ETV Bharat / bharat

5 ವರ್ಷಗಳ ಬಳಿಕ ಡಿಎಂಕೆ ಸಮಾವೇಶಕ್ಕೆ ತಮಿಳುನಾಡಿಗೆ ಆಗಮಿಸಿದ ಸೋನಿಯಾ ಗಾಂಧಿ

author img

By ETV Bharat Karnataka Team

Published : Oct 14, 2023, 10:45 AM IST

ಮಹಿಳಾ ಹಕ್ಕುಗಳ ಸಮಾವೇಶಕ್ಕಾಗಿ ತಮಿಳುನಾಡಿಗೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಆಗಮಿಸಿದ್ದು ಸಿಎಂ ಸ್ಟಾಲಿನ್​ ಪುಸ್ತಕ ನೀಡಿ ಸ್ವಾಗತಿಸಿದರು.

ಸೋನಿಯಾ ಗಾಂಧಿ ತಮಿಳುನಾಡು ಭೇಟಿ
ಸೋನಿಯಾ ಗಾಂಧಿ ತಮಿಳುನಾಡು ಭೇಟಿ

ಚೆನ್ನೈ (ತಮಿಳುನಾಡು): ಶುಕ್ರವಾರ ಚೆನ್ನೈಗೆ ಆಗಮಿಸಿದ್ದ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಚೆನ್ನೈ ವಿಮಾನ ನಿಲ್ದಾಣ ಸ್ವಾಗತಿಸಿದರು. ಇಬ್ಬರು ಕಾಂಗ್ರೆಸ್​ ನಾಯಕಿಯರು ನಿನ್ನೆ ರಾತ್ರಿ ಡಿಎಂಕೆ ಮಹಿಳಾ ತಂಡ ಆಯೋಜಿಸಿರುವ ‘ಮಹಿಳಾ ಹಕ್ಕುಗಳ ಸಮಾವೇಶ’ದಲ್ಲಿ ಭಾಗವಹಿಸಲು ಬಂದಿದ್ದರು. ಇವರನ್ನು ಸ್ವಾಗತಿಸಲೆಂದೇ ಸಿಎಂ ಸ್ಟಾಲಿನ್​ ವಿಮಾನ ನಿಲ್ದಾಣಕ್ಕೆ ತೆರಳಿದ್ದರು.

ಮಾಜಿ ಮುಖ್ಯಮಂತ್ರಿ ದಿವಂಗತ ಟಿ.ಎನ್.ಕರುಣಾನಿಧಿ ಅವರ ಶತಮಾನೋತ್ಸವದ ನಿಮಿತ್ತ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಮಹಿಳಾ ತಂಡದ ವತಿಯಿಂದ ಇಂದು ನಂದನಂ ವೈಎಂಸಿಎ ಮೈದಾನದಲ್ಲಿ ‘ಮಹಿಳಾ ಹಕ್ಕುಗಳ ಸಮಾವೇಶ’ ನಡೆಯಲಿದೆ. ಈ ಹಿನ್ನೆಲೆ ಮೊನ್ನೆಯಿಂದ ಸಮ್ಮೇಳನಕ್ಕಾಗಿ ಭರದಿಂದ ಕೆಲಸ ನಡೆಸಲಾಗಿದೆ. ಜತೆಗೆ ಖುದ್ದಾಗಿ ನಿನ್ನೆ ಸಿಎಂ ಸ್ಟಾಲಿನ್ ಸಮ್ಮೇಳನದ ಕಲಾಪವನ್ನು ಪರಿಶೀಲನೆ ನಡೆಸಿದ್ದಾರೆ. ಇನ್ನು ಮುನ್ನೆಚ್ಚರಿಕೆಯಾಗಿ ವೈ.ಎಂ.ಸಿ.ಎ. ಜಾಗದಲ್ಲಿ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ.

ಪುಸ್ತಕ ನೀಡಿ ಗೌರವ: ವಿಮಾನ ನಿಲ್ದಾಣದಲ್ಲಿ ಸಿಎಂ ಸ್ಟಾಲಿನ್​ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಸ್ವಾಗತದ ವೇಳೆ ಪುಸ್ತಕ ನೀಡಿ ಗೌರವಿಸಿದರು. ಜತೆಗೆ ಕಾಂಗ್ರೆಸ್​ ನಾಯಕಿಯರ ಆಗಮನದ ಹಿನ್ನೆಲೆ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್​ ನಾಯಕರು, ಕಾರ್ಯಕರ್ತರು ಜಮಾಯಿಸಿದ್ದು, ಅದ್ದೂರಿ ಸ್ವಾಗತ ಕೋರಿದರು.

ಈ ವೇಳೆ ಸಿಎಂ ಸ್ಟಾಲಿನ್​ ಜೊತೆ ಸಚಿವರಾದ ಉದಯನಿಧಿ ಸ್ಟಾಲಿನ್, ಕೆ.ಎನ್.ನೆಹರು, ಪೊನ್ಮುಡಿ, ಗೀತಾ ಜೀವನ್, ಸಂಸದರಾದ ಟಿ.ಆರ್.ಬಾಲು, ದಯಾನಿಧಿ ಮಾರನ್, ಕನಿಮೋಳಿ, ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಕೆ.ಎಸ್.ಅಳಗಿರಿ ಹಾಜರಿದ್ದರು. ಸ್ವಾಗತದ ಬಳಿಕ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಖಾಸಗಿ ಹೋಟೆಲ್‌ಗೆ ತೆರಳಿದರು. ಇನ್ನು ಇಂದು ನಡೆಯಲಿರುವ ಸಮಾವೇಶದಲ್ಲಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಇತರ ಪ್ರಮುಖ ಅಖಿಲ ಭಾರತ ನಾಯಕರು ಪಾಳ್ಗೊಳಲಿದ್ದಾರೆ.

5 ವರ್ಷಗಳ ಬಳಿಕ ಸೋನಿಯಾ ಗಾಂಧಿ ತಮಿಳುನಾಡು ಭೇಟಿ: ಹೌದು ಕಾಂಗ್ರೆಸ್​ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಬಹಳ ವರ್ಷಗಳ ನಂತರ ತಮಿಳುನಾಡಿಗೆ ಭೇಟಿ ಕೊಟ್ಟಿದ್ದಾರೆ. ಈ ಹಿಂದೆ 2018 ರಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಟಿ.ಎನ್.ಕರುಣಾನಿಧಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲು ತಮಿಳುನಾಡಿಗೆ ಭೇಟಿ ಕೊಟ್ಟಿದ್ದರು. ಅದರ ಬಳಿಕ ಅಂದರೆ 5 ವರ್ಷಗಳ ಬಳಿಕ ಮತ್ತೆ ಡಿಎಂಕೆ ಸಮಾವೇಷಕ್ಕಾಗಿ ಭೇಟಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕ ಗಾಂಧಿ ಚುನಾವಣಾ ಮಾದರಿ ಸಂಹಿತೆ ಉಲ್ಲಂಘನೆ ಆರೋಪ: ಚುನಾವಣಾ ಆಯೋಗಕ್ಕೆ ಬಿಜೆಪಿ ಸಂಚಾಲಕನಿಂದ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.