ETV Bharat / bharat

ಪಾಕಿಸ್ತಾನದೊಳಕ್ಕೆ ಬಿದ್ದ ಭಾರತದ ಬ್ರಹ್ಮೋಸ್​ ಕ್ಷಿಪಣಿ: ವಾಯುಪಡೆಯ ಮೂವರು ಅಧಿಕಾರಿಗಳು ವಜಾ

ತಾಂತ್ರಿಕ ದೋಷದಿಂದಾಗಿ ಕ್ಷಿಪಣಿಯೊಂದು ಪಾಕಿಸ್ತಾನದ ಗಡಿಯೊಳಕ್ಕೆ ಬಿದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಯುಪಡೆಯ ಮೂವರು ಅಧಿಕಾರಿಗಳು ವಜಾಗೊಂಡಿದ್ದಾರೆ.

Brahmos missile misfire
Brahmos missile misfire
author img

By

Published : Aug 23, 2022, 7:37 PM IST

ನವದೆಹಲಿ: 2022ರ ಮಾರ್ಚ್​​ 9ರಂದು ನಡೆದ ಬ್ರಹ್ಮೋಸ್​ ಕ್ಷಿಪಣಿ ಮಿಸ್​​ ಫೈರಿಂಗ್​ ವೇಳೆ ಆಕಸ್ಮಿಕವಾಗಿ ಪಾಕ್​​ನಲ್ಲಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಐಎಎಫ್​ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ. ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಭಾರತೀಯ ವಾಯುಪಡೆ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ: ಆಕಸ್ಮಿಕವಾಗಿ ಪಾಕಿಸ್ತಾನದೊಳಕ್ಕೆ ಬಿದ್ದ ಭಾರತದ ಕ್ಷಿಪಣಿ: ತನಿಖೆಗೆ ಕೇಂದ್ರ ಸೂಚನೆ

ಸೇವೆಯಿಂದ ವಜಾಗೊಂಡಿರುವ ಅಧಿಕಾರಿಗಳಲ್ಲಿ ಗ್ರೂಪ್ ಕ್ಯಾಪ್ಟನ್​, ವಿಂಗ್ ಕಮಾಂಡರ್​ ಮತ್ತು ಸ್ಕ್ವಾಡ್ರನ್​ ಲೀಡರ್​​ ಸೇರಿದ್ದಾರೆ. ಬ್ರಹ್ಮೋಸ್ ಕ್ಷಿಪಣಿಯನ್ನ 2022ರ ಮಾರ್ಚ್ 9ರಂದು ಆಕಸ್ಮಿಕವಾಗಿ ಹಾರಿಸಲಾಗಿತ್ತು. ಅದು ಪಾಕ್​ ನೆಲದಲ್ಲಿ ಬಿದ್ದಿತ್ತು. ಇದರ ಸತ್ಯಾಸತ್ಯತೆ ತಿಳಿದುಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ತನಿಖಾ ತಂಡ ರಚನೆ ಮಾಡಿತ್ತು.

  • The officials who have been terminated from service include a Group Captain, a Wing Commander and a Squadron Leader. The officers deviated from the standard operating procedures which led to the accidental firing of the missile: Indian Air Force (IAF) officials https://t.co/RaFunyuSZF

    — ANI (@ANI) August 23, 2022 " class="align-text-top noRightClick twitterSection" data=" ">

ಇದೇ ವಿಚಾರವನ್ನಿಟ್ಟುಕೊಂಡು ಉನ್ನತ ಮಟ್ಟದ ತನಿಖೆ ನಡೆಸುವಂತೆ ಪಾಕ್​​ ಆಗ್ರಹಿಸಿತ್ತು. ಜೊತೆಗೆ ಭಾರತೀಯ ರಾಯಭಾರ ಕಚೇರಿಗೆ ಕರೆ ಮಾಡಿ ಪಾರದರ್ಶಕ ತನಿಖೆಗೆ ಒತ್ತಾಯ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಭಾರತ ಈ ವಿಷಯವನ್ನ ಭಾರತ ಗಂಭೀರವಾಗಿ ತೆಗೆದುಕೊಂಡಿದ್ದು, ಉನ್ನತ ಮಟ್ಟದ ವಿಚಾರಣೆಗೆ ಆದೇಶ ನೀಡಲಾಗಿದೆ ಎಂದು ಹೇಳಿತ್ತು. ಜೊತೆಗೆ ಸದನದಲ್ಲಿ ಈ ವಿಚಾರವಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ಸಹ ಹಂಚಿಕೊಂಡಿದ್ದರು.

ವಿಚಾರಣೆ ನಡೆಸಿದ ಬಳಿಕ ಇದೀಗ ಪ್ರಾಥಮಿಕ ಹೊಣೆಗಾರರನ್ನಾಗಿ ಮೂವರು ಐಎಎಫ್​ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ತಕ್ಷಣದಿಂದಲೇ ಇದು ಜಾರಿಗೆ ಬರಲಿದೆ ಎಂದು ವಾಯುಪಡೆ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.