ನವದೆಹಲಿ: ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾಕ್ಕೆ ಭಾರತದಿಂದ ಏರ್ ಇಂಡಿಯಾ ವಿಮಾನ ಸಂಚಾರ ತಾತ್ಕಾಲಿಕವಾಗಿ ರದ್ದಾಗಿದೆ. ವಿಮಾನದ ವಿಮೆ ವಿಚಾರವಾಗಿ ಉಭಯ ರಾಷ್ಟ್ರಗಳ ರಾಜಧಾನಿಗಳ (ದೆಹಲಿ-ಮಾಸ್ಕೋ) ಮಧ್ಯೆ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.
ಫೆ.24ರಿಂದ ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿದೆ. ಇದನ್ನು ಖಂಡಿಸಿ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾಕ್ಕೆ ವಿಮಾನ ಹಾರಾಟವನ್ನು ನಿರ್ಬಂಧಿಸಿವೆ. ಇದೀಗ ದೆಹಲಿ ಮತ್ತು ಮಾಸ್ಕೋ ನಡುವಿನ ವಿಮಾನ ಹಾರಾಟ ಕೂಡ ರದ್ದಾಗಿದೆ. ಇದಕ್ಕೆ ಕಾರಣ ವಿಮಾನಗಳಿಗೆ ವಿಮೆಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳ ಮೂಲದ ಕಂಪನಿಗಳೇ ಒದಗಿಸುತ್ತಿವೆ. ಹೀಗಾಗಿ ಎರಡು ನಗರ ಮಧ್ಯೆ ಹಾರಾಟ ಮಾಡುವ ವಿಮೆ ಸಹ ಅನ್ವಯವಾಗಲ್ಲ ಎಂಬ ಭೀತಿಯಿಂದ ಹಾರಾಟ ನಿಲ್ಲಿಸಲಾಗಿದೆ ಎನ್ನಲಾಗುತ್ತಿದೆ.
ದೆಹಲಿ ಮತ್ತು ಮಾಸ್ಕೋ ನಡುವೆ ವಾರದಲ್ಲಿ ಏರ್ ಇಂಡಿಯಾ ವಿಮಾನ ಸಂಚರಿಸುತ್ತಿತ್ತು. ಈಗ ಗುರುವಾರದಿಂದ ಈ ವಿಮಾನ ಹಾರಾಟ ರದ್ದಾಗಿದೆ. ಆದರೆ, ಈ ಬಗ್ಗೆ ವಿಮಾನಯಾನ ಅಧಿಕಾರಿಗಳು ಪ್ರತಿಕ್ರಿಯೆ ನೀಡಿಲ್ಲ. ಇದೇ ವೇಳೆ ರಷ್ಯಾದಿಂದ ಬರುವ ವಿಮಾನಗಳಿಗೆ ಭಾರತ ಯಾವುದೇ ನಿರ್ಬಂಧ ಹೇರಿಲ್ಲ.
ಇದನ್ನೂ ಓದಿ: ಭಾರತಕ್ಕೆ ರಾಯಭಾರಿ ಸ್ಥಾನ ಅತ್ಯಂತ ಪ್ರಮುಖವಾದದ್ದು: ಶ್ವೇತಭವನ