ಮುಂಬೈ: ಟೆಲಿಕಾಂ ಕಂಪನಿಯ ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಐಡಿಯಾ ಪ್ರಿಪೇಯ್ಡ್ ಯೋಜನೆಗಳು ನವೆಂಬರ್ 2022ರ ವೇಳೆಗೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಶೇ. 10ರಿಂದ 12ರಷ್ಟು ಸುಂಕ ಹೆಚ್ಚಿಸುವ ನಿರೀಕ್ಷೆ ಇದೆ ಎನ್ನಲಾಗ್ತಿದೆ. ಈ ಹಿಂದೆ 2021ರಲ್ಲಿ ಪ್ರಿಪೇಯ್ಡ್ ಯೋಜನೆಗಳು, ಅನಿಯಮಿತ ವಾಯ್ಸ್ ಕಾಲಿಂಗ್ ಪ್ಯಾಕ್‌ಗಳು ಮತ್ತು ಮೊಬೈಲ್ ಡೇಟಾ ರೀಚಾರ್ಜ್ ಬೆಲೆಗಳನ್ನು ಶೇ.20-25 ರಷ್ಟು ಹೆಚ್ಚಿಸಲಾಗಿದೆ.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಎಲ್ಲ ಟೆಲಿಕಾಂ ಆಪರೇಟರ್ಗಳು ದಿಢೀರ್ ಆಗಿ ತಮ್ಮ ಪ್ರಿಪೇಯ್ಡ್ ಯೋಜನೆಯ ಬೆಲೆಗಳನ್ನ ಹೆಚ್ಡಿಕೆ ಮಾಡಿದ್ದವು. ಇದೀಗ ಮತ್ತೊಮ್ಮೆ ಅಂತಹ ನಿರ್ಧಾರ ಕೈಗೊಳ್ಳಲು ಮುಂದಾಗಿವೆ ಎನ್ನಲಾಗುತ್ತಿದೆ. ದೇಶದಲ್ಲಿ ಪೆಟ್ರೋಲ್, ಎಲ್ಪಿಜಿ ಸಿಲಿಂಡರ್ ಬೆಲೆಗಳ ಏರಿಕೆ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲು ಟೆಲಿಕಾಂ ಕಂಪನಿಗಳು ಈ ನಿರ್ಧಾರಕ್ಕೆ ಸಿದ್ಧವಾಗಿವೆ.
ನವೆಂಬರ್ನಲ್ಲಿ ದೀಪಾವಳಿ ವೇಳೆಗೆ ಕನಿಷ್ಠ 10-12 ಪ್ರತಿಶತದಷ್ಟು ಸುಂಕ ಹೆಚ್ಚಿಸಲಿದ್ದು, ಇದರಿಂದ ಚಂದಾದಾರರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಏರ್‌ಟೆಲ್, ವೊಡಾಪೋನ್ಗೆ ಹೋಲಿಕೆ ಮಾಡಿದಾಗ ಜಿಯೋ ಯೋಜನೆ ತುಸು ಅಗ್ಗವಾಗಿದ್ದು, ಇದೀಗ ಎಲ್ಲರೂ ಪೋರ್ಟ್ ಆಗುವ ಸಾಧ್ಯತೆ ಹೆಚ್ಚಾಗಬಹುದು.ಈ ಹಿಂದೆ ಕೂಡ ಏರ್‌ಟೆಲ್ ಸಿಒಒ ಗೋಪಾಲ್ ವಿಟ್ಟಲ್, ಯೋಜನೆಯ ಬೆಲೆ ಹೆಚ್ಚಿಸುವ ಸುಳಿವು ಸಹ ನೀಡಿದೆ.
ಈ ಹಿಂದೆ 2021ರಲ್ಲಿ ಏರ್‌ಟೆಲ್ ಆರಂಭದಲ್ಲಿ ಪ್ರಿಪೇಯ್ಡ್ ರೀಚಾರ್ಜ್ ಬೆಲೆಗಳನ್ನು ಏರಿಸುವುದಾಗಿ ಘೋಷಿಸಿತ್ತು. ಈ ಬೆಲೆಗಳು ನವೆಂಬರ್ 26 ರಿಂದ ಜಾರಿಗೆ ಬಂದಿದ್ದವು. ಅದರ ನಂತರ ವೊಡಾಫೋನ್ ಐಡಿಯಾ ಕೂಡ ರೀಚಾರ್ಜ್ ದರ ಹೆಚ್ಚಿಸಿತು. ಈ ನಡುವೆ ಈ ಮೂರು ಟೆಲಿಕಾಂ ಸಂಸ್ಥೆಗಳಲ್ಲಿ ಗ್ರಾಹಕರು ಉತ್ತಮ ಯೋಜನೆಗಳ ಹುಡುಕಾಟದಲ್ಲಿದ್ದಾರೆ. ಸದ್ಯ ಈ ಎಲ್ಲ ಸಂಸ್ಥೆಯ ರೀಚಾರ್ಜ್ ದರಗಳು ತುಟ್ಟಿಯಾಗಿವೆ.