ETV Bharat / bharat

ತುರ್ತು ಸಭೆ ನಡೆಸಿದ ಭಾರತದಲ್ಲಿನ ಆಫ್ಘನ್ ಅಲ್ಪಸಂಖ್ಯಾತರು.. ಕಾರಣ? - evacuation of Afghan minorties

ಆಫ್ಘನ್ ನಾಗರಿಕರನ್ನು ಸ್ಥಳಾಂತರಿಸಲು ಇ-ವೀಸಾಗಳನ್ನು ನೀಡುವಂತೆ ಹಾಗೂ ಮಾನ್ಯ ಪ್ರಯಾಣ ದಾಖಲೆಗಳನ್ನು ಹೊಂದಿರದ ಕೆಲವರಿಗೆ ಅನುಕೂಲ ಕಲ್ಪಿಸುವಂತೆ ಭಾರತ ಸರ್ಕಾರದ ಬಳಿ ಭಾರತದಲ್ಲಿನ ಆಫ್ಘನ್ ಅಲ್ಪಸಂಖ್ಯಾತ ಮುಖಂಡರು ಮನವಿ ಮಾಡಿದ್ದಾರೆ.

ತುರ್ತು ಸಭೆ ನಡೆಸಿದ ಭಾರತದಲ್ಲಿನ ಅಫ್ಘನ್ ಅಲ್ಪಸಂಖ್ಯಾತರು

author img

By

Published : Nov 1, 2021, 7:08 AM IST

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಹಿಂದೂ ಮತ್ತು ಸಿಖ್ಖರಿಗೆ ಇ-ವೀಸಾಗಳನ್ನು ನೀಡಿ, ಅವರನ್ನು ಸ್ಥಳಾಂತರಿಸಲು ಅನುಕೂಲ ಮಾಡಿಕೊಡುವಂತೆ ಭಾರತದಲ್ಲಿನ ಆಫ್ಘನ್ ಅಲ್ಪಸಂಖ್ಯಾತ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ದೆಹಲಿಯ ಗುರುದ್ವಾರ ಗುರುನಾನಕ್ ದರ್ಬಾರಿನ್ ಮನೋಹರ್ ನಗರದಲ್ಲಿ ನಿನ್ನೆ ಭಾರತದಲ್ಲಿನ ಆಫ್ಘನ್ ಅಲ್ಪಸಂಖ್ಯಾತ ಮುಖಂಡರು ತುರ್ತು ಸಭೆ ನಡೆಸಿದ್ದರು. ಮೂಲಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಹಿಂದೂ ಮತ್ತು ಸಿಖ್​ ಸಮುದಾಯದ 222 ಮಂದಿಯನ್ನು ಸ್ಥಳಾಂತರಿಸುವ ಕುರಿತು ಚರ್ಚಿಸಲು ಈ ಸಭೆ ಕರೆಯಲಾಗಿತ್ತು.

ಎರಡು ತಿಂಗಳ ಅವಧಿಗೆ 216 ಆಫ್ಘನ್ ನಾಗರಿಕರನ್ನು ಸ್ಥಳಾಂತರಿಸಲು ಇ-ವೀಸಾಗಳನ್ನು ನೀಡುವಂತೆ ಹಾಗೂ ಮಾನ್ಯ ಪ್ರಯಾಣ ದಾಖಲೆಗಳನ್ನು ಹೊಂದಿರದ ಇತರ ಆರು ಜನರಿಗೆ ಅನುಕೂಲ ಕಲ್ಪಿಸುವಂತೆ ಭಾರತ ಸರ್ಕಾರದ ಬಳಿ ಆಫ್ಘನ್ ಅಲ್ಪಸಂಖ್ಯಾತ ಮುಖಂಡರು ವಿನಂತಿಸಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ $144 ಮಿಲಿಯನ್ ಹಣಕಾಸು ನೆರವು ಘೋಷಿಸಿದ ಅಮೆರಿಕ

ಇದೇ ವೇಳೆ, ಅಫ್ಘಾನಿಸ್ತಾನದಲ್ಲಿ ವಾಸಿಸುವ ಅಲ್ಪಸಂಖ್ಯಾತರ ಹಿತಾಸಕ್ತಿಗಾಗಿ ಕ್ರಮ ತೆಗೆದುಕೊಂಡಿರುವುದಕ್ಕೆ ಹಾಗೂ ದೇಶವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ 77 ಹಿಂದೂಗಳು ಮತ್ತು ಸಿಖ್ಖರನ್ನು ಸ್ಥಳಾಂತರಿಸಲು ಮತ್ತು ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ವಿಸ್ತರಿಸಿರುವುದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

ಅಫ್ಘಾನಿಸ್ತಾನದ ಮಾಜಿ ಸಂಸದ ನರಿಂದರ್ ಸಿಂಗ್ ಖಾಲ್ಸಾ, ಅವರ ಸಹೋದರ ಮತ್ತು ಮಾಜಿ ಅಧ್ಯಕ್ಷ ಘನಿ ಅವರಿಗೆ ಸಲಹೆಗಾರನಾಗಿದ್ದ ಸಂದಲ್ ಸಿಂಗ್ ಖಾಲ್ಸಾ ಮತ್ತು ಅನೇಕ ಗುರುದ್ವಾರಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.