ETV Bharat / bharat

ಆದಿತ್ಯ ಎಲ್​1 ಶೀಘ್ರದಲ್ಲೇ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್‌ನಿಂದ ಚಿತ್ರಗಳನ್ನು ಕಳುಹಿಸಲಿದೆ: ವಿಜ್ಞಾನಿ ತ್ರಿಪಾಠಿ - ಅಲಹಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯ

Aditya L1- Solar Ultraviolet Imaging Telescope: ಅಲಹಾಬಾದ್ ಸೆಂಟ್ರಲ್ ಯೂನಿವರ್ಸಿಟಿಯ ಭೌತಶಾಸ್ತ್ರ ವಿಭಾಗದಲ್ಲಿ ಆದಿತ್ಯ ಎಲ್1 ಮಿಷನ್ ಮೇಲೆ ಕೇಂದ್ರೀಕರಿಸಿದ ಸೌರ ಖಗೋಳಶಾಸ್ತ್ರ ವಿಷಯದ ಕುರಿತು ಮೂರು ದಿನಗಳ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಆದಿತ್ಯ ಎಲ್1ನಲ್ಲಿ ಅಳವಡಿಸಲಾಗಿರುವ ಸೂಟ್ ಪೇಲೋಡ್ ಸೋಲಾರ್ ಅಲ್ಟ್ರಾವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್‌ನ ಸೃಷ್ಟಿಮಾಡಿರುವ ವಿಜ್ಞಾನಿ ಪ್ರೊ.ದುರ್ಗೇಶ್ ತ್ರಿಪಾಠಿ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

Aditya L1 Solar Ultraviolet Imaging Telescope
ಆದಿತ್ಯ ಎಲ್​1 ಶೀಘ್ರದಲ್ಲೇ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್‌ನಿಂದ ಚಿತ್ರಗಳನ್ನು ಕಳುಹಿಸಲಿದೆ: ವಿಜ್ಞಾನಿ ದುರ್ಗೇಶ್ ತ್ರಿಪಾಠಿ
author img

By ETV Bharat Karnataka Team

Published : Dec 5, 2023, 9:28 AM IST

Updated : Dec 5, 2023, 1:10 PM IST

ಪ್ರಯಾಗರಾಜ್ (ಉತ್ತರ ಪ್ರದೇಶ): ಅಲಹಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದಲ್ಲಿ ಆದಿತ್ಯ ಎಲ್1 ಮಿಷನ್ ಮೇಲೆ ಕೇಂದ್ರೀಕರಿಸಿದ ಸೌರ ಖಗೋಳಶಾಸ್ತ್ರ ವಿಷಯದ ಕುರಿತು ಮೂರು ದಿನಗಳ ಕಾರ್ಯಕ್ರಮ ಆಯೋಜಿಸಲಾಗಿದೆ. ಆದಿತ್ಯ ಎಲ್ 1ನೊಂದಿಗೆ ಇರುವ ಸೂಟ್ ಪೇಲೋಡ್ ಸೋಲಾರ್ ಅಲ್ಟ್ರಾವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್‌ ಅನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿ ಪ್ರೊ. ದುರ್ಗೇಶ್ ತ್ರಿಪಾಠಿ ಅವರು ಸೂರ್ಯ ಮತ್ತು ನೇರಳಾತೀತ ಕಿರಣಗಳಿಗೆ ಸಂಬಂಧಿಸಿದ ರಹಸ್ಯಗಳ ಬಗ್ಗೆ ಮಾಹಿತಿ ನೀಡಿದರು. ಅಲಹಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ 28 ವಿದ್ಯಾರ್ಥಿಗಳು, ದೇಶದ ವಿವಿಧ ರಾಜ್ಯಗಳ 22 ವಿದ್ಯಾರ್ಥಿಗಳು ಸೆಮಿನಾರ್‌ನಲ್ಲಿ ಭಾಗವಹಿಸಿದ್ದರು.

ವಿಚಾರ ಸಂಕಿರಣದಲ್ಲಿ ಪ್ರೊ.ದುರ್ಗೇಶ್ ತ್ರಿಪಾಠಿ ಮಾತನಾಡಿ, ಸೂರ್ಯನಿಂದ ಹೊರಹೊಮ್ಮುವ ನೇರಳಾತೀತ ಕಿರಣಗಳು ಮಾನವನ ಮತ್ತು ವಾತಾವರಣದ ಮೇಲೆ ಹೇಗೆ ಪರಿಣಾಮ ಬೀರುತ್ತವೆ. ಸೂರ್ಯನ ಸುತ್ತ ಬೀಸುವ ಸೌರ ಮಾರುತಗಳು ಹಾಗೂ ಸೂರ್ಯನ ಕಲೆಗಳ ಕುರಿತು ಸಮಗ್ರವಾದ ಮಾಹಿತಿ ನೀಡಿದರು. ಈ ವಿಚಾರ ಸಂಕಿರಣದ ಮೂಲಕ ವಿದ್ಯಾರ್ಥಿಗಳು ಸೂರ್ಯನ ಬಗ್ಗೆ ಅಧ್ಯಯನ ಮಾಡಲು ಪ್ರೇರೇಪಿಸಲಾಗುವುದು ಎಂದು ಅವರು ತಿಳಿಸಿದರು.

ಸೂಟ್ ಪೇಲೋಡ್​ನಿಂದ ಮಹತ್ವದ ಮಾಹಿತಿ ಶೀಘ್ರವೇ ಲಭ್ಯ: ''ಆದಿತ್ಯ ಎಲ್​1ನೊಂದಿಗೆ ಬಾಹ್ಯಾಕಾಶಕ್ಕೆ ಹೋಗಿರುವ ಸೂಟ್ ಪೇಲೋಡ್ ಸೂರ್ಯನಿಂದ ಹೊರಹೊಮ್ಮುವ ನೇರಳಾತೀತ ಕಿರಣಗಳ ಬಗ್ಗೆ ಅಧ್ಯಯನ ಮಾಡುತ್ತದೆ. ಸೂಟ್ ಪೇಲೋಡ್ ಶೀಘ್ರದಲ್ಲೇ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತದೆ. ಇಲ್ಲಿಯವರೆಗೆ, ಸೂಟ್ ಪೇಲೋಡ್​ನಲ್ಲಿರುವ ಸ್ವಿಚ್ಡ್​ ಆನ್ ಮಾಡುವ ಮೂಲಕ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಜೊತೆಗೆ ಹೊರಗಿನ ಸ್ವಿಚ್ ಆನ್ ಮಾಡುವ ಮೂಲಕ ಶೀಘ್ರದಲ್ಲೇ ನೀವು ಯಶಸ್ವಿ ಫಲಿತಾಂಶಗಳನ್ನು ನೋಡುತ್ತೀರಿ.

ಹೊರಗಿನ ಸ್ವಿಚ್ ಆನ್ ಮಾಡಿದ ನಂತರ, ಸೂಟ್‌ನ ಹೊರಗಿನ ಚಿತ್ರಗಳು (ಸೋಲಾರ್ ಅಲ್ಟ್ರಾವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್) ಉಪಗ್ರಹದ ಮೂಲಕ ವಿಜ್ಞಾನಿಗಳನ್ನು ತಲುಪಲು ಪ್ರಾರಂಭಿಸುತ್ತವೆ. ಸೂರ್ಯ ಮತ್ತು ಅದರ ವಿಷಯಗಳನ್ನು ಅಧ್ಯಯನ ಮಾಡುವವರಿಗೆ ಇದು ತುಂಬಾ ಉಪಯುಕ್ತವಾಗಿದೆ ಎಂದು ಸಾಬೀತುಪಡಿಸುತ್ತದೆ'' ಎಂದು ಪ್ರೊ.ದುರ್ಗೇಶ್ ತ್ರಿಪಾಠಿ ತಿಳಿಸಿದರು. ಜೊತೆಗೆ ಆರು ಮಂದಿ ತಜ್ಞರು ಸೂರ್ಯನಿಗೆ ಸಂಬಂಧಿಸಿದ ಮಾಹಿತಿ ನೀಡಿದ್ದಾರೆ.

''ತಮ್ಮ ತಂಡವು ಸಿದ್ಧಪಡಿಸಿದ ಸೋಲಾರ್ ಅಲ್ಟ್ರಾವೈಲೆಟ್ ಇಮೇಜಿಂಗ್ ಟೆಲಿಸ್ಕೋಪ್ ಸೂಟ್ ನಿರ್ಮಿಸಲು ಹತ್ತು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಇದೀಗ ಇವರು ತಯಾರಿಸಿದ ಸೂಟ್ ಪೇಲೋಡ್​ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರೇ ತಯಾರಿಸಿರುವ ಸೂಟ್​ನ ನೆರವಿನಿಂದ ಸೂರ್ಯನಿಗೆ ಸಂಬಂಧಿಸಿದ ಇನ್ನೂ ಹಲವು ಹೊಸ ಮಾಹಿತಿಗಳನ್ನು ದೇಶಕ್ಕೆ ಹಾಗೂ ಜಗತ್ತಿಗೆ ತಲುಪಿಸಬಹುದು ಎಂಬ ಭರವಸೆ ಅವರ ಮನದಲ್ಲಿ ಮೂಡಿದೆ'' ಎಂದು ಪ್ರೊ.ದುರ್ಗೇಶ್ ತ್ರಿಪಾಠಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಆದಿತ್ಯ ಎಲ್1ನ ಸೋಲಾರ್ ವಿಂಡ್ ಪಾರ್ಟಿಕಲ್ ಎಕ್ಸ್‌ಪೆರಿಮೆಂಟ್ ಪೇಲೋಡ್​ನ ಕಾರ್ಯಾಚರಣೆ ಆರಂಭ: ಇಸ್ರೋ

Last Updated : Dec 5, 2023, 1:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.