ETV Bharat / bharat

ಛತ್ತೀಸ್‌ಗಢದಲ್ಲೊಂದು ಅಪರೂಪದ ಘಟನೆ: ಸೊಸೆಗೆ ಮರು ಮದುವೆ ಮಾಡಿಸಿದ ಮಾಜಿ ಸಂಸದ

ಛತ್ತೀಸ್‌ಗಢದ ಬಿಜೆಪಿಯ ಮಾಜಿ ಸಂಸದರೊಬ್ಬರು ತಮ್ಮ ಮಗನ ಮರಣದ ನಂತರ, ಸೊಸೆಗೆ ಮರು ಮದುವೆ ಮಾಡಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

author img

By

Published : Nov 7, 2022, 4:09 PM IST

ಸೊಸೆಗೆ ಮರು ಮದುವೆ ಮಾಡಿಸಿದ ಮಾವ
ಸೊಸೆಗೆ ಮರು ಮದುವೆ ಮಾಡಿಸಿದ ಮಾವ

ಧಮ್ತಾರಿ (ಛತ್ತೀಸ್‌ಗಢ): ಪುತ್ರನ ಮರಣದ ನಂತರ ಬಿಜೆಪಿಯ ಮಾಜಿ ಸಂಸದರಾದ ಚಂದುಲಾಲ್​ ಸಾಹು ಅವರು ತಮ್ಮ ಸೊಸೆಗೆ ಮರು ಮದುವೆ ಮಾಡಿಸಿದ್ದಾರೆ. ಈ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಡಾ.ವೀರೇಂದ್ರ ಗಂಜೀರ್ ಅವರೊಂದಿಗೆ ಮಾಜಿ ಸಂಸದರು ತಮ್ಮ ಸೊಸೆಯ ವಿವಾಹ ಮಾಡಿಸಿದ್ದಾರೆ. ಗಂಜೀರ್​​ ಅವರ ಪತ್ನಿ ಹೃದಯಾಘಾತದಿಂದ ಮೃತಪಟ್ಟಿದ್ದರು.

ಸೊಸೆಗೆ ಮರು ಮದುವೆ ಮಾಡಿಸಿದ ಮಾವ

ಮಹಾಸಮುಂಡ್‌ನ ಮಾಜಿ ಸಂಸದ ಚಂದುಲಾಲ್ ಸಾಹು ಅವರು ತಮ್ಮ ಮಗನನ್ನು ಅನಾರೋಗ್ಯದಿಂದ ಕಳೆದುಕೊಂಡಿದ್ದರು. ಅವರು ಪತ್ನಿ ಕಲ್ಯಾಣಿ ಹಾಗೂ ಒಂದೂವರೆ ವರ್ಷದ ಮಗನನ್ನು ಬಿಟ್ಟು ಅಗಲಿದ್ದಾರೆ. ಸೊಸೆ ಮತ್ತು ಮೊಮ್ಮಗನ ಭವಿಷ್ಯದ ದೃಷ್ಟಿಯಿಂದ ಸಾಹು ಈ ಮದುವೆ ತಾವೇ ಮುಂದೆ ನಿಂತು ಮಾಡಿಸಿದ್ದಾರೆ.

ಸುಮಾರು ಹತ್ತು ವರ್ಷಗಳ ಹಿಂದೆ ಕಲ್ಯಾಣಿ ಅವರ ಮೊದಲ ಮದುವೆ ನಡೆದಿತ್ತು. ಮದುವೆಯಾದ ನಾಲ್ಕು ವರ್ಷಗಳ ನಂತರ ಆಕೆಯ ಪತಿ ಮೃತಪಟ್ಟಿದ್ದರು. ಕಲ್ಯಾಣಿ ಒಂದೂವರೆ ವರ್ಷದ ಮಗುವಿನೊಂದಿಗೆ ಜೀವಿಸುತ್ತಿದ್ದರು. ಇದೇ ರೀತಿ ಡಾ.ಗಂಜೀರ್ ಪತ್ನಿಯನ್ನು ಕಳೆದುಕೊಂಡು ಮಗಳೊಂದಿಗೆ ಇದ್ದರು. 'ತುಳಸಿ ಪೂಜೆ'ಯ ಶುಭ ದಿನದಂದು, ಕಲ್ಯಾಣಿ ಅವರು ಡಾ. ವೀರೇಂದ್ರ ಗಂಜೀರ್ ಅವರನ್ನು ಮದುವೆಯಾಗಿದ್ದಾರೆ.

ಇದನ್ನೂ ಓದಿ: ಬಿಹಾರ: ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಡಾ. ಗಂಜೀರ್, ನಮ್ಮ ಜೀವನದಲ್ಲಿ ನಾವು ಇದೇ ರೀತಿಯ ಸನ್ನಿವೇಶಗಳನ್ನು ಎದುರಿಸಿದ್ದೇವೆ, ಕಲ್ಯಾಣಿಗಿಂತ ಉತ್ತಮ ಜೀವನ ಸಂಗಾತಿ ನನಗೆ ಸಿಗಲಿಲ್ಲ ಎಂದು ಹೇಳಿದರು. ಮತ್ತೊಂದೆಡೆ ಕಲ್ಯಾಣಿ ಮಾತನಾಡಿ, ನನ್ನ ಕುಟುಂಬವು ತುಂಬಾ ಬೆಂಬಲ ನೀಡಿತು. ಸುಮಾರು ಏಳು ವರ್ಷಗಳ ಕಾಲ ಏಕಾಂಗಿಯಾಗಿ ಬದುಕಿದ ನನಗೆ ಇದೀಗ ಜೀವನ ಸಂಗಾತಿ ಸಿಕ್ಕಿದ್ದಾರೆ ಎಂದು ಸಂತಸ ಹಂಚಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.