ETV Bharat / bharat

450 ಕಿ.ಮೀ ಕಾಲ್ನಡಿಗೆಯಲ್ಲಿ ಬಂದು ಹಸುಗಳಿಗೆ ದ್ವಾರಕಾಧೀಶನ ದರ್ಶನ ಮಾಡಿಸಿದ ಆಧುನಿಕ ಗೋಪಾಲ...! - ಆಧುನಿಕ ಗೋಪಾಲ ಮಹಾದೇವ ದೇಸಾಯಿ

ಮಾರಕ ಲಂಪಿ ವೈರಸ್ ಸಾಕುಪ್ರಾಣಿಗಳಿಗೆ ತಗುಲಿ ಗುಜರಾತ್ ರಾಜ್ಯವನ್ನೇ ತಲ್ಲಣಗೊಳಿಸಿತು. ಇದರಿಂದ ಗೋವುಗಳು ಸಾವಿಗೀಡಾಗಿ, ಸಾಕಣೆದಾರರು ಸಾಕಷ್ಟು ಹಾನಿ ಅನುಭವಿಸಿದ್ದರು. ಆದರೆ, ದೇವರಲ್ಲಿ ಪ್ರಾರ್ಥಿಸಿದ್ದಕ್ಕೆ ನನ್ನ ಹಸುಗಳು ಸುರಕ್ಷಿತವಾಗಿ ಉಳಿದವು ಎಂಬ ನಂಬಿಕೆ ನಿಜವಾಗಿರುವ ಕಾರಣ .ಇಲ್ಲೊಬ್ಬ ಭಕ್ತನು ತನ್ನ ಹರಕೆ ಈಡೇರಿಕೆಗೆ ತನ್ನ ಹಸುಗಳ ಸಹಿತ 450 ಕಿ.ಮೀ. ಕಾಲ್ನಡಿಗೆ ಮೂಲಕ ದ್ವಾರಕೆಗೆ ತಲುಪಿ ದ್ವಾರಕಾಧೀಶನ ದರ್ಶನ ಮಾಡಿಸಿದ ವಿಚಿತ್ರ ಘಟನೆ ಜರುಗಿದೆ.

Mahadeva Desai performed Dwarkadheesha darshan for his cows
ತನ್ನ ಹಸುಗಳಿಗೆ ದ್ವಾರಕಾಧೀಶನ ದರ್ಶನ ಮಾಡಿಸಿದ ಮಹಾದೇವ ದೇಸಾಯಿ
author img

By

Published : Nov 24, 2022, 9:25 PM IST

ದ್ವಾರಕಾ: ದ್ವಾರಕಾಧೀಶನ ದರ್ಶನಕ್ಕಾಗಿ ಭಕ್ತರು ಆಗಾಗ್ಗೆ ಕಾಲ್ನಡಿಗೆ ಮೂಲಕ ದ್ವಾರಕಾ ದೇವಾಲಯಕ್ಕೆ ತೆರಳುವುದು ಸಂಪ್ರದಾಯ. ಆದರೆ ಇಲ್ಲೊಬ್ಬ ಭಕ್ತನು ತನ್ನ ಹರಕೆ ಈಡೇರಿಕೆಗೆ ತನ್ನ ಹಸುಗಳನ್ನೇ 450 ಕಿ.ಮೀ ಕಾಲ್ನಡಿಯಿಂದ ಬಂದು ದ್ವಾರಕಾಧೀಶನ ದರ್ಶನ ಮಾಡಿಸಿದ ವಿಚಿತ್ರ ಘಟನೆ ದ್ವಾರಕೆಯಲ್ಲಿ ಜರುಗಿದೆ.

ಭಕ್ತನು ತಾನೂ ಬೇಡಿಕೊಂಡ ಹರಕೆ ತೀರಿಸಲು ಭಕ್ತಿ ಪರಾಕಷ್ಟೆಯ ಮೌಲ್ಯವನ್ನು ಸಾರುವಂತಿದೆ. ಮಾರಕ ಲಂಪಿ ವೈರಸ್ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತು. ದ್ವಾರಕಾಧೀಶನ ಮಹಾನ್ ಭಕ್ತನಾಗಿದ್ದ ಗುಜರಾಥ್ ಕಚ್‌ನ ಮಹಾದೇವ ದೇಸಾಯಿ ಅವರು ತನ್ನೇಲ್ಲ ಹಸುಗಳನ್ನು ಭಯಾನಕ ಪಿಡುಗು ಲಂಪಿ ವೈರಸ್​ ದಿಂದ ಸಂರಕ್ಷಿಸಲು ದೇವ ದ್ವಾರಕಾಧೀಶನಲ್ಲಿ ಪ್ರಾರ್ಥಿಸಿದನು. ನನ್ನ ಜೀವನಾಡಿ ಹಸುಗಳೆಲ್ಲವು ಸುರಕ್ಷಿತವಾಗಿದ್ದರೆ, ಎಲ್ಲ ಹಸುಗಳನ್ನು ಕಾಲ್ನಡಿಗೆ ಮೂಲಕ ನಿನ್ನ ದರ್ಶನ ಮಾಡಿಸುವೆ ಎಂದು ಹರಕೆ ಹೊತ್ತನು.

ತಾನು ಅಂದುಕೊಂಡಂತೆ ಎಲ್ಲ ಹಸುಗಳಿಗೆ ಯಾವುದೇ ಪಿಡುಗು ತಟ್ಟದೇ ಆರೋಗ್ಯವಾಗಿದ್ದವು. ತನ್ನ ಪ್ರಾರ್ಥನೆ ಫಲಿಸಿತು ಎಂದು ಆಧುನಿಕ ಗೋಪಾಲ ಮಹಾದೇವ ದೇಸಾಯಿ ಹಸುಗಳ ಸಹಿತ ತಾನು ಗುಜರಾತ್ ನ ಕಛ್‌ನಿಂದ ದ್ವಾರಕೆಗೆ ಕಾಲ್ನಡಿಗೆ ಮೂಲಕ ಹೊರಡಲು ಶುರುಮಾಡಿದನು. ಸುಮಾರು 450 ಕಿ.ಮೀ ಕಾಲ್ನಡಿಗೆ ಮೂಲಕ 25 ಹಸುಗಳು 5 ಗೋ ಸೇವಕರೊಂದಿಗೆ ಆಧುನಿಕ ಗೋಪಾಲ ಮಹಾದೇವ ದೇಸಾಯಿ ದ್ವಾರಕೆಗೆ ಬಂದು ತಲುಪಿದ್ದಾರೆ.

ರಾತ್ರಿ ದೇವಸ್ಥಾನ ಸಮಿತಿಯ ಅಧಿಕಾರಿಯ ವಿಶೇಷ ಅನುಮತಿ ಪಡೆದ ಮಹಾದೇವ ದೇಸಾಯಿ ಅವರು 25 ಹಸುಗಳು ಮತ್ತು 5 ಗೋ ಸೇವಕರೊಂದಿಗೆ ಜಗತ್ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿದರು. ಈ ವೇಳೆ, ಪೂಜಾರಿ ಹಸುವಿನ ತಾಯಿಗೆ ವಸ್ತ್ರ ತೊಡಿಸಿ ಆಶೀರ್ವಾದ ಮಾಡಿದರು.

ದ್ವಾರಕಾಧೀಶನ ಬಳಿ ಬೇಡಿಕೆ ಈಡೇರಿದ ಬಳಿಕ ಸಾಕಿದ 25 ಹಸುಗಳಿಗೆ ಯಾವುದೇ ಕಾಯಿಲೆಗಳೂ ತಟ್ಟಲಿಲ್ಲ. ಆರೋಗ್ಯವಾಗಿ ಕಾಪಾಡಿದ ನನ್ನ ಹಸುಗಳನ್ನು ಕರೆದುಕೊಂಡು ಬಂದು ದ್ವಾರಕಾಧೀಶ ದೇವಸ್ಥಾನ ದರ್ಶನ ಪಡೆಯಲು ನಿರ್ಧರಿಸಲಾಯಿತು ಎನ್ನುತ್ತಾನೆ. ಆಧುನಿಕ ಗೋಪಾಲ ಮಹಾದೇವ ದೇಸಾಯಿ. ಆದರೂ ಆಧುನಿಕ ಯುಗದಲ್ಲಿಯೂ ಈ ಘಟನೆಯಿಂದ ದೇವರ ಭಕ್ತರ ನಡುವಿನ ವಿಶಿಷ್ಠ ಹಾಗೂ ನಂಬಿಕೆ ಹೊರಹೊಮ್ಮಿದೆ.

ಇದನ್ನೂ ಓದಿ:ವ್ಯಾಪಾರ ಕೇಂದ್ರವಾಗಿರುವ ತಿರುಪತಿ ದೇವಸ್ಥಾನ: ವಿವಿಧ ರಾಜ್ಯಗಳ 30 ಮಠಾಧೀಶರ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.