ETV Bharat / bharat

ಕುನೋ ಅಭಯಾರಣ್ಯದಿಂದ ತಪ್ಪಿಸಿಕೊಂಡ ಹೆಣ್ಣು ಚಿರತೆ - ವಿಜಯಪುರದ ಜಾರ್ ಬರೋಡಾ ಗ್ರಾಮ

ವಿಜಯಪುರದ ಜಾರ್ ಬರೋಡಾ ಗ್ರಾಮದ ಸಮೀಪ ಬಂದಿದ್ದ ಗಂಡು ಚಿರತೆ ಓವನ್ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಹೆಣ್ಣು ಚಿರತೆ
ಹೆಣ್ಣು ಚಿರತೆ
author img

By

Published : Apr 5, 2023, 10:24 PM IST

ಶಿಯೋಪುರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಓವನ್ ಎಂಬ ಹೆಸರಿನ ಗಂಡು ಚಿರತೆಯನ್ನು ಇನ್ನೂ ಸೆರೆಹಿಡಿಯಲು ಸಾಧ್ಯವಾಗಿಲ್ಲ. ಇದರ ಮಧ್ಯೆ ಆಶಾ ಎಂಬ ಹೆಣ್ಣು ಚಿರತೆ ಪರಾರಿಯಾಗಿದೆ. ಅಧಿಕೃತ ಮೂಲಗಳ ಪ್ರಕಾರ, ಕಳೆದ ಎರಡು ಮೂರು ದಿನಗಳಿಂದ ಆಶಾ ಕುನೋ ರಾಷ್ಟ್ರೀಯ ಉದ್ಯಾನವನದ ಬಫರ್ ವಲಯದಲ್ಲಿ ಕಾಣಿಸಿಕೊಂಡಿತ್ತು.

ಪ್ರಧಾನಿ ನರೇಂದ್ರ ಮೋದಿ ಅವರು ಹೆಸರಿಸಿರುವ ಹೆಣ್ಣು ಚಿರತೆ ಕುನೋದ ಮೀಸಲು ವಲಯ ಮತ್ತು ಬಫರ್ ವಲಯದ ನಡುವೆ ಸಂಚರಿಸುತ್ತಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಹೆಣ್ಣು ಚಿರತೆ ಹೆಚ್ಚಾಗಿ ನದಿ ದಡದಲ್ಲಿ ಕಾಣಿಸಿಕೊಂಡಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಚಲನವಲನಗಳ ಮೇಲೆ ತೀವ್ರ ನಿಗಾ ಇರಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದ ಓವನ್: ಭಾನುವಾರ ಬೆಳಗ್ಗೆ ವಿಜಯಪುರದ ಜಾರ್ ಬರೋಡಾ ಗ್ರಾಮದ ಬಳಿಯ ಪ್ರದೇಶಕ್ಕೆ ಬಂದಿದ್ದ ಗಂಡು ಚಿರತೆ ಓವನ್ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಗ್ರಾಮೀಣ ಪ್ರದೇಶಗಳಲ್ಲಿ ಓವನ್ ಹಲವಾರು ಬಾರಿ ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

ಹಸು, ಜಿಂಕೆ ಬೇಟೆ: ಕುನೋ ರಾಷ್ಟ್ರೀಯ ಉದ್ಯಾನವನದ ಹೊರಗೆ ಓವನ್ ತಿರುಗಾಡುವುದನ್ನು ಮುಂದುವರಿಸಿದರೆ ಅದನ್ನು ಹಿಡಿಯಬೇಕೇ ಎಂಬ ಬಗ್ಗೆ ಅರಣ್ಯ ಇಲಾಖೆ ಶೀಘ್ರದಲ್ಲೇ ತಿಳಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಬಗ್ಗೆ ಗುರುವಾರ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ಗಂಡು ಚಿರತೆ ಇತ್ತೀಚೆಗೆ ಹಸು ಮತ್ತು ಜಿಂಕೆಯನ್ನು ಬೇಟೆಯಾಡಿತ್ತು.

ಚಿರತೆಗಳು ಮನುಷ್ಯರನ್ನು ಬೇಟೆಯಾಡುವುದಿಲ್ಲ ಮತ್ತು ಸಾಮಾನ್ಯವಾಗಿ ಮಾನವ ಸಂಪರ್ಕವನ್ನು ತಪ್ಪಿಸುವುದರಿಂದ ಸ್ಥಳೀಯರಿಗೆ ಅಪಾಯವಾಗುವ ಸಾಧ್ಯತೆಯಿಲ್ಲ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಗ್ರಾಮಗಳಲ್ಲಿ ಓಡಾಡುತ್ತಿರುವುದರಿಂದ ಜನರು ಆತಂಕಗೊಂಡಿದ್ದಾರೆ.

ನಮೀಬಿಯಾದಿಂದ ತಂದ ಹೆಣ್ಣು ಚೀತಾ ಸಾವು: ಕಳೆದ ವರ್ಷದ ಡಿಸೆಂಬರ್ 22ರಂದು ನಮೀಬಿಯಾದಿಂದ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಗಿದ್ದ ಹೆಣ್ಣು ಚೀತಾ 'ಶಾಶಾ' ಸಾವನ್ನಪ್ಪಿತ್ತು. ಶಾಶಾವನ್ನು ಭಾರತಕ್ಕೆ ಕರೆತರುವ ಮುನ್ನವೇ ಕಿಡ್ನಿ ಸೋಂಕಿನಿಂದ ಬಳಲುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದರು.

ಇದನ್ನೂ ಓದಿ : ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿದ್ದ ನಮೀಬಿಯಾದ ಹೆಣ್ಣು ಚೀತಾ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.