ETV Bharat / bharat

ಸಮವಸ್ತ್ರ ತೊಟ್ಟು, ರಿವಾಲ್ವರ್ ತೋರಿಸಿ ಸಿನಿಮಾ ಡೈಲಾಗ್​ ಹೊಡೆದಿದ್ದ ಮಹಿಳಾ ಪೊಲೀಸ್‌ ರಾಜೀನಾಮೆ - ಪ್ರಿಯಾಂಕಾ ಮಿಶ್ರಾ

ಮಹಿಳಾ ಪೊಲೀಸ್ ಪೊಲೀಸ್‌ ಕಾನ್ಸ್‌ಟೇಬಲ್‌ವೊಬ್ಬರು ಸಮವಸ್ತ್ರಧರಿಸಿ, ಕೈಯಲ್ಲಿ ರಿವಾಲ್ವರ್​​ ಹಿಡಿದು ಹಿಂದಿ ಸಿನಿಮಾ ಡೈಲಾಗ್​ ಹೊಡೆದಿರುವ ವಿಡಿಯೋ ಇನ್​​ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದರು. ಅದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

Agra women constable
Agra women constable
author img

By

Published : Sep 13, 2021, 4:47 PM IST

Updated : Sep 13, 2021, 5:14 PM IST

ಆಗ್ರಾ(ಉತ್ತರ ಪ್ರದೇಶ): ಕಳೆದ ಕೆಲ ತಿಂಗಳ ಹಿಂದೆ ಉತ್ತರ ಪ್ರದೇಶದ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಸಮವಸ್ತ್ರ ಧರಿಸಿ, ರಿವಾಲ್ವರ್​​ ಹಿಡಿದು ಹಿಂದಿ ಸಿನಿಮಾ ಡೈಲಾಗ್​ ಹೊಡೆದಿರುವ ವಿಡಿಯೋ ಇನ್​​ಸ್ಟಾಗ್ರಾಂನಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ವಿವಾದ ಹುಟ್ಟಿಸುತ್ತಿದ್ದಂತೆ ಆಕೆ ಇದೀಗ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ.

ಪ್ರಿಯಾಂಕಾ ಮಿಶ್ರಾ 2020ರಲ್ಲಿ ಪೊಲೀಸ್ ಕಾನ್ಸ್​ಟೇಬಲ್​ ಆಗಿ ನೇಮಕಗೊಂಡಿದ್ದರು. ಝಾನ್ಸಿಯಲ್ಲಿ ತರಬೇತಿ ಪಡೆದುಕೊಂಡ ಬಳಿಕ ಆಗ್ರಾದಲ್ಲಿನ ಎಂಎಂ ಗೇಟ್​​ ಪೊಲೀಸ್ ಠಾಣೆಯಲ್ಲಿ ಸೇವೆಗೆ ನಿಯೋಜನೆಗೊಂಡಿದ್ದರು. ಈ ವೇಳೆ ಪೊಲೀಸ್ ಠಾಣೆಯಲ್ಲೇ ಹಿಂದಿ ಸಿನಿಮಾ ರಂಗ್​ಭಾಜಿ ಚಿತ್ರದ ಡೈಲಾಗ್ ಹೊಡೆದು ವಿಡಿಯೋ ಹರಿಬಿಟ್ಟಿದ್ದರು.

ಕೆಲಸಕ್ಕೆ ರಾಜೀನಾಮೆ ನೀಡಿದ ಪೊಲೀಸ್​ ಕಾನ್ಸ್​ಟೇಬಲ್​

ಈ ವಿಡಿಯೋ ತುಣುಕನ್ನು ಖುದ್ದಾಗಿ ಇನ್​​ಸ್ಟಾಗ್ರಾಂನಲ್ಲಿ ಹಾಕಿಕೊಳ್ಳುತ್ತಿದ್ದಂತೆ ಭಾರಿ ವಿರೋಧ ವ್ಯಕ್ತವಾಗಿತ್ತು. ಜೊತೆಗೆ ತನಿಖೆ ನಡೆಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದರು. ಈ ವೇಳೆ ರಾಜೀನಾಮೆ ನೀಡಲು ಪ್ರಿಯಾಂಕಾ ಮುಂದಾಗಿದ್ದರು. ಆದರೆ ಅವರ ರಾಜೀನಾಮೆ ಅಂಗೀಕಾರವಾಗಿರಲಿಲ್ಲ. ಇದೀಗ ಅದನ್ನು ಅಂಗೀಕಾರ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ವಿಡಿಯೋ ಶೇರ್‌ ಮಾಡಿಕೊಳ್ಳುತ್ತಿದ್ದಂತೆ ಪ್ರಿಯಾಂಕಾ ಮಿಶ್ರಾ ಇನ್​ಸ್ಟಾಗ್ರಾಂ ಫಾಲೋವರ್ಸ್​ಗಳ ಸಂಖ್ಯೆ 3700 ರಿಂದ 15400ಕ್ಕೆ ಏರಿಕೆಯಾಗಿತ್ತು.

ಇದನ್ನೂ ಓದಿ: ಪೊಲೀಸ್​​ ಸಮವಸ್ತ್ರ ಹಾಕಿ, ರಿವಾಲ್ವರ್​ ತೋರಿಸಿ ಸಿನಿಮಾ ಡೈಲಾಗ್​ ಹೊಡೆದ ಪೇದೆ!

ಕಳೆದ 2019ರಲ್ಲಿ ಗುಜರಾತ್​ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಿಳಾ ಕಾನ್ಸ್​ಟೇಬಲ್​ ಓರ್ವರು ಡ್ಯೂಟಿಯಲ್ಲಿದ್ದ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲೇ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಟಿಕ್​ಟಾಕ್​​ನಲ್ಲಿ ಶೇರ್ ಮಾಡಿ ಸೇವೆಯಿಂದ ಸಸ್ಪೆಂಡ್‌ ಆಗಿದ್ದರು.

Last Updated : Sep 13, 2021, 5:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.