ನಾಸಿಕ್ (ಮಹಾರಾಷ್ಟ್ರ) : ನಾಸಿಕ್‌ನ ಯೋಲಾದಲ್ಲಿ ಅಫ್ಘಾನಿಸ್ತಾನದ ಸೂಫಿ ಜರೀಫ್ ಬಾಬಾ ಚಿಸ್ತಿ ಹತ್ಯೆ ಪ್ರಕರಣದಲ್ಲಿ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಬಾಬಾ ಹತ್ಯೆಯಾಗಿರಬಹುದು ಎಂದು ಪೊಲೀಸರು ಶಂಕು ವ್ಯಕ್ತಪಡಿಸಿದ್ದಾರೆ.
4 ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದ 29 ರ ಹರೆಯದ ಜರೀಫ್ ಬಾಬಾ 3 ಕೋಟಿ ರೂ.ಗಳ ಆಸ್ತಿ ಸಂಪಾದಿಸಿರುವುದು ಬೆಳಕಿಗೆ ಬಂದಿದೆ. ಜು.5 ರಂದು ಯೋಲಾದ ಚಿಂಚೋಡಿ ಗ್ರಾಮದ ಎಂಐಡಿಸಿ ಪ್ರದೇಶದಲ್ಲಿ ಜರೀಫ್ ಬಾಬಾ ಚಿಸ್ತಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ತಲೆಮರೆಸಿಕೊಂಡಿರುವ ದಾಳಿಕೋರರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಅಪರಾಧ ದಳ ಸೇರಿದಂತೆ ಮೂರು ತಂಡಗಳು ದಾಳಿಕೋರರ ಜಾಡು ಹಿಡಿದಿವೆ. ಇದುವರೆಗೆ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ.
ಚಿಸ್ತಿ ಬಾಬಾ ಇತರ ಸ್ಥಳೀಯರ ಹೆಸರಿನಲ್ಲಿ ಚರ ಆಸ್ತಿ ವ್ಯವಹಾರ ಮಾಡುತ್ತಿದ್ದರಂತೆ. ಬಾಬಾ ಅವರ ಯೂಟ್ಯೂಬ್ ಚಾನಲ್ 2 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಮತ್ತು 1 ಲಕ್ಷ ಚಂದಾದಾರರನ್ನು ಹೊಂದಿದ್ದು, ಜಾಫಿರ್ ಬಾಬಾ ಹತ್ಯೆಗೂ ಒಂದು ದಿನ ಮುನ್ನ ಅಂದರೆ 4 ರಂದು ಭಕ್ತರ ಮನೆಗೆ ಭೇಟಿ ನೀಡಿದ್ದರು. ಭೇಟಿಯ ವಿಡಿಯೋ ಯೂಟ್ಯೂಬ್ನಲ್ಲಿ ಅಪ್ಲೋಡ್ ಆಗಿದ್ದು, ಅದೇ ಅವರ ಕೊನೆಯ ಕ್ಷಣವಾಗಿದೆ.
ಬಾಬಾ ಕೇವಲ 4 ವರ್ಷಗಳ ಹಿಂದೆ ಭಾರತಕ್ಕೆ ವಲಸೆ ಬಂದಿದ್ದರು. ಅವರು ನಿರಾಶ್ರಿತರಾಗಿ ಭಾರತದಲ್ಲಿ ಆಶ್ರಯ ಪಡೆದಿದ್ದರು. ಆ ವೇಳೆ ಸುಮಾರು 3 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಸಂಪಾದಿಸಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಆದರೆ, ನಿರಾಶ್ರಿತರಾಗಿದ್ದು, ಸ್ವಂತ ಹೆಸರಿಗೆ ಯಾವುದೇ ಆಸ್ತಿ ಪಡೆಯಲು ಸಾಧ್ಯವಾಗದ ಕಾರಣ ಸ್ಥಳೀಯ ಸೇವಕರ ಹೆಸರಿನಲ್ಲಿ ಚರಾಸ್ತಿ ವಹಿವಾಟು ನಡೆಸುತ್ತಿದ್ದರು ಎನ್ನಲಾಗ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಇವರು ತಮ್ಮನ್ನು ಸಂತರೆಂದು ಹೇಳಿಕೊಳ್ಳುತ್ತಿದ್ದರು. ನಾಸಿಕ್‌ನ ಸಿನ್ನಾರ್ ಬಳಿಯ ವಾವಿಯಲ್ಲಿ ಒಂದೂವರೆ ವರ್ಷದಿಂದ ವಾಸವಾಗಿದ್ದರು. ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ತಮ್ಮ ಅಸ್ತಿತ್ವವನ್ನು ವಿಸ್ತರಿಸುತ್ತಿದ್ದರು.
ಇದನ್ನೂ ಓದಿ: 'ನಾನು ಜಯಲಲಿತಾ ಸಹೋದರ.. ಆಸ್ತಿಯಲ್ಲಿ ನಂಗೂ 50% ಕೊಡಿ': ಮೈಸೂರಿನ ವ್ಯಕ್ತಿಯಿಂದ ಮನವಿ