ETV Bharat / bharat

ಪೆಗಾಸಸ್​ ಬಳಿಕ ಕಾಗ್ನೈಟ್​ ಸ್ಪೈವೇರ್​ ಖರೀದಿಗೆ ಕೇಂದ್ರ ಸರ್ಕಾರ ಯತ್ನ: ಕಾಂಗ್ರೆಸ್​ ಗಂಭೀರ ಆರೋಪ

ಕೇಂದ್ರ ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್​ ಮತ್ತೊಂದು ಗೂಢಾಚಾರ ಆರೋಪ ಮಾಡಿದೆ. ಪೆಗಾಸಸ್​ ಬಳಿಕ ಹೊಸ ಸ್ಪೈವೇರ್​ ಖರೀದಿ ಮಾಡಲು ಸರ್ಕಾರ ಮುಂದಾಗಿದೆ ಎಂದು ದೂರಿದೆ.

ಸ್ಪೈವೇರ್​ ಖರೀದಿಗೆ ಕೇಂದ್ರ ಸರ್ಕಾರ ಯತ್ನ
ಸ್ಪೈವೇರ್​ ಖರೀದಿಗೆ ಕೇಂದ್ರ ಸರ್ಕಾರ ಯತ್ನ
author img

By

Published : Apr 10, 2023, 5:17 PM IST

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಪೆಗಾಸಸ್​ ಸ್ಪೈವೇರ್​ ಆರೋಪ ಹೊರಿಸಿದ್ದ ಕಾಂಗ್ರೆಸ್​ ಇದೀಗ ಅಂಥದ್ದೇ ಗೂಢಚರ ಸಾಫ್ಟ್​ವೇರ್​ ಬಳಕೆ ಮಾಡಲು ಮುಂದಾಗಿದೆ ಎಂದು ಹೇಳಿದೆ. ಇಸ್ರೇಲ್‌ನಿಂದ ಪೆಗಾಸಸ್ ಸ್ಪೈವೇರ್ ಖರೀದಿಸಿದ ನಂತರ, ಈಗ ಹೊಸ ಸ್ಪೈವೇರ್ ಕಾಗ್ನೈಟ್ ಅನ್ನು ಖರೀದಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಇದು ಪ್ರಜಾಪ್ರಭುತ್ವದ ವಿರೋಧಿ ನಡೆದ ಎಂದು ಕಾಂಗ್ರೆಸ್ ಸೋಮವಾರ ಗಂಭೀರ ಆರೋಪ ಮಾಡಿದೆ.

ಸ್ಪೈವೇರ್ ಪೆಗಾಸಸ್, ಕೇಂಬ್ರಿಡ್ಜ್ ಅನಾಲಿಟಿಕಾ ಮತ್ತು ಟೀಮ್ ಜಾರ್ಜ್‌ನಂತೆಯೇ, ಕೇಂದ್ರ ಸರ್ಕಾರ ಮಾಧ್ಯಮ ಸಂಸ್ಥೆಗಳು, ನಾಗರಿಕ ಹಕ್ಕುಗಳ ಕಾರ್ಯಕರ್ತರು, ನ್ಯಾಯಾಂಗ ಮತ್ತು ಇತರೆ ಸಂಸ್ಥೆಗಳ ಮೇಲೆ ಕಣ್ಣಿಡಲು ಕಾಗ್ನೈಟ್ ಎಂಬ ಹೊಸ ಸ್ಪೈವೇರ್ ಅನ್ನು ಖರೀದಿಸುತ್ತಿದೆ. ಹೊಸ ಸ್ಪೈವೇರ್‌ಗಾಗಿ 986 ಕೋಟಿ ರೂಪಾಯಿ ಖರ್ಚು ಮಾಡಲು ಸರ್ಕಾರ ಸಿದ್ಧವಾಗಿದೆ ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಆರೋಪಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕಾಂಗ್ರೆಸ್​ ಮುಖಂಡ, ಹೆಚ್ಚಿನ ದೇಶಗಳಿಂದ ಕಪ್ಪುಪಟ್ಟಿಗೆ ಸೇರಿಸಲ್ಪಟ್ಟಿರುವ ಪೆಗಾಸಸ್‌ಗಿಂತ ಕಡಿಮೆ ಪ್ರೊಫೈಲ್ ಹೊಂದಿರುವ ಹೊಸ ಸ್ಪೈವೇರ್‌ಗಾಗಿ ಸರ್ಕಾರ ಹುಡುಕಾಟ ನಡೆಸುತ್ತಿದೆ. ರಕ್ಷಣಾ ಮತ್ತು ಗುಪ್ತಚರ ಅಧಿಕಾರಿಗಳು ಹೊಸ ಸ್ಪೈವೇರ್ ಅನ್ನು ಎನ್​ಎಸ್​ಪಿ ಗ್ರೂಪ್​ನಿಂದ ಪಡೆದುಕೊಳ್ಳಲು ನಿರ್ಧರಿಸಿದೆ. ಇದು ಪೆಗಾಸಸ್ ಸ್ಪೈವೇರ್​ನಂತೆಯೇ ಕಾರ್ಯಾಚರಣೆ ಮಾಡುತ್ತದೆ. ಇದಕ್ಕಾಗಿ 986 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸರ್ಕಾರ ಸಿದ್ಧವಾಗಿದೆ. ಕೇಂದ್ರ ಸರ್ಕಾರ ಹೊಸ ಸ್ಪೈವೇರ್ ಖರೀದಿಯ ಅಂತಿಮ ಚರ್ಚೆಯಲ್ಲಿದೆ. ರಕ್ಷಣಾ ಸಚಿವಾಲಯವು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ ಎಂಬದು ನಿಜವೇ ಎಂದು ಖೇರಾ ಪ್ರಶ್ನಿಸಿದ್ದಾರೆ.

ಬಿಜೆಪಿ ಪರ ಅನಾಲಿಟಿಕಾ ಕೇಂಬ್ರಿಡ್ಜ್​ ತಂಡ: 2018 ರಲ್ಲಿ ಕೇಂಬ್ರಿಡ್ಜ್ ಅನಾಲಿಟಿಕಾ ಮತ್ತು ಬಿಜೆಪಿ ನಡುವಿನ ಒಪ್ಪಂದವನ್ನು ಕಾಂಗ್ರೆಸ್​ ಸಾಬೀತುಪಡಿಸಿದೆ. ಲೋಕಸಭಾ ಚುನಾವಣೆ, ಬಿಹಾರ, ಜಾರ್ಖಂಡ್, ದೆಹಲಿ, ಹರಿಯಾಣ ಮತ್ತು ಮಹಾರಾಷ್ಟ್ರದ ಚುನಾವಣೆಗಳಲ್ಲಿ ಕೇಂಬ್ರಿಡ್ಜ್​ ಅನಾಲಿಟಿಕಾ ಬಿಜೆಪಿ ಪರವಾಗಿ ಹೇಗೆ ಪ್ರಚಾರ ಮಾಡಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಇತ್ತೀಚೆಗೆ, ಇಸ್ರೇಲ್‌ನ ಟೀಮ್ ಜಾರ್ಜ್ ಎಂಬ ಹೆಸರಿನ ಹ್ಯಾಕರ್‌ಗಳ ತಂಡವನ್ನು ಬಳಕೆ ಮಾಡಲಾಗಿತ್ತು. ಇದನ್ನು ಬಿಜೆಪಿ ಚುನಾವಣೆಗಳ ಮೇಲೆ ಪ್ರಭಾವ ಬೀರಲು ಬಳಸಿಕೊಂಡಿತ್ತು ಎಂದು ಹೇಳಿದ್ದಾರೆ.

ಅಕ್ರಮ ಮತ್ತು ಅಸಂವಿಧಾನಿಕ ಕಣ್ಗಾವಲು ಹೊಂದುವ ವಿಚಾರದಲ್ಲಿ ಬಿಜೆಪಿ ಸರ್ಕಾರ ಮತ್ತೊಮ್ಮೆ ಬೆತ್ತಲಾಗಿದೆ. ಸರ್ಕಾರದ ಇಬ್ಬರು ವ್ಯಕ್ತಿಗಳು ಗೂಢಾಚಾರಿಕೆ ಮಾಡುತ್ತಿದ್ದಾರೆ. ಅವರು ಯಾರನ್ನೂ ನಂಬುವುದಿಲ್ಲ. ಆದ್ದರಿಂದ, ಅವರು ಸ್ಪೈವೇರ್​ ಸಾಫ್ಟ್‌ವೇರ್ ಖರೀದಿಸಲು ಜನರ ಕೋಟಿಗಟ್ಟಲೆ ಹಣವನ್ನು ಬಳಸುತ್ತಿದ್ದಾರೆ. ತಮ್ಮ ಮೇಲಿನ ಆರೋಪಗಳು ಬಯಲಾಗುವ ಭಯದಲ್ಲಿ ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್​ ಶಾ ಅವರ ಹೆಸರು ಹೇಳದೇ ದೂರಿದ್ದಾರೆ.

ಪೆಗಾಸಸ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣಾ ಸಮಿತಿಯು ತನಿಖೆ ನಡೆಸುತ್ತಿದೆ. 66.7 ಕೋಟಿ ಭಾರತೀಯರ ರಹಸ್ಯ ದಾಖಲೆಗಳನ್ನು ಕದ್ದಿರುವುದು ಕಂಡುಬಂದಿದೆ. ಇದು ಅವರ ಗೌಪ್ಯತೆಯ ಹಕ್ಕನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಹೇಳಿದರು.

ಓದಿ: ಭಾರತದ 84 ಸ್ಟಾರ್ಟಪ್​ಗಳಲ್ಲಿ 24,250 ಉದ್ಯೋಗ ಕಡಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.