ಸೂರತ್ (ಗುಜರಾತ್): ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಆಲ್ ಇಂಡಿಯಾ ಮಜ್ಲಿಸ್ - ಇ - ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಸೂರತ್ ಸಮೀಪದ ಲಿಂಬಯತ್ ಕ್ಷೇತ್ರದಲ್ಲಿ ಎಐಎಂಐಎಂ ಅಭ್ಯರ್ಥಿಯಾಗಿ ಅಬ್ದುಲ್ ಬಶೀರ್ ಶೇಖ್ ಅವರನ್ನು ಘೋಷಿಸಲಾಗಿದೆ. ಚುನಾವಣಾ ಪ್ರಚಾರಕ್ಕಾಗಿ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅಹಮದಾಬಾದ್‌ನಿಂದ ಸೂರತ್‌ಗೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಲ್ಲು ತೂರಾಟ ಮಾಡಲಾಗಿದೆ ಎಂದು ಪಕ್ಷದ ಮುಖಂಡ ವಾರಿಸ್ ಪಠಾಣ್ ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ಅವರೇ ಏನಾಗುತ್ತಿದೆ?. ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ರೈಲಿನಲ್ಲಿ ಅಸಾದುದ್ದೀನ್ ಓವೈಸಿ ಕುಳಿತಿದ್ದ ಕಿಟಕಿಯನ್ನು ಗುರಿಯಾಗಿಸಿಕೊಂಡು ಕಲ್ಲು ತೂರಾಟ ಮಾಡಲಾಗಿದೆ. 15 ಸೆಕೆಂಡ್ಗಳಲ್ಲಿ ಎರಡು ಕಲ್ಲುಗಳನ್ನು ಎಸೆಯಲಾಗಿದೆ. ಈ ದಾಳಿ ಸಮಾಜ ವಿರೋಧಿ ಶಕ್ತಿಗಳ ಕೃತ್ಯವಾಗಿದೆ ಎಂದು ದೂರಿದ್ದಾರೆ. ಆದರೆ, ಈ ಆರೋಪವನ್ನು ಗುಜರಾತ್ ರೈಲ್ವೆ ಪೊಲೀಸರು ಅಲ್ಲಗಳೆದಿದ್ದಾರೆ.
ಇದನ್ನೂ ಓದಿ: ಏಕಾಂಗಿಯಾಗಿ ಕಾನೂನು ಹೋರಾಟ ಮಾಡಿ ಪಿಎಸ್ಐ ಹುದ್ದೆಯ ಮೀಸಲಾತಿ ಗಿಟ್ಟಿಸಿಕೊಂಡ ತೃತೀಯ ಲಿಂಗಿ