ನವದೆಹಲಿ(ನೋಯ್ಡಾ): ಗಾಜಿಯಾಬಾದ್ ಜೈಲಿನಲ್ಲಿ 140 ಕೈದಿಗಳಿಗೆ ಮಾರಣಾಂತಿಕ ವೈರಸ್ ಪತ್ತೆಯಾಗಿತ್ತು. ಇದಾದ ಒಂದು ವಾರದ ಬಳಿಕ ನೋಯ್ಡಾ ಜಿಲ್ಲಾ ಜೈಲಿನಲ್ಲಿ ಪರೀಕ್ಷೆಯ ನಂತರ 31 ಕೈದಿಗಳಲ್ಲಿ ಎಚ್ಐವಿ ಪಾಸಿಟಿವ್ ಬಂದಿದೆ.
ನೋಯ್ಡಾ ಜಿಲ್ಲಾ ಕಾರಾಗೃಹದಲ್ಲಿರುವ 2650 ಕೈದಿಗಳಿಗೆ ವಿಶೇಷ ತಪಾಸಣೆ ನಡೆಸಲಾಗಿತ್ತು. ಇಷ್ಟು ಕೈದಿಗಳ ಪೈಕಿ 31 ಕೈದಿಗಳಿಗೆ ಎಚ್‌ಐವಿ ಪಾಸಿಟಿವ್ ದೃಢಪಟ್ಟಿದೆ ಎಂದು ಮುಖ್ಯ ವೈದ್ಯಾಧಿಕಾರಿ ಹಾಗೂ ಜಿಲ್ಲಾ ಆಸ್ಪತ್ರೆಯ ಸಿಎಂಎಸ್ ಪವನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಸೋಂಕಿತ ಕೈದಿಗಳಿಗೆ ಔಷಧೋಪಚಾರ ನೀಡಿ ನಿಗಾ ವಹಿಸಲಾಗಿದೆ. ಈ ಬೆಳವಣಿಗೆ ಜೈಲಿನಲ್ಲಿದ್ದ ಕೈದಿಗಳು ಹಾಗೂ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ. ಎಚ್ಐವಿ ಒಂದು ವೈರಲ್ ಸೋಂಕು ಆಗಿದ್ದು, ಅದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಆಕ್ರಮಿಸುತ್ತದೆ. ಈ ಸಂದರ್ಭದಲ್ಲಿ ರೋಗಿಗೆ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ಎಚ್ಐವಿ ದೇಹದಲ್ಲಿ ಏಡ್ಸ್ ಆಗಿ ಪರಿಣಮಿಸಿ ರೋಗಿಯನ್ನು ಮರಣದ ಹಂತಕ್ಕೆ ಕೊಂಡೊಯ್ಯಬಹುದು.
ಇದನ್ನೂ ಓದಿ : ಮೂಢನಂಬಿಕೆ ದೂರ ಮಾಡಲು ಸ್ಮಶಾನದಲ್ಲಿ ಜನ್ಮದಿನ ಆಚರಿಸಿಕೊಂಡ ವ್ಯಕ್ತಿ!