ETV Bharat / bharat

ಗಂಡ ಸಾವನ್ನಪ್ಪುತ್ತಿದ್ದಂತೆ 6 ಮಕ್ಕಳ ಬಿಟ್ಟು ಪ್ರಿಯಕರನೊಂದಿಗೆ​ ಮಹಿಳೆ ಪರಾರಿ! - ಗಂಡ ಸಾವನ್ನಪ್ಪುತ್ತಿದ್ದಂತೆ ಯುವಕನೊಂದಿಗೆ ಪರಾರಿ

ಆರು ಮಕ್ಕಳ ತಾಯಿಯೋರ್ವಳು ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಓಡಿ ಹೋಗಿರುವ ಘಟನೆ ಮಧ್ಯಪ್ರದೇಶದ ವಿದಿಶಾದಲ್ಲಿ ನಡೆದಿದೆ.

woman ran with her lover
woman ran with her lover
author img

By

Published : Apr 15, 2022, 8:32 PM IST

ವಿದಿಶಾ(ಮಧ್ಯಪ್ರದೇಶ): ಕಟ್ಟಿಕೊಂಡ ಗಂಡ ಸಾವನ್ನಪ್ಪುತ್ತಿದ್ದಂತೆ ಆರು ಮಕ್ಕಳ ತಾಯಿಯೋರ್ವಳು ಎಲ್ಲ ಮಕ್ಕಳನ್ನೂ ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ. ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಶಂಶಾಬಾದ್​​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಮಹಿಳೆಗೆ ಒಂದು ವರ್ಷದ ಮಗು ಸಹ ಇದೆ ಎಂದು ತಿಳಿದು ಬಂದಿದೆ.

ಕಳೆದ ಕೆಲ ತಿಂಗಳ ಹಿಂದೆ ಯುವತಿಯ ಗಂಡ ನೀರಿನ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಇದರ ಬೆನ್ನಲ್ಲೇ ಎಲ್ಲ ಮಕ್ಕಳನ್ನು ಬಿಟ್ಟು ಯುವತಿ ನೆರೆಮನೆಯ ಯುವಕನೊಂದಿಗೆ ಓಡಿ ಹೋಗುವ ನಿರ್ಧಾರ ಕೈಗೊಂಡಿದ್ದಾಳೆ. ಈ ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಆಕೆಯ ನಿರ್ಧಾರಕ್ಕೆ ಹಿಡಿಶಾಪ ಹಾಕ್ತಿದ್ದಾರೆ. ತಾಯಿ ಪರಾರಿಯಾಗಿರುವ ಕಾರಣ ಅಸಹಾಯಕರಾದ ಮಕ್ಕಳೆಲ್ಲರೂ ಸೇರಿ ಸಂಬಂಧಿಕರೊಂದಿಗೆ ಶಂಶಾಬಾದ್​​ ಪೊಲೀಸ್ ಠಾಣೆಗೆ ಬಂದಿದ್ದಾರೆ.

ಇದನ್ನೂ ಓದಿ: ರಾಂಗ್​​ ಸೈಡ್​ನಿಂದ ಬಂದು ಮಹಿಳೆಗೆ ಬೈಕ್ ಡಿಕ್ಕಿ: ಸವಾರನಿಗೆ ಶೂನಿಂದ ಥಳಿಸಿದ ಯುವತಿ!

30 ವರ್ಷದ ರಾಣಿ ತಾನು ನೆರೆ ಮನೆಯ ಯುವಕನೊಂದಿಗೆ ಓಡಿ ಹೋಗಿದ್ದಾಳೆಂದು ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಮಹಿಳೆಯನ್ನ ಹುಡುಕಿಕೊಡುವ ಭರವಸೆ ನೀಡಿದ್ದಾರೆ. ಇದೇ ವೇಳೆ ಪರಾರಿಯಾಗಿರುವ ಯುವತಿಯ ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಮಕ್ಕಳ ತಂದೆ ನೀರಿನ ಟ್ಯಾಂಕ್​ನಲ್ಲಿ ಬಿದ್ದು ಸಾವನ್ನಪ್ಪಿರುವುದರಿಂದ ಪರಿಹಾರವಾಗಿ 15 ಲಕ್ಷ ರೂ. ಬರಲಿದೆ. ಇದರ ಬೆನ್ನಲ್ಲೇ ಯುವಕನೊಂದಿಗೆ ಓಡಿ ಹೋಗಿದ್ದಾಳೆ. ತಕ್ಷಣವೇ ಅದನ್ನು ಮುಟ್ಟುಗೋಲು ಹಾಕುವಂತೆ ಮನವಿ ಮಾಡಿದ್ದಾಳೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.