ತಮಿಳುನಾಡು : ಮುಂಬರುವ ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪನ್ನಿರ್ ಸೇಲ್ವಂ ಎಐಡಿಎಂಕೆ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.
ಜನಪ್ರಿಯ ಯೋಜನೆಗಳ ಪಟ್ಟಿ ಪ್ರಕಟಿಸಿರುವ ಪಕ್ಷ ವಾಶಿಂಗ್ ಮಷಿನ್, ಸಿಲಿಂಡರ್, ವಿದ್ಯಾರ್ಥಿಗಳಿಗೆ 2 ಜಿಬಿ ಡೇಟಾ, ಉಚಿತ ಕೇಬಲ್ ಸಂಪರ್ಕ ಮತ್ತು ಇಂಧನ ಬೆಲೆ ಕಡಿತವನ್ನು ಘೋಷಿಸಿದೆ. ಇತರ ಪ್ರಮುಖ ಭರವಸೆಗಳೆಂದರೆ ಶಿಕ್ಷಣ ಸಾಲ ಮನ್ನಾ, ಪಡಿತರ ವಸ್ತುಗಳನ್ನು ಮನೆ ಬಾಗಿಲಿಗೆ ವಿತರಣೆ ಮತ್ತು ರಾಜ್ಯದ ನಿವಾಸಿಗಳಿಗೆ ಕಾಂಕ್ರೀಟ್ ಮನೆಗಳು, ಮನೆಯ ಒಬ್ಬ ವ್ಯಕ್ತಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಪಕ್ಷ ಭರವಸೆ ನೀಡಿದೆ.
ಪ್ರಣಾಳಿಕೆಯನ್ನು ವಿದ್ಯಾರ್ಥಿಗಳು ಮತ್ತು ಮಹಿಳೆಯರ ಮೇಲೆ ಕೇಂದ್ರೀಕರಿಸಲಾಗಿದೆ. ವಿದ್ಯಾರ್ಥಿಗಳಿಗೆ ನೀಡಿದ ಭರವಸೆಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಹಾಲು ಅಥವಾ ಹಾಲಿನ ಪುಡಿ ನೀಡುವುದು. 9-12 ತರಗತಿಗಳಿಗೆ ಮಧ್ಯಾಹ್ನದ ಬಿಸಿ ಊಟ ವಿಸ್ತರಿಸುವುದು. ಮಹಿಳೆಯರಿಗೆ ಒಂದು ವರ್ಷದ ಹೆರಿಗೆ ರಜೆ, ಬಸ್ ಪ್ರಯಾಣದಲ್ಲಿ ರಿಯಾಯಿತಿ, ಮಹಿಳಾ ಮನೆಯ ಮುಖ್ಯಸ್ಥರಿಗೆ ತಿಂಗಳಿಗೆ 1500 ರೂ. ನೀರುವ ಭರವಸೆ ನೀಡಿದೆ.