ಅಹಮದಾಬಾದ್ (ಗುಜರಾತ್): ಅಹಮದಾಬಾದ್ನಲ್ಲಿ ನೆಲೆಸಿರುವ ಜಿತೇಂದ್ರ ರತಿಲಾಲ್ ಜೋಶಿ ಅವರ ಬಳಿ ಭಾರತ ಮಾತ್ರವಲ್ಲದೇ ವಿದೇಶದ ಕೊಳಲುಗಳ ಸಂಗ್ರಹವಿದೆ. ಅವರು ಸುಮಾರು 100 ಕೊಳಲುಗಳ ಒಟ್ಟು ಸಂಗ್ರಹವನ್ನು ಹೊಂದಿದ್ದಾರೆ. ಇದರಲ್ಲಿ 2 ಕೊಳಲುಗಳು ಜರ್ಮನ್ ಮತ್ತು ಅಮೆರಿಕನ್ ಕೊಳಲುಗಳಾಗಿವೆ. ಇದರ ಬೆಲೆ 7 ರಿಂದ 10 ಲಕ್ಷದವರೆಗೆ ಅಂದಾಜಿಸಲಾಗಿದೆ. ಇವರ ಬಳಿ ಯಾವ ರೀತಿಯ ಕೊಳಲು ಸಂಗ್ರಹವಿದೆ ಎಂಬುದರಕ್ಕೆ ತಿಳಿಯೋಣ ಬನ್ನಿ.
ಕೊಳಲು ಸಂಗ್ರಹಿಸುವ ಹವ್ಯಾಸ: ಇಂದಿನ ದಿನಗಳಲ್ಲಿ ಕೊಳಲು ಎಂದರೆ ಎಲ್ಲರಿಗೂ ಒಲವು. ಅಹಮದಾಬಾದ್‌ನ ಶ್ಯಾಮಲ್ ಪ್ರದೇಶದ ನಿವಾಸಿ ಜೆಆರ್ ಜೋಶಿ ಕೊಳಲು ಅಂದ್ರೆ ತುಂಬಾ ಪ್ರೀತಿ. ಅವರೊಬ್ಬ ಬರಹಗಾರ. ಅವರು ತಮ್ಮ ಆಲೋಚನೆಗಳನ್ನು ತಮ್ಮ ಕಲೆಯ ಮೂಲಕ ಜನರಿಗೆ ಪ್ರಸ್ತುತಪಡಿಸುತ್ತಾರೆ. ಆದರೆ, ಅವರು ಕೊಳಲಿನ ಬಗ್ಗೆ ತುಂಬಾ ಒಲವು ಬೆಳೆಸಿಕೊಂಡಿದ್ದಾರೆ. ಅವರ ಬಳಿ ವಿವಿಧ ರೀತಿಯ ಕೊಳಲುಗಳ ಸಂಗ್ರಹವಿದೆ. ಇದರಲ್ಲಿ ಅದರ ಬೆಲೆ ಕೂಡ ತುಂಬಾ ದುಬಾರಿ ಇದೆ. ನಿಮಗೆ ಗೊತ್ತಾದ್ರೆ ನೀವು ಕೂಡಾ ಆಶ್ಚರ್ಯಪಡುತ್ತೀರಿ.
ಈಟಿವಿ ಭಾರತ ಜೊತೆಗೆ ಮಾತನಾಡಿದ ಜೋಶಿ, ''ಬಾಲ್ಯದಿಂದಲೂ ಕೊಳಲು ನುಡಿಸುವುದು ಒಲವು. ಖಾಖಿ ಬಾವನ ಸ್ಥಳದಲ್ಲಿ ಪೂಜೆ ಮಾಡುತ್ತಿದ್ದಾಗ ಅವರ ಕೈಯಲ್ಲಿ ಚಿಕ್ಕ ಕೊಳಲು ಸಿಕ್ಕಿತು. ಅದರ ಮೇಲೆ ಗುರುಗಳು ಮದರಿ ಧುನ್ ಕಲಿಸಿದರು. ನನ್ನ ಗುರುಗಳು ನನಗೆ ನಾಗಿನ್ ಮತ್ತು ಮದರಿ ರಾಗಗಳನ್ನು ಕಲಿಸಿದರು. ನನ್ನ ಗುರುಗಳೂ ಸಂಗೀತದಲ್ಲಿ ಪ್ರವೀಣರಾಗಿದ್ದರು. ಆಗ ನನಗೆ ಹಣದ ಸೌಲಭ್ಯವಿರಲಿಲ್ಲ. ನನಗೆ ಕೊಳಲಿನ ಬಗ್ಗೆ ಜ್ಞಾನವೂ ಇರಲಿಲ್ಲ. ಆದರೆ, ನನ್ನ ಬಳಿ ಹಣ ಬರತೊಡಗಿದ ಕೂಡಲೇ ನಾನು ವಿವಿಧ ರೀತಿಯ ಕೊಳಲುಗಳನ್ನು ಖರೀದಿಸಲು ಪ್ರಾರಂಭಿಸಿದೆ. ಸದ್ಯ ಜರ್ಮನ್ ಕೊಳಲು ಇದೆ. ಸದ್ಯ ನಾನು ಚೆನ್ನಾಗಿ ಕೊಳಲು ನುಡಿಸಬಲ್ಲೆ ಎಂದು ಅವರು ತಿಳಿಸಿದರು.
ವಿಶಿಷ್ಟ ವೈವಿಧ್ಯತೆಯ ಕೊಳಲುಗಳು: ಕೊಳಲು ಸಂಗ್ರಹದ ಬಗ್ಗೆ ಮಾತನಾಡಿದ ಜೆ.ಆರ್. ಜೋಶಿ ಅವರು, ವಿಶಿಷ್ಟ ವೈವಿಧ್ಯತೆಯನ್ನು ಹೊಂದಿರುವ 3 ಅಡಿಗಳ ಕೊಳಲು ಸಹ ಇದೆ. ಪ್ರಸ್ತುತ 100 ಕ್ಕೂ ಹೆಚ್ಚು ಬಿದಿರಿನ ಕೊಳಲುಗಳ ಸಂಗ್ರಹಿಸಲಾಗಿದೆ. ಬಿದಿರಿನ ಕೊಳಲು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಅದರಲ್ಲಿ ದೊಡ್ಡದು ಮೂರು ಅಡಿ ಒಂದು ಇಂಚಿನ ಕೊಳಲು, ಅದರ ಧ್ವನಿ ತುಂಬಾ ಮಧುರವಾಗಿದೆ. ಹಾಗಾಗಿ 6 ಇಂಚುಗಳಷ್ಟು ಚಿಕ್ಕದಾದ ಕೊಳಲು ಕೂಡ ಇದೆ. ಅದರ ಶಬ್ದವು ತುಂಬಾ ಜೋರಾಗಿ ಮತ್ತು ಕಿವಿಯಲ್ಲಿ ತೀಕ್ಷ್ಣವಾಗಿರುತ್ತದೆ.
ಕೊಳಲು ವಾದಕ ಜೆ.ಆರ್. ಜೋಶಿ ಅವರ ಬಳಿ ಭಾರತೀಯ ಮಾತ್ರವಲ್ಲದೇ ಜರ್ಮನ್ ಮತ್ತು ಅಮೆರಿಕನ್ ಕೊಳಲುಗಳ ಸಂಗ್ರಹವೂ ಇದೆ. ಇದರೊಳಗೆ 23 ಬಗೆಯ ಸ್ವಿಚ್‌ಗಳಿವೆ. ಇದರಲ್ಲಿ ಒಂದು ಪದವನ್ನು ಮೂರು ವಿಭಿನ್ನ ಸ್ಥಳಗಳಿಂದ ನುಡಿಸಬಹುದು. ಇತರ ಕೊಳಲುಗಳಲ್ಲಿ ಇದು ಸಾಧ್ಯವಿಲ್ಲ. ಜರ್ಮನ್ ಇನ್ ಆರ್ಟ್ ಕಂಪನಿ ತಯಾರಿಸಿರುವ ಕೊಳಲಿನ ಬೆಲೆ 7 ಲಕ್ಷ ರೂ. ಈ ಕೊಳಲುಗಳನ್ನು ಆರ್ಡರ್ ಮಾಡಲು ತಯಾರಿಸಲಾಗುತ್ತದೆ. ಅವರು ಸುಮಾರು $9000 ರಿಂದ $42000 ಮೌಲ್ಯದವರೆಗಿನ ಕೊಳಲುಗಳನ್ನು ಹೊಂದಿದ್ದಾರೆ. ಭಾರತೀಯ ಬೆಲೆಯ ಪ್ರಕಾರ ಸುಮಾರು 7 ಲಕ್ಷದಿಂದ ಪ್ರಾರಂಭವಾಗುತ್ತದೆ. ಆದ್ದರಿಂದ ಬಹಳ ದುಬಾರಿ ಕೊಳಲುಗಳಿವೆ. ಆದರೆ, ಅಲ್ಲಿಂದ ಇಲ್ಲಿಗೆ ತರಲು ಇನ್ನೂ 3 ಲಕ್ಷ ರೂಪಾಯಿ ಖರ್ಚಾಗುತ್ತದೆ. ಹೀಗಾಗಿ ಒಟ್ಟು ವೆಚ್ಚ 10 ಲಕ್ಷ ತಲುಪಿದಾಗ ಭಾರತದಲ್ಲಿ ಈ ಕೊಳಲು ಸಿಗುತ್ತದೆ.
ವಿವಿಧ ಕೊಳಲುಗಳ ಸಂಗ್ರಹಣೆ: ಕೇವಲ ಕೊಳಲುಗಳ ಸಂಗ್ರಹವಿಲ್ಲ. ಜೊತೆಗೆ ವಿವಿಧ ವಿದೇಶಿ ವಾಚ್‌ಗಳನ್ನು ಸಂಗ್ರಹ ಮಾಡಿದ್ದಾರೆ. ಜೆ.ಆರ್.ಜೋಶಿ ಅವರಿಗೆ ಕೊಳಲುಗಳೆಂದರೆ ಒಲವಿರುವುದರಿಂದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೊಳಲುಗಳನ್ನು ಸಂಹಿಸಿದ್ದಾರೆ. ಇದಲ್ಲದೆ, ಅವರು ಸ್ವತಃ ಲೇಖಕರಾಗಿ 10ಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ ಮತ್ತು 50 ಪುಟಗಳ ನಿಘಂಟನ್ನು ಸಹ ಬರೆದಿರುವುದು ಹೆಗ್ಗಳಿಕೆಗೆ ಸಾಕ್ಷಿಯಾಗಿದೆ.
ಇದನ್ನೂ ಓದಿ: 25.1 ಮಿಲಿಯನ್ ವೇರೆಬಲ್ ಡಿವೈಸ್ ಮಾರಾಟ: ಮುಂಚೂಣಿಯಲ್ಲಿ boAt