ಅಹಮದಾಬಾದ್ (ಗುಜರಾತ್): ಗುಜರಾತ್ನ ಸೂರತ್ನಲ್ಲಿ ಆಘಾತಕಾರಿ ಮತ್ತು ಹೃದಯಸ್ಪರ್ಶಿ ಘಟನೆ ನಡೆದಿದೆ. ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿ, ಬಿಟ್ಟು ಹೋಗಿದ್ದಾಳೆ. ಆನಂತರ ಆಕೆಗೆ ಮಕ್ಕಳ ನೆನಪಾಗಿ ಮರಳಿ ಆಸ್ಪತ್ರೆ ಬಂದಿದ್ದಾಳೆ.
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಸುಮಾರು 35 ವರ್ಷದ ಮಹಿಳೆ ಹೆರಿಗೆಗೆ ದಾಖಲಾಗಿ, ಒಂದು ಹೆಣ್ಣು ಮತ್ತು ಒಂದು ಗಂಡುವಿಗೆ ಜನ್ಮ ನೀಡಿದ್ದಳು. ಆದರೆ, ಹೆರಿಗೆ ನಂತರ ಆಕೆ ಮಕ್ಕಳನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೊರಟು ಹೋಗಿದ್ದಾಳೆ.
ನಂತರ ಆಕೆಗಾಗಿ ಆಸ್ಪತ್ರೆಯ ಸುತ್ತಮುತ್ತ ಸಿಬ್ಬಂದಿ ಹುಟುಕಾಟ ನಡೆಸಿದರೂ ಸುಳಿವು ಸಿಗಲಿಲ್ಲ. ಹೀಗಾಗಿ, ಆಸ್ಪತ್ರೆಯುವರು ನೀಡಿದ ದೂರು ಆಧರಿಸಿ ಪೊಲೀಸರು ಮಹಿಳೆಯ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಆದರೆ, ಪೊಲೀಸರೂ ಆಕೆಯ ಸುಳಿವು ದೊರೆಯಲಿಲ್ಲ.
ಮಕ್ಕಳ ನೆನಪಾಗಿ ಮರಳಿ ಬಂದಳು: ಮಕ್ಕಳನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದ ಆಕೆ ಮರಳಿ ತಾನೇ ಬಂದಿದ್ದಾಳೆ. ಆಕೆ ಸ್ನಾನ ಮಾಡಲೆಂದು ಮನೆಗೆ ಹೋಗುತ್ತಿದ್ದಳಂತೆ. ಆದರೆ, ದಾರಿ ಮಧ್ಯೆಯೇ ಸಾರ್ವಜನಿಕ ಶೌಚಾಲಯ ಕಂಡು ಅಲ್ಲೇ ಸ್ನಾನ ಮಾಡಲು ಹೋಗಿ ನಿದ್ರಿಸಿದ್ದಾಳೆ. ಬೆಳಗ್ಗೆ ಎಚ್ಚರವಾದ ಬಳಿಕ ಥಟ್ಟನೇ ಮಕ್ಕಳ ನೆನಪಾಗಿದೆ. ಹೀಗಾಗಿ ತಾನೇ ಮಕ್ಕಳನ್ನು ಹುಡುಕಿಕೊಂಡು ಆಸ್ಪತ್ರೆಗೆ ಬಂದಿದ್ದಾಳೆ. ಸ್ತ್ರೀರೋಗ ವಿಭಾಗಕ್ಕೆ ಬಂದಾಗ ಪೊಲೀಸರು ಗಮನಿಸಿದ್ದಾರೆ.
ಆಕೆ ಮಾನಸಿಕ ಅಸ್ವಸ್ಥಳು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇಬ್ಬರೂ ಮಕ್ಕಳು ಕಡಿಮೆ ತೂಕದವರಾಗಿದ್ದಾರೆ. ಗಂಡು ಮಗು 1 ಕೆ.ಜಿ 400 ಗ್ರಾಂ ಇದ್ದರೆ, ಹೆಣ್ಣು ಮಗು 1 ಕೆಜಿ 880 ಗ್ರಾಂ ಇದೆ. ಆದ್ದರಿಂದ ಎನ್ಐಸಿಯು ಘಟಕದಲ್ಲಿ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಸೇನೆ ಸೇರುವ ಬಯಕೆ ಹೊಂದಿದ್ದ ರೈತನ ಮಗ 'ಅಗ್ನಿಪಥ' ಹಿಂಸಾಚಾರಕ್ಕೆ ಬಲಿ