ಹೈದರಾಬಾದ್: ಬಜೆಟ್ನಲ್ಲಿ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲಾಗಿದ್ದು, ಮಾರ್ಚ್ 2022ರ ವೇಳೆಗೆ 8,500 ಕಿ.ಮೀ ಹೆದ್ದಾರಿಗಳನ್ನು ನಿರ್ಮಿಸುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಇದು ಈ ಕೆಳಗಿನ ರಾಜ್ಯಗಳನ್ನು ಒಳಗೊಳ್ಳಲಿದೆ:
ತಮಿಳುನಾಡಿನಲ್ಲಿ 3,500 ಕಿಲೋ ಮೀಟರ್ ಕಾರಿಡಾರ್
ಕೇರಳದಲ್ಲಿ 65,000 ಕೋಟಿ ರೂ.ಗಳ ಹೂಡಿಕೆಯೊಂದಿಗೆ 1,100 ಕಿ.ಮೀ.
95,000 ಕೋಟಿ ರೂ. ವೆಚ್ಚದಲ್ಲಿ ಪಶ್ಚಿಮ ಬಂಗಾಳದಲ್ಲಿ 675 ಕಿ.ಮೀ.
ಮುಂದಿನ 3 ವರ್ಷಗಳಲ್ಲಿ ಅಸ್ಸೋಂನಲ್ಲಿ 1,300 ಕಿ.ಮೀ.
ಜೊತೆಗೆ 278 ಕಿ.ಮೀ. ಬೆಂಗಳೂರು - ಚೆನ್ನೈ ಎಕ್ಸ್ಪ್ರೆಸ್ವೇ ನಿರ್ಮಿಸುವುದಾಗಿ ಘೋಷಿಸಿದ್ದು, ನಿರ್ಮಾಣ ಕಾರ್ಯ ಇದೇ ಆರ್ಥಿಕ ವರ್ಷದಲ್ಲಿ ಪ್ರಾರಂಭವಾಗಲಿದೆ.
ಬ್ರೌನ್‌ಫೀಲ್ಡ್ ಯೋಜನೆಗಳಿಗಾಗಿ ಪೈಪ್‌ಲೈನ್ ಪ್ರಾರಂಭಿಸಲಾಗುವುದು. ಎನ್‌ಎಚ್‌ಎಐ ಮತ್ತು ಪಿಜಿಸಿಐಎಲ್ ತಲಾ ಒಂದನ್ನು ಪ್ರಾಯೋಜಿಸಿವೆ.
5,000 ಕೋಟಿ ರೂ.ಗಳ ಅಂದಾಜು ಉದ್ಯಮ ಮೌಲ್ಯವನ್ನು ಹೊಂದಿರುವ 5 ಕಾರ್ಯಕಾರಿ ರಸ್ತೆಗಳನ್ನು ಎನ್‌ಎಚ್‌ಎಐಗೆ ವರ್ಗಾಯಿಸಲಾಗುತ್ತಿದೆ. 7,000 ಕೋಟಿ ರೂ. ಮೌಲ್ಯದ ಪ್ರಸರಣ ಸ್ವತ್ತುಗಳನ್ನು ಪಿಜಿಸಿಐಎಲ್ಗೆ ವರ್ಗಾಯಿಸಲಾಗುವುದು.