ETV Bharat / bharat

ಭಾರತದಲ್ಲಿದ್ದ ತನ್ನ ರಾಯಭಾರ ಕಚೇರಿ ಮುಚ್ಚಿದ ಅಫ್ಘಾನಿಸ್ತಾನ - Afghan embassy‘

ಭಾರತದಲ್ಲಿನ ಅಫ್ಘಾನಿಸ್ತಾನದ ರಾಯಭಾರ ಕಚೇರಿಯು ಇಂದಿನಿಂದ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದಾಗಿ ತಿಳಿಸಿದೆ.

Afghan embassy
ಅಫ್ಘಾನಿಸ್ತಾನ
author img

By ETV Bharat Karnataka Team

Published : Oct 1, 2023, 10:22 AM IST

ನವದೆಹಲಿ : ಭಾರತದಲ್ಲಿನ ಅಫ್ಘಾನಿಸ್ತಾನದ ರಾಯಭಾರ ಕಚೇರಿಯು ಅಕ್ಟೋಬರ್ 1 ರಿಂದ ತನ್ನ ಕಾರ್ಯಾಚರಣೆಯನ್ನು ಮುಚ್ಚುವುದಾಗಿ ಘೋಷಿಸಿದೆ. ರಾಯಭಾರ ಕಚೇರಿ ಹೊರಡಿಸಿದ ಹೇಳಿಕೆಯಲ್ಲಿ ಈ ಮಾಹಿತಿ ನೀಡಲಾಗಿದೆ. ಸುಗಮ ಕಾರ್ಯನಿರ್ವಹಣೆಗೆ ಅಗತ್ಯವಾದ ಬೆಂಬಲ ಮತ್ತು ಸಂಪನ್ಮೂಲಗಳ ಕೊರತೆ ಸೇರಿದಂತೆ ಇತರೆ ಸಮಸ್ಯೆಗಳಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಯಿತು ಎಂದು ತಿಳಿಸಿದೆ.

ಈ ಕುರಿತು ಅಧಿಕೃತ ಹೇಳಿಕೆಯಲ್ಲಿ ವಿಷಾದ ವ್ಯಕ್ತಪಡಿಸಿ, "ನವದೆಹಲಿಯಲ್ಲಿರುವ ಅಫ್ಘಾನಿಸ್ತಾನದ ರಾಯಭಾರ ಕಚೇರಿಯು ತನ್ನ ಕಾರ್ಯಾಚರಣೆಯನ್ನು ನಿಲ್ಲಿಸುವ ನಿರ್ಧಾರವನ್ನು ಪ್ರಕಟಿಸಲು ತೀವ್ರವಾದ ದುಃಖ ಮತ್ತು ನಿರಾಶೆಯಾಗಿದೆ. ಅಫ್ಘಾನಿಸ್ತಾನ ಮತ್ತು ಭಾರತದ ನಡುವಿನ ಐತಿಹಾಸಿಕ ಬಾಂಧವ್ಯ ಮತ್ತು ದೀರ್ಘಕಾಲದ ಸಹಭಾಗಿತ್ವವನ್ನು ಗಣನೆಗೆ ತೆಗೆದುಕೊಳ್ಳಲಾಗಿದ್ದು, ಮುಂದಿನ ಸಮಸ್ಯೆಗಳನ್ನು ಪರಿಗಣಿಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಳೆದ 22 ವರ್ಷಗಳಲ್ಲಿ ಅಫ್ಘಾನಿಸ್ತಾನಕ್ಕೆ ನೀಡಿದ ಬೆಂಬಲಕ್ಕಾಗಿ ಅಫ್ಘಾನಿಸ್ತಾನದ ರಾಯಭಾರಿ ಮತ್ತು ರಾಜತಾಂತ್ರಿಕರು ಭಾರತ ಹಾಗೂ ಭಾರತ ಸರ್ಕಾರಕ್ಕೆ ತಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ" ಎಂದು ತಿಳಿಸಿದೆ.

  • Press Statement
    FOR IMMEDIATE RELEASE
    Date: 30th September, 2023

    Afghanistan is closing its Embassy in New Delhi.

    The Embassy of the Islamic Republic of Afghanistan in New Delhi regrets to announce the decision to cease its operations, effective October 1, 2023. pic.twitter.com/BXesWPdLFP

    — Afghan Embassy India (@AfghanistanInIN) September 30, 2023 " class="align-text-top noRightClick twitterSection" data=" ">

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ವಿಶ್ವದಾದ್ಯಂತ ಆಫ್ಘನ್ ರಾಯಭಾರ ಕಚೇರಿಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ ಎಂಬುದು ಗಮನಾರ್ಹ ಅಂಶ. ಇಲ್ಲಿಯವರೆಗೆ ರಾಯಭಾರಿ ಕಚೇರಿಯ ಕೆಲಸವನ್ನು ಮಾಜಿ ಅಧ್ಯಕ್ಷ ಅಶ್ರಫ್ ಘನಿ ಅವರ ಅವಧಿಯಲ್ಲಿ ನೇಮಕಗೊಂಡ ರಾಯಭಾರಿ ಫರೀದ್ ಮಾಮುಂಜಾಯ್ ನೋಡಿಕೊಳ್ಳುತ್ತಿದ್ದರು. ಆದರೆ, ಕಳೆದ ಮೂರು ತಿಂಗಳಿಂದ ಅವರ ಕುರುಹುಗಳೇ ಇರಲಿಲ್ಲ. ಬಳಿಕ ಅವರು ಲಂಡನ್‌ನಲ್ಲಿದ್ದಾರೆ ಎಂದು ಹೇಳಲಾಗಿತ್ತು.

ಇದನ್ನೂ ಓದಿ : ಷರತ್ತುಗಳ ಮೇಲೆ ಹೆಣ್ಣುಮಕ್ಕಳು ಶಾಲೆಗೆ ಹೋಗಬಹುದು : ತಾಲಿಬಾನ್ ಅಧಿಕಾರಿ

ಇನ್ನು ಇತರೆ ರಾಯಭಾರಿ ಅಧಿಕಾರಿಗಳು ಬ್ರಿಟನ್ ಮತ್ತು ಇತರೆ ಕೆಲವು ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ, ಭಾರತವು ಕಾಬೂಲ್‌ಗೆ ಸಹಾಯ ನೀಡುವುದನ್ನು ಮುಂದುವರೆಸಿದೆ. ಭಾರತವು ಕಾಬೂಲ್‌ನಲ್ಲಿ ತಾಲಿಬಾನ್‌ನೊಂದಿಗೆ ಸಂಪರ್ಕವನ್ನು ಉಳಿಸಿಕೊಂಡಿದೆ ಮತ್ತು ಮಾನವೀಯ ಆಧಾರದ ಮೇಲೆ ಅವರಿಗೆ ನೆರವು ನೀಡುವ ಪ್ರಕ್ರಿಯೆಯನ್ನು ಮುಂದುವರೆಸಿದೆ.

ಇದನ್ನೂ ಓದಿ : ಬೆಂಗಳೂರಲ್ಲಿ ಅಫ್ಘಾನ್​ ವಿದ್ಯಾರ್ಥಿಗಳ ಅಡ್ಡಗಟ್ಟಿ ಮೊಬೈಲ್ ಸುಲಿಗೆ . . ನಾಲ್ವರು ಆರೋಪಿಗಳು ಅಂದರ್​

ರಾಜತಾಂತ್ರಿಕ ಸಂಬಂಧಗಳ ವಿಯೆನ್ನಾ ಒಪ್ಪಂದದ (1961) ಕಲಂ 45 ರ ಪ್ರಕಾರ, ರಾಯಭಾರ ಕಚೇರಿಯ ಎಲ್ಲಾ ಆಸ್ತಿಯನ್ನು ರಾಯಭಾರ ಕಚೇರಿ ಕಾರ್ಯನಿರ್ವಹಿಸುತ್ತಿರುವ ದೇಶಕ್ಕೆ ನೀಡಲಾಗುವುದು ಎಂದು ಆಫ್ಘನ್ ರಾಯಭಾರ ಕಚೇರಿ ತಿಳಿಸಿದೆ. ಇನ್ನು ಈ ಹಿಂದೆಯೇ ಸೆಪ್ಟೆಂಬರ್ 30 ರೊಳಗೆ ರಾಯಭಾರ ಕಚೇರಿಯನ್ನು ಮುಚ್ಚುವಂತೆ ಅಫ್ಘಾನ್ ರಾಯಭಾರ ಕಚೇರಿಯೊಳಗಿನ ಮಿಷನ್ ಬುಧವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ (MEA) ಪತ್ರವನ್ನು ಕಳುಹಿಸಿದೆ ಎಂದು ಮೂಲಗಳಿಂದ ಮಾಹಿತಿ ಹೊರಬಿದ್ದಿತ್ತು.

ಇದನ್ನೂ ಓದಿ : ಅಫ್ಘಾನಿಸ್ತಾನ ಪ್ರಜೆಯಾಗಿದ್ದರೂ ಅರಳು ಹುರಿದಂತೆ ಕನ್ನಡ ಮಾತನಾಡ್ತಾರೆ ಈ ವ್ಯಕ್ತಿ - ವಿಡಿಯೋ ವೈರಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.