ್ಯರಿಗೆ ವಾಟ್ಸ್​ಆ್ಯಪ್​ ಮೂಲಕ​​ ಮಾಹಿತಿ ನೀಡಿದ್ದಾನೆ. ಸುಜಲ್ ಪತ್ತೆಗೆ ವಿದೇಶಾಂಗ ಸಚಿವಾಲಯ ಕ್ರಮ ಕೈಗೊಳ್ಳುವಂತೆ ಇದೀಗ ಸುಜಲ್ ತಂದೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಮಾಡಿದ್ದಾರೆ. ಜೊತೆಗೆ ಕುಟುಂಬದ ಸದಸ್ಯರು ಅಲ್ಲಿಗೆ ತೆರಳಲು ವೀಸಾ ನೀಡುವಂತೆ ಕೇಳಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.